ಭ್ರಷ್ಟರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಶಾಕ್- ಬೆಂಗಳೂರಿನ 45 ಕಡೆ ಏಕಕಾಲದಲ್ಲಿ ದಾಳಿ

By
1 Min Read

ಬೆಂಗಳೂರು: ಲೋಕಾಯುಕ್ತ (Lokayukta) ಭಾರೀ ದಾಳಿ ನಡೆಸಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್ ಒ, ಎಆರ್ ಒ, ಎಡಿಟಿಪಿ ಕಚೇರಿಗಳ ಮೇಲೆ ದಿನದ ಅಂತ್ಯದ ಹೊತ್ತಿಗೆ ಏಕಕಾಲದಲ್ಲಿ ರೇಡ್ ಮಾಡಿದೆ.

ಆರ್‍ಪಿಸಿ ಲೇಔಟ್, ಬ್ಯಾಟರಾಯನಪುರ, ಮಲ್ಲೇಶ್ವರಂನ ಕಂದಾಯ ಕಚೇರಿ, ಟೌನ್ ಪ್ಲಾನಿಂಗ್ ಕಚೇರಿ, ಯಟಿಲಿಟಿ ಬಿಲ್ಡಿಂಗ್‍ನಲ್ಲಿರುವ ಕಂದಾಯ ಕಚೇರಿ ಸೇರಿ ಒಟ್ಟು 45 ಕಡೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಅಧಿಕಾರಿಗಳು, ಸಿಬ್ಬಂದಿಯನ್ನು ಕಚೇರಿಯಲ್ಲಿಯೇ ಇರಿಸಿಕೊಂಡು ಶೋಧ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ಮಿಸ್ ವೆನೆಜುವೆಲಾ ದುರ್ಮರಣ

ಖುದ್ದು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ದಾಳಿಯ ನೇತೃತ್ವ ವಹಿಸಿದ್ದಾರೆ. ವಿಜಯನಗರ, ರಾಜಾಜಿನಗರ ಕಂದಾಯ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಖುದ್ದಾಗಿ ಕರೆ ಮಾಡಿ ಬಿಬಿಎಂಪಿ ಅಧಿಕಾರಿಗಳು ಲಂಚ ಕೇಳಿದ್ರಾ ಎಂದು ಕೇಳಿದ್ದಾರೆ. ನಿಮ್ಮ ಆಫೀಸ್‍ಗಳ ಮುಂದೆ ಬಂದು ನಿಂತ್ರೆ ರಕ್ತ ಹೀರುತ್ತಿದ್ದಾರೆ ಅಂತಾ ಜನ ಹೇಳ್ತಿದ್ದಾರೆ. ಇದಕ್ಕೆ ಏನಂತೀರಾ? ಎಂದು ಗರಂ ಆಗಿ ಪ್ರಶ್ನಿಸಿದ್ದಾರೆ. ತಪ್ಪುಗಳನ್ನು ತೋರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್