ಗ್ರಾಮ ಪಂಚಾಯತಿ ಅಧ್ಯಕ್ಷ ಚುನಾವಣೆ: ಟೂರ್ ಕಳಿಸಿದ ಆಕಾಂಕ್ಷಿಗೆ ಕೈ ಕೊಟ್ಟ ಸದಸ್ಯರು

Public TV
1 Min Read

ಮೈಸೂರು: ಗ್ರಾಮ ಪಂಚಾಯತಿ (Gram Panchayat) ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ (Election) ಅಧ್ಯಕ್ಷ ಆಕಾಂಕ್ಷಿಯೊಬ್ಬರು ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಿ ಕೈ ಸುಟ್ಟುಕೊಂಡ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ನಡೆದಿದೆ.

ಒಟ್ಟಿಗೆ ಪ್ರವಾಸಕ್ಕೆ 9 ಮಂದಿ ಸದಸ್ಯರು ಹೋಗಿದ್ದಾರೆ. ಆದರೆ ಪ್ರವಾಸಕ್ಕೆ ಕಳುಹಿಸದವರ ಪರವಾಗಿ ಬಂದಿದ್ದು 6 ಮತಗಳು ಮಾತ್ರ. ಸದಸ್ಯರು ಮಾತ್ರ ನಾವೆಲ್ಲಾ ನಿಮಗೆ ಮತ ಹಾಕಿದ್ದೇವೆ ಎಂದು ಕಪ್ಪಡಿ ರಾಜಪ್ಪಾಜಿ ಗದ್ದುಗೆಯಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಇದನ್ನೂ ಓದಿ: 5 ಡಜನ್‍ಗೂ ಹೆಚ್ಚು ಇನ್ಸ್‌ಪೆಕ್ಟರ್‌ ವರ್ಗಾವಣೆಗೆ ತಡೆ – ಆದೇಶಕ್ಕೆ ದಿಢೀರ್‌ ತಡೆ ಹಿಡಿದಿದ್ದು ಯಾಕೆ?

ಕೆ.ಆರ್ ನಗರ ಕ್ಷೇತ್ರದ ಸಾಲಿಗ್ರಾಮ ತಾಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ (JDS) ಬೆಂಬಲಿತ ಭಾರತಿ ವಿಶ್ವನಾಥ್ ಕಣದಲ್ಲಿ ಇದ್ದರು. ಭಾರತಿ ವಿಶ್ವನಾಥ್ ತಮ್ಮ 9 ಜನ ಬೆಂಬಲಿಗರ ಜೊತೆ ಮಾತು ಕತೆ ನಡೆಸಿ ಕೆ.ಆರ್ ಪೇಟೆ ತಾಲೂಕಿನ ಚಂದಗೋಳಮ್ಮ ದೇವಾಲಯದಲ್ಲಿ ಆಣೆ ಮಾಡಿಸಿ ಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ಕರೆದು ಕೊಂಡು ಹೋಗಿದ್ದರು. ಪ್ರವಾಸ ಮುಗಿಸಿ ನೇರವಾಗಿ ಮತದಾನ ಪ್ರಕ್ರಿಯೆಗೆ 9 ಜನ ಆಗಮಿಸಿ ಮತದಾನ ಮಾಡಿದ್ದರು. ಆದರೆ ಭಾರತಿ ಅವರಿಗೆ ಈ ಒಂಭತ್ತು ಮತದ ಬದಲು ಕೇವಲ 6 ಮತ ಬಂದಿವೆ.

3 ಮತಗಳಿಂದ ಕಾಂಗ್ರೆಸ್ ಬೆಂಬಲಿತ ರಾಮಕೃಷ್ಟೇಗೌಡ ಗೆಲುವು ಸಾಧಿಸಿದ್ದಾರೆ. ಆದರೆ ಸದಸ್ಯರು ಭಾರತಿ ವಿಶ್ವನಾಥ್ ಅವರಿಗೆ ಮತ ಹಾಕಿದ್ದೇವೆಂದು ಹೇಳಿಕೊಂಡಿದ್ದಾರೆ. ಅಲ್ಲದೇ ಸತ್ಯಕ್ಕೆ ಹೆಸರುವಾಸಿಯಾಗಿರುವ ಕಪ್ಪಡಿ ರಾಜಪ್ಪಾಜಿ ಗದ್ದುಗೆ ಮುಂದೆ ನಿಂತು ಕರ್ಪೂರ ಹಚ್ಚಿ ಆಣೆ ಪ್ರಮಾಣ ಮಾಡಿದ್ದಾರೆ. ಇದನ್ನೂ ಓದಿ: ಮೆಡಿಕಲ್ ಕಾಲೇಜು ಆರಂಭ ಮಾಡದಿದ್ರೆ ಉಪವಾಸ ಸತ್ಯಾಗ್ರಹ ಮಾಡ್ತೇನೆ: ಸುಧಾಕರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್