ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಅಂತ ನನಗೆ ಸಿಕ್ಕಿರುವ ಮಾಹಿತಿ : ನಟ ಶ್ರೀಮುರಳಿ

By
1 Min Read

ಸ್ಪಂದನಾ (Spandana) ಸಾವಿನ ವಿಚಾರ ಕುರಿತಂತೆ ನಟ ಶ್ರೀಮುರಳಿ ಪ್ರತಿಕ್ರಿಯೆ ನೀಡಿದ್ದು,’ಅಣ್ಣ ನನಗೆ ಕಾಲ್ ಮಾಡಿ ಹೇಳಿದ್ದು ಇಷ್ಟೆ. ಅತ್ತಿಗೆ ಮಲಗಿದವರು ಎದ್ದೇಳಲಿಲ್ಲ ಅಂತ. ಆಮೇಲೆ ಏನಾಯಿತು ಎನ್ನುವುದರ ಕುರಿತು ನಾಳೆಯೇ ಸ್ಪಷ್ಟತೆ ಸಿಗಲಿದೆ. ಅತ್ತಿಗೆಯ ಅಗಲಿಕೆ ಆಘಾತ ಮೂಡಿಸಿದೆ’ ಎಂದು ಹೇಳಿದರು.

ಸ್ಪಂದನಾ ಅವರು ಸಂಬಂಧಿಗಳ ಜೊತೆ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಮುಗಿಸಿಕೊಂಡು ವಿಜಯ ರಾಘವೇಂದ್ರ (Vijaya Raghavendra) ಕೂಡ ಅವರೊಂದಿಗೆ ಭಾಗಿಯಾಗಿದ್ದರು. ನಿನ್ನೆಯಷ್ಟೇ ಸ್ಪಂದನಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸರಿಯಾದ ಮಾಹಿತಿ ಇನ್ನೂ ಅವರ ಕುಟುಂಬಕ್ಕೆ ತಲುಪಿಲ್ಲ.

 

ಈಗಾಗಲೇ ವಿಜಯ ರಾಘವೇಂದ್ರ ಕುಟುಂಬ ಮತ್ತು ಸ್ಪಂದನಾ ಅವರ ಕುಟುಂಬ ಬ್ಯಾಂಕಾಕ್ (Bangkok)ಗೆ ತೆರಳಿದೆ.  ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ನಾಲ್ಕು ದಿನಗಳ ಹಿಂದೆಯಷ್ಟೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವರು ತನ್ನ ಕಾಲೇಜು ಸ್ನೇಹಿತರೊಂದಿಗೆ ಥಾಯ್ ಲ್ಯಾಂಡ್‍ಗೆ ಪ್ರವಾಸ ಹೋಗಿದ್ದರು. ಭಾನುವಾರ ಸಂಜೆ ಶಾಫಿಂಗ್ ಮುಗಿಸಿ ಹೋಟೇಲ್ ನತ್ತ ಹೋಗಬೇಕಾದರೆ ಸ್ಪಂದನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ನೇಹಿತರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸ್ಪಂದನಾ ಮೃತಪಟ್ಟಿರುವುದಾಗಿ (Passedway) ವೈದ್ಯರು ತಿಳಿಸಿದ್ದಾರೆ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್