ನಟ, ನಿರ್ದೇಶಕ ಟಿ.ಎಸ್ ನಾಗಾಭರಣಗೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್

Public TV
1 Min Read

ನ್ನಡ ಚಿತ್ರರಂಗದ ಹೆಸರಾಂತ ನಟ, ನಿರ್ದೇಶಕ ನಾಗಾಭರಣ (Nagabharana) ಅವರು ತುಮಕೂರು(Tumkur) ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಆಗಸ್ಟ್ 7ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ (Doctorate) ಪ್ರದಾನ ಮಾಡಲಾಗುವುದು. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

ನಿರ್ದೇಶಕ ನಾಗಾಭರಣ ಹಾಗೂ ಸಮಾಜ ಸೇವಕ ಆರ್‌.ಎಲ್ ರಮೇಶ್‌ಬಾಬು (R.L Ramesh Babu) ಅವರು ತುಮಕೂರು ವಿವಿಯ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಆಗಸ್ಟ್ 7ರಂದು ನಡೆಯಲಿರುವ ವಿವಿ ಘಟಿಕೋತ್ಸವದಲ್ಲಿ ಇವರಿಬ್ಬರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಕನ್ನಡ ಸಿನಿಮಾ, ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿರುವ ಟಿ. ಎಸ್. ನಾಗಾಭರಣ ಅವರು 35ಕ್ಕಿಂತ ಹೆಚ್ಚು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ.

ಸಂತ ಶಿಶುನಾಳ ಶರೀಫ, ಚಿನ್ನಾರಿ ಮುತ್ತ, ನಾಗಮಂಡಲ, ಸಿಂಗಾರೆವ್ವ, ಕಲ್ಲರಳಿ ಹೂವಾಗಿ, ಅಲ್ಲಮ ಮುಂತಾದ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ನಾಗಾಭರಣ ಅವರು ಪ್ರೇಕ್ಷಕರ ಮನಗೆದ್ದಿದ್ದಾರೆ.

ಹಾಗೆಯೇ ಗೌರವ ಡಾಕ್ಟರೇಟ್‌ಗೆ ಭಾಜನರಾಗುತ್ತಿರುವ ತುಮಕೂರು ಮೂಲದ ರಮೇಶ್‌ಬಾಬು ಸಮಾಜ ಸೇವಕರು ಹಾಗೂ ಕೈಗಾರಿಕೋದ್ಯಮಿಗಳು. ತಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪದಿಂದ ಭಗವಾನ್ ರೈಸ್ ಮಿಲ್, ಭಗವತಿ ಭಗವಾನ್ ರೈಸ್ ಮಿಲ್ ಮತ್ತು ರಾಜಲಕ್ಷಿ ಆಗ್ರೊ ಫುಡ್ಸ್ ಹೆಮ್ಮೆಯ ಮಾಲೀಕರಾದರು. ಈ ಮೂಲಕ 150ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗವನ್ನು ಕಲ್ಪಿಸಿದ್ದಾರೆ.

ತುಮಕೂರು ವಿವಿ ವತಿಯಿಂದ ಗೌರವ ಡಾಕ್ಟರೇಟ್‌ಗೆ ಆಯ್ಕೆ ಮಾಡಲು ನೇಮಿಸಿದ್ದ ಸಮಿತಿಯ ಶಿಫಾರಸಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಆಗಸ್ಟ್ 7ರಂದು ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್‌ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಕುಲಪತಿ ಪ್ರೊ. ವೆಂಕಟೇಶ್ವರಲು ತಿಳಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್