ಬೇಲ್ ಮೇಲೆ ರಿಲೀಸ್ ಆಗ್ತಿದ್ದಂತೆ ರೌಡಿಶೀಟರ್ ಮರ್ಡರ್ – ಮಗ ಬರ್ತಾನೆ ಅಂತ ಮಟನ್ ಚಾಪ್ಸ್ ಮಾಡ್ತಿದ್ಲು ತಾಯಿ!

By
2 Min Read

ಬೆಂಗಳೂರು: ಜೈಲಿನಿಂದ ಜಾಮೀನಿನ ಮೇಲೆ ರಿಲೀಸ್ ಆಗುತ್ತಿದ್ದಂತೆ ರೌಡಿಶೀಟರ್ ಸಿದ್ದಾಪುರ ಮಹೇಶ್ ನಡುರಸ್ತೆಯಲ್ಲೇ ಭೀಕರವಾಗಿ ಹತ್ಯೆಯಾಗಿದ್ದಾನೆ. ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಮತ್ತವನ ಗ್ಯಾಂಗ್ ಭೀಕರವಾಗಿ ಆತನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಪರಪ್ಪನ ಅಗ್ರಹಾರದ (Parappana Agrahara) ಬಳಿ ನಡೆದಿದೆ.

ರೌಡಿ ಮಹೇಶ್ ಕೊಲೆ, ಕೊಲೆ ಯತ್ನ, ಸುಫಾರಿಯಂತಹ ಹಲವು ಕೇಸ್‍ನಲ್ಲಿ ಭಾಗಿಯಾಗಿದ್ದ. ಕೊಲೆ ಕೇಸ್‍ನಲ್ಲಿ ಜೈಲಿನಲ್ಲಿದ್ದ ಮಹೇಶ್, ಜಾಮೀನು ಪಡೆದು ಶುಕ್ರವಾರ ರಾತ್ರಿ ಹೊರ ಬಂದಿದ್ದ. ಬಳಿಕ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ರೌಡಿ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ಸಿದ್ದಾಪುರ ಸುನೀಲ್ ಮತ್ತು ಗ್ಯಾಂಗ್ ಅಡ್ಡಹಾಕಿ ಲಾಂಗ್‍ನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಚಂದ್ರನಿಗೆ ಹತ್ತಿರ.. ಹತ್ತಿರ..; ಇಂದು ಚಂದ್ರನ ಕಕ್ಷೆಗೆ ಇಸ್ರೋ ಬಾಹ್ಯಾಕಾಶ ನೌಕೆ – ಮುಂದೇನು?

ಮಹೇಶ್ ರಾತ್ರಿ 9:20ರ ವೇಳೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇದ್ದ. ಬಳಿಕ 9:45ರ ಸಮಯಕ್ಕೆ ಹೊಸೂರ್ ರೋಡ್ ಸಿಗ್ನಲ್ ಬಳಿಗೆ ಬಂದಿದ್ದಾನೆ. ಈ ವೇಳೆ ಏಕಾಏಕಿ ಕಾರಿಗೆ ಅಡ್ಡಬಂದಿದ್ದ ಆರೇಳು ಜನರು ಗುಂಪು ಮಚ್ಚು ಬೀಸಿದ್ದಾರೆ. ಈ ವೇಳೆ ಮಹೇಶ್ ಕಾರಿನಿಂದ ಇಳಿದು ವಾಪಾಸ್ ಹಿಂದಕ್ಕೆ ಓಡಲು ಪ್ರಯತ್ನ ಪಟ್ಟಿದ್ದಾನೆ. ಈ ವೇಳೆ ಸುಮಾರು ನೂರು ಮೀಟರ್‌ನಷ್ಟು ದೂರ ಅಟ್ಟಾಡಿಸಿ ನಡು ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿದ್ದಾರೆ.

2021 ರಲ್ಲಿ ವಿಲ್ಸನ್ ಗಾರ್ಡನ್ ನಾಗನ ಗೆಳೆಯ ಮದನ್ ಅಲಿಯಾಸ್ ಪಿಟೀಲ್‍ನನ್ನು ಇದೇ ಸಿದ್ದಾಪುರ ಮಹೇಶ್ ಮತ್ತವನ ಗ್ಯಾಂಗ್ ಬನಶಂಕರಿ ದೇವಾಲಯದ ಬಳಿ ಅಡ್ಡಹಾಕಿ ಕೊಚ್ಚಿ ಕೊಲೆ ಮಾಡಿದ್ದರು. ಇದೇ ಕಾರಣಕ್ಕೆ ನಾಗನಿಗೆ ಈ ಮಹೇಶ್‍ನನ್ನು ಮುಗಿಸುವ ಪ್ಲ್ಯಾನ್ ಮಾಡಿದ್ದ. ಹಾಗೆ ನಾಗನನ್ನು ಸಹ ಹೊಡೆಯೋದಕ್ಕೆ ಮಹೇಶ್ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಇದರ ನಡುವೆಯೇ ಜೂನ್‍ನಲ್ಲಿ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದ ಮಹೇಶ್ ತಾನು ಪ್ರೀತಿಸಿದ್ದ ಯುವತಿಯನ್ನು ಮದುವೆಯಾಗಿದ್ದ. ಬಳಿಕ ನಾಗನಿಂದ ಜೀವ ಭಯ ಇದೆ ಎಂದು ತಿಳಿದು ಹಳೆಯ ಕೇಸ್‍ನಲ್ಲಿ ಮತ್ತೆ ಜೈಲು ಸೇರಿದ್ದ.

ಮಹೇಶ್‍ನ ಕೊಲೆಯಾಗುವಾಗ ಸ್ಕೂಟರ್‌ನಲ್ಲಿ ಆತನ ಪತ್ನಿ ಕಾರಿನ ಹಿಂದೆಯೇ ಬರುತ್ತಿದ್ದಳು. ಇದೇ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ. ಅಲ್ಲದೇ ಮಗ ಬರುತ್ತಿದ್ದಾನೆ ಎಂದು ಆತನ ತಾಯಿ ಅವನಿಗೆ ಇಷ್ಟವಾದ ಮಟನ್ ಚಾಪ್ಸ್ ಮಾಡುತ್ತಿದ್ದಳು. ಇದೇ ವೇಳೆ ಆತ ಕೊಲೆಯಾಗಿರುವುದಾಗಿ ಕರೆ ಬಂದಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು (Police) ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹಕ್ಕಾ ನೂಡಲ್ಸ್ ಟೇಸ್ಟ್ ಮಾಡಿಲ್ಲ ಅಂದ್ರೆ ಇವತ್ತೇ ಟ್ರೈ ಮಾಡಿ..!

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್