ಕೊನೆಗೂ ರಿವೀಲ್‌ ಆಯ್ತು ನಟಿ ಇಲಿಯಾನಾ ಮದುವೆ ಗುಟ್ಟು

Public TV
2 Min Read

ಬಾಲಿವುಡ್ (Bollywood) ಬ್ಯೂಟಿ ಇಲಿಯಾನಾ(Ileana)  ಅವರು ಆಗಸ್ಟ್ 1ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತಸದ ಸುದ್ದಿ ರಿವೀಲ್ ಆಗಿರುವ ಬೆನ್ನಲ್ಲೇ ನಟಿಯ ಬಗ್ಗೆ ಮತ್ತೊಂದು ಬ್ಲಾಸ್ಟಿಂಗ್ ಸುದ್ದಿಯೊಂದು ಸಿಕ್ಕಿದೆ. ಇಲಿಯಾನಾ ಮದುವೆಯಾಗಿರುವ ಬಗ್ಗೆ ನಯಾ ಖಬರ್ ಸಿಕ್ಕಿದೆ. ಸಿನಿಮಾರಂಗ, ಅಭಿಮಾನಿಗಳು ಸೇರಿದಂತೆ ಅನೇಕರು ಇಲಿಯಾನಾ ಮದುವೆಯಾಗಿಲ್ಲ ಎಂದು ಭಾವಿಸಿದ್ದರು. ಆದರೆ ಈ ಸುದ್ದಿಗೆ ಈಗ ನಯಾ ಟ್ವಿಸ್ಟ್‌ ಸಿಕ್ಕಿದೆ. ಮದುವೆಯಾಗಿದ್ರೂ (Wedding) ನಟಿ ಸುಮ್ಮನೆ ಇರೋದ್ಯಾಕೆ? ಎಂಬ ಅನುಮಾನ ಎಲ್ಲರನ್ನೂ ಕಾಡ್ತಿದೆ. ಇಲ್ಲಿದೆ ಮಾಹಿತಿ.

ಇಲಿಯಾನಾ ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದಾರೆ. ಈ ವಿಚಾರವನ್ನ ತಡವಾಗಿ ರಿವೀಲ್ ಮಾಡಿದ್ದಾರೆ. ಕೋವಾ ಫೀನಕ್ಸ್ ಡೋಲನ್ (Koa Phoenix Dolan) ಎಂದು ಮಗುವಿಗೆ ಹೆಸರಿಟ್ಟಿದ್ದಾರೆ. ಮಗುವಿನ ಜನನದ ವಿಚಾರ ಹೇಳ್ತಿದ್ದಂತೆ, ಮಗುವಿನ ತಂದೆ ಯಾರು ರಿವೀಲ್ ಮಾಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.

ಜಗತ್ತಿಗೆ ತಮ್ಮ ಖಾಸಗಿ ಬದುಕಿನ ಬಗ್ಗೆ ಎಲ್ಲೂ ರಿವೀಲ್ ಮಾಡದೇ ಗುಟ್ಟಾಗಿ ಇಟ್ಟಿದ್ದಾರೆ ಇಲಿಯಾನಾ. ಮದುವೆಯಾಗದೇ ಮಗುವಿನ ತಾಯಿಯಾಗ್ತಿದ್ದಾರೆ ಎಂದೇ ಈ ಬಗ್ಗೆ ಸುದ್ದಿಯಾಗಿತ್ತು. ಈಗ ಆಂಗ್ಲ ಮಾಧ್ಯಮವೊಂದು, ಇಲಿಯಾನಾಗೆ ಈಗಾಗಲೇ ಮದುವೆಯಾಗಿದ್ದಾರೆಂದು ಎಂದು ಮದುವೆ ಡೇಟ್ ಸಹಿತ ವರದಿ ಮಾಡಿದ್ದಾರೆ. ಇದನ್ನೂ ಓದಿ:ಕೆರಿಯರ್‌ನಲ್ಲಿ ಪ್ರಚಾರ ಬೇಕು ಅಂದ್ರೆ ಇದನ್ನೆಲ್ಲಾ ಮಾಡಬೇಕು- ತಮನ್ನಾ ಭಾಟಿಯಾ

ಮೈಕಲ್ ಡೋಲನ್ (Michael Dolan) ಎಂಬುವವರ ಜೊತೆ ಇಲಿಯಾನಾ ಮೇ 13, 2023ರಂದು ವಿವಾಹವಾಗಿದ್ದಾರೆ ಎಂದು ರಿವೀಲ್ ಆಗಿದೆ. ಆದರೆ ಅಧಿಕೃತ ಮದುವೆ ಬಗ್ಗೆ ಯಾವುದನ್ನ ನಟಿ ತಿಳಿಸಿಲ್ಲ. ಕಳೆದ ತಿಂಗಳು ತನ್ನ ಮಸ್ಟರಿ ಮ್ಯಾನ್ ಮೈಕಲ್ ಫೋಟೋವನ್ನ ನಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಆತನ ಪರಿಚಯವನ್ನ ನಟಿ ತಿಳಿಸಿರಲಿಲ್ಲ. ಮುಂದಿನ ದಿನಗಳಲ್ಲಿ ತಮ್ಮ ಮದುವೆ ಮಾತನಾಡುತ್ತಾರಾ? ಮೇ 13ರಂದು ಮದುವೆ ಆಗಿರೋದು ನಿಜಾನಾ ಈ ಎಲ್ಲದರ ಬಗ್ಗೆ ಇಲಿಯಾನಾ ಅಧಿಕೃತ ಸ್ಪಷ್ಟನೆ ನೀಡುವವರೆಗೂ ಕಾಯಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್