ಒಂದೇ ಕುಟುಂಬದ ನಾಲ್ವರ ಸಾವು ಪ್ರಕರಣ- ಪತ್ನಿ ಶವದ ಜೊತೆ 24 ಗಂಟೆ ಕಳೆದಿದ್ದ ಟೆಕ್ಕಿ!

Public TV
2 Min Read

ಬೆಂಗಳೂರು: ನಾಲ್ಕು ದಿನದ ಹಿಂದೆಯೇ ಹೆಂಡ್ತಿ ಕೊಲೆ ಮಾಡಿದ್ದ ಟೆಕ್ಕಿ, ಪುಟ್ಟ ಮಕ್ಕಳೊಂದಿಗೆ ಹೆಂಡ್ತಿ ಶವದ ಜೊತೆ ಒಂದು ದಿನ ಕಾಲ ಕಳೆದಿದ್ದ. ಮಕ್ಕಳು ಅಳಲಾರಂಭಿಸದ್ರಿಂದ ಮಕ್ಕಳನ್ನೂ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬೇರೆ ದಾರಿಯಿಲ್ಲದೆ ಕೊನೆಗೆ ಆತ್ಮಹತ್ಯೆ ದಾರಿ ಹಿಡಿದಿದ್ದ. ಕಾಡುಗೋಡಿ ಟೆಕ್ಕಿ ಫ್ಯಾಮಿಲಿ ಡೆತ್ ಕೇಸ್‍ನಲ್ಲಿ ಡೆವಲಪ್‍ಮೆಂಟ್ ಸ್ಟೋರಿ ಇಲ್ಲಿದೆ.

ಹೌದು. ಕಾಡುಗೋಡಿಯಲ್ಲಿ (Kadugodi Family Death case) ಇಬ್ಬರು ಮಕ್ಕಳು, ಹೆಂಡತಿಯನ್ನ ಕೊಂದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪೊಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ. ಎಫ್ ಎಸ್ ಎಲ್ ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆ ವೇಳೆ ಭಯಾನಕ ಸತ್ಯ ಹೊರಬಿದ್ದಿದ್ದು, ಟೆಕ್ಕಿ ವಿಜಯ್ ಹೆಂಡ್ತಿ ಹೇಮಾವತಿಯನ್ನ ಜುಲೈ 31ರಂದೇ ಕೊಲೆ ಮಾಡಿದ್ದಾನೆ. ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರೋದು ಮೇಲ್ನೋಟಕ್ಕೆ ಗೊತ್ತಾಗಿದೆ. ಹೆಂಡ್ತಿ ಕೊಲೆ ಮಾಡಿ 24 ಗಂಟೆಗಳ ಕಾಲ ಮಕ್ಕಳೊಂದಿಗೆ ಹೆಂಡ್ತಿ ಶವದ ಜೊತೆಯೇ ಕಾಲ ಕಳೆದಿದ್ದಾನೆ. ಮಕ್ಕಳು ಅಳೋದನ್ನ ನೋಡಿ ಕೊನೆಗೆ ಇಬ್ಬರು ಮಕ್ಕಳಾದ ಮೋಕ್ಷ ಹಾಗೂ ಸೃಷ್ಠಿಯನ್ನ ಕೊಲೆ ಮಾಡಿರೋ ಶಂಕೆಯಿದೆ. ಆ ಬಳಿಕ ವಿಧಿಯಿಲ್ಲದೆ ಟೆಕ್ಕಿ ವಿಜಯ್ (Techie Vijay) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಕ್ರೈಂ ಸೀನ್‍ಗೆ ಹೋದಾಗ ಮಕ್ಕಳು ಹಾಗೂ ಹೆಂಡತಿ ಶವ ನೆಲದ ಮೇಲೆ ಪತ್ತೆಯಾಗಿದ್ರೆ, ನೇಣು ಬಿಗಿದ ಸ್ಥಿತಿಯಲ್ಲಿ ವೀರಾರ್ಜುನ ವಿಜಯ್ ದೇಹ ಪತ್ತೆಯಾಗಿದೆ. ಹೇಮಾವತಿ ಮೃತದೇಹ ಡಿ ಕಾಂಪೋಸ್ ಸ್ಥಿತಿಯಲ್ಲಿ ಪತ್ತೆಯಾಗಿದ್ರೆ, ಉಳಿದ ಮೂವರ ಮೃತದೇಹಗಳು ಇನ್ನೂ ಡಿಕಾಂಪೋಸ್ ಸ್ಥಿತಿಗೆ ತಲುಪಿರಲಿಲ್ಲ.

ಟೆಕ್ಕಿ ವಿಜಯ್ ಪತ್ನಿ ಹೇಮಾವತಿ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿರುವ ಶಂಕೆಯಿದೆ. ಹೇಮಾವತಿ ಕತ್ತಿನ ಭಾಗದಲ್ಲಿ ಕೈ ಗುರುತುಗಳು ಬಿದ್ದಿದ್ದು, ದೇಹದ ಬಣ್ಣ ಬದಲಾಗಿದೆ. ಆಗಸ್ಟ್ 1ರಂದು ಹೆಂಡತಿಗೆ ಬಲವಂತವಾಗಿ ವಿಷ ಕೊಟ್ಟು, ಕತ್ತು ಹಿಸುಕಿ ಕೊಲೆ ಮಾಡಿರೋ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ಮಕ್ಕಳ ಕತ್ತನ್ನು ವೇಲಿನಿಂದ ಬಿಗಿದು ಇಬ್ಬರನ್ನು ಕೊಂದು ಅ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಮಾಡುವ ಮುನ್ನವೇ ಮೊಬೈಲ್‍ಗಳನ್ನ ಸ್ವಿಚ್ ಅಫ್ ಮಾಡಲಾಗಿದ್ದು, ಮೊಬೈಲ್ ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗಿದೆ. ಅಕ್ಕಪಕ್ಕದವರು ಹಾಗೂ ಕುಟುಂಬಸ್ಥರ ವಿಚಾರಣೆ ವೇಳೆಯೂ ಸಹ ಪೊಲೀಸರಿಗೆ ಸಾವುಗಳ ಹಿಂದಿನ ರಹಸ್ಯ ಗೊತ್ತಾಗಿಲ್ಲ.

ಒಟ್ಟಿನಲ್ಲಿ ನಾಲ್ವರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಎಫ್ ಎಸ್ ಎಲ್ ರಿಪೋರ್ಟ್ ಬಂದ ಬಳಿಕ ಇಡೀ ಕುಟುಂಬದ ಅವಸಾನಕ್ಕೆ ಕಾಆರಣ ಏನು ಅನ್ನೋದು ತಿಳಿಯಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್