88% ರಷ್ಟು 2 ಸಾವಿರ ರೂ. ನೋಟುಗಳು ಬ್ಯಾಂಕಿಗೆ ವಾಪಸ್ ಆಗಿವೆ: ಆರ್‌ಬಿಐ

By
1 Min Read

ನವದೆಹಲಿ: ಚಲಾವಣೆಯಿಂದ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ ಬಳಿಕ ಇದುವರೆಗೆ ಸುಮಾರು 88% ರಷ್ಟು ಹಣ ಬ್ಯಾಂಕುಗಳಿಗೆ ವಾಪಸ್ಸಾಗಿವೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿದೆ.

ಮೇ 19ರಂದು ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ. ಜುಲೈ 31ರ ಬ್ಯಾಂಕ್ ವ್ಯವಹಾರ ಮುಕ್ತಾಯದ ವೇಳೆ 88% ರಷ್ಟು ನೋಟುಗಳನ್ನು ಹಿಂಪಡೆಯಲಾಗಿದೆ. ಇವುಗಳ ಪೈಕಿ 87% ರಷ್ಟು ನೋಟುಗಳು ಠೇವಣಿ ರೂಪದಲ್ಲಿ ಜಮೆಯಾಗಿದೆ ಎಂದು ತಿಳಿಸಿದೆ.

2016ರ ನವೆಂಬರ್ 8 ರಂದು 500 ಹಾಗೂ 1,000 ಮುಖಬೆಲೆಯ ನೋಟು ಅಮಾನ್ಯೀಕರಣದ ನಂತರ ಹೊಸದಾಗಿ 2,000 ರೂ. ನೋಟುಗಳನ್ನು ಪರಿಚಯಿಸಲಾಗಿತ್ತು. ಆದರೆ 2018ರಲ್ಲಿಯೇ 2,000 ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತಾಗಿ ಸದನಕ್ಕೆ ಕೇಂದ್ರ ಸರ್ಕಾರ (Central Govt) ಮಾಹಿತಿ ನೀಡಿತ್ತು.

ಇದೀಗ ಕ್ಲೀನ್ ನೋಟ್ ಅಭಿಯಾನದಡಿ ನೋಟ್‍ಗಳನ್ನು ಹಿಂಪಡೆಯಲು ಆರ್‌ಬಿಐ ಮುಂದಾಗಿದೆ. 2023ರ ಮೇ 23 ರಿಂದ ಯಾವುದೇ ಬ್ಯಾಂಕ್‍ನಲ್ಲಿ 2,000 ರೂ. ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸೂಚಿಸಿತ್ತು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್