ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಫೈಟ್ – ಲಾಡ್ಜ್‌ನಲ್ಲಿ ತಂಗಿದ್ದ ನಾಲ್ವರು ಸದಸ್ಯರ ಕಿಡ್ನ್ಯಾಪ್

Public TV
2 Min Read

ಕಲಬುರಗಿ: ಚಿಂಚೋಳಿಯ ಐನೋಳ್ಳಿ ಗ್ರಾಮ ಪಂಚಾಯತಿಯ (Gram Panchayat) ನಾಲ್ವರು ಸದಸ್ಯರನ್ನು ಮಹಾರಾಷ್ಟ್ರದ ಪುಣೆಯ ಲಾಡ್ಜ್‌ನಿಂದ ಅಪಹರಿಸಿದ ಪ್ರಕರಣ ನಡೆದಿದೆ. ಅಪಹರಣದ ವೀಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಅವರ ಹುಡುಕಾಟ ನಡೆಸಲಾಗುತ್ತಿದೆ.

18 ಸದಸ್ಯರನ್ನೊಳಗೊಂಡಿರುವ ಐನೊಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಬಿಜೆಪಿ (BJP) ಬೆಂಬಲಿತ 11 ಸದಸ್ಯರು ಕಳೆದ 15 ದಿನಗಳಿಂದ ಪ್ರವಾಸದಲ್ಲಿದ್ದರು. ಅದರಲ್ಲಿ 6 ಜನ ಸದಸ್ಯರು ಶುಕ್ರವಾರ ಪುಣೆಯ ಲಾಡ್ಜ್ ಒಂದರಲ್ಲಿ ತಂಗಿದ್ದರು. ರಾತ್ರಿ ವೇಳೆ ಹತ್ತಕ್ಕೂ ಹೆಚ್ಚು ಜನ ಲಾಡ್ಜ್‌ಗೆ ನುಗ್ಗಿ ಎಲ್ಲಾ ಸದಸ್ಯರನ್ನು ಅಪಹರಿಸಿದ್ದಾರೆ. ಬಳಿಕ ಶಶೇಂದ್ರ ಕುಮಾರ್ ಮತ್ತು ಶೇಖ್ ಭಕ್ತಿಯಾರ್ ಜಾಗೀರ್ದಾರ್ ಎಂಬವರನ್ನು ಪುಣೆಯ ಹೈವೇಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಬ್ಬರೇ ಸತ್ಯಹರಿಶ್ಚಂದ್ರರು.. ಒಬ್ರು ಹೆಚ್‍ಡಿಕೆ ಇನ್ನೊಬ್ರು ಬೊಮ್ಮಾಯಿ: ಹೆಚ್.ವಿಶ್ವನಾಥ್ ವ್ಯಂಗ್ಯ

ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಸದಸ್ಯರ ನಡುವೆ ಪೈಪೋಟಿ ನಡೆಯುತ್ತಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರಾಗಲು 10 ಸದಸ್ಯರ ಬೆಂಬಲ ಬೇಕು. ಬಿಜೆಪಿ ಬೆಂಬಲಿತ ಒಟ್ಟು 11 ಸದಸ್ಯರು ಜೂನ್ 13 ರಂದು ಪ್ರವಾಸದಲ್ಲಿದ್ದರು. ಹೀಗಾಗಿ ಅಧ್ಯಕ್ಷ ಸ್ಥಾನ ಪಡೆಯಲು ಕೈ ನಾಯಕರು ಸದಸ್ಯರನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಶಶೇಂದ್ರ ಕುಮಾರ್ ಹಾಗೂ ಶೇಖ್ ಭಕ್ತಿಯಾರ್ ಜಾಗೀರ್ದಾರ್ ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ನಮ್ಮ ಬಳಿ ಇದ್ದ ಹಣ ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ. ಅಲ್ಲದೇ ಅಪಹರಣಕಾರರು ಹಲ್ಲೆ ಮಾಡಿ ಪೊಲೀಸರು ನಮ್ಮವರೇ ಏನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಬೆದರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈ ಸಂಬಂಧ ಪುಣೆಯ ಚಿಕ್ಲಿ ಪೊಲೀಸ್ (Police) ಠಾಣೆಯಲ್ಲಿ ಐಪಿಸಿ ಸೆಕ್ಷನ್ 391 (ದರೋಡೆ), ಐಪಿಸಿ 356 (ಅಪಹರಣ) ಐಪಿಸಿ 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಡಿಜಿ-ಐಜಿಪಿಯಾಗಿ ಅಲೋಕ್‌ ಮೋಹನ್‌ ನೇಮಕ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್