ಸೈಲೆಂಟಾಗಿ ಇರದಿದ್ರೆ ನಿಮ್ಮ ಮನೆ ಮೇಲೆ ಇಡಿ ರೇಡ್- ಕೇಂದ್ರ ಸಚಿವೆ ಬೆದರಿಕೆ

By
1 Min Read

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ತಿದೆ ಎಂಬ ವಿಪಕ್ಷಗಳ ಆರೋಪ ಹೊಸದಲ್ಲ. ಗುರುವಾರ ಸಂಸತ್ ಸಾಕ್ಷಿಯಾಗಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Meenakshi Lekhi) ಆಡಿದ ಮಾತುಗಳು ಇದಕ್ಕೆ ಪೂರಕವಾಗಿವೆ.

ದೆಹಲಿ ಆಡಳಿತ ಸೇವೆಗಳ ನಿಯಂತ್ರಣ ವಿಧೇಯಕ ವಿರೋಧಿಸಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದ ಸಂದರ್ಭದಲ್ಲಿ ಸಿಟ್ಟಿಗೆದ್ದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ವಿಪಕ್ಷ ನಾಯಕರು ಸೈಲೆಂಟಾಗಿ ಇರದಿದ್ರೆ ಅವರ ಮನೆಗೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬರುತ್ತಾರೆ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ.

ಮೀನಾಕ್ಷಿ ಲೇಖಿಯ ಮಾತುಗಳು ರಾಷ್ಟ್ರ ರಾಜಕೀಯದಲ್ಲೀಗ ಸಂಚಲನ ಮೂಡಿಸಿವೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ತಿದೆ ಎಂಬ ನಮ್ಮ ಮಾತು ನಿಜ ಎಂದು ಕೇಂದ್ರ ಸಚಿವರೇ ಈಗ ಒಪ್ಕೊಂಡಿದ್ದಾರೆ. ಆವೇಶದಲ್ಲಿ ಮೀನಾಕ್ಷಿ ಲೇಖಿ ವಿಪಕ್ಷಗಳನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಎನ್‍ಸಿಪಿ ಹೇಳಿದೆ. ಇದನ್ನೂ ಓದಿ: ಏನೇ ಬಂದರೂ ನನ್ನ ಕರ್ತವ್ಯ ಹಾಗೆಯೇ ಇರಲಿದೆ: ಸುಪ್ರೀಂ ತೀರ್ಪಿಗೆ ರಾಗಾ ಪ್ರತಿಕ್ರಿಯೆ

ಈ ಸಂಬಂಧ ಯುವ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ಟ್ವೀಟ್ ಮಾಡಿ, ಇದು ಎಚ್ಚರಿಕೆನಾ? ಬೆದರಿಕೆನಾ ಎಂದು ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ಸೇರಿ ಹಲವು ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್