ಮುಸ್ಲಿಂ ಹೆಣ್ಣುಮಕ್ಕಳ ಮಾನಸಿಕತೆಯೂ ಜಿಹಾದಿ ಕಡೆಗೆ ಹೊರಟಿರೋದು ಸಮಾಜಕ್ಕೆ ಮಾರಕ: ಸುನೀಲ್ ಕುಮಾರ್

Public TV
2 Min Read

ಬೆಂಗಳೂರು: ಮುಸ್ಲಿಂ ಹೆಣ್ಣುಮಕ್ಕಳ (Muslim Girls) ಮಾನಸಿಕತೆಯೂ ಜಿಹಾದಿ ಕಡೆಗೆ ಹೊರಟಿದೆ ಅಂದ್ರೆ ಅದು ಸಮಾಜಕ್ಕೆ ಮಾರಕ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ (V Sunil Kumar) ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಜಬ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ (Supreme Court) ತನಕ ಹೋಗುವ ಧೈರ್ಯ ಬರುತ್ತೆ ಅಂದ್ರೆ ಯಾರ ಕೈವಾಡ ಇತ್ತು ಆಗ? ಈಗಲೂ ಕಾಲೇಜಿನ ಟಾಯ್ಲೆಟ್ ಒಳಗೆ ವೀಡಿಯೋ ಮಾಡಿದ್ದಾರೆ ಅಂದ್ರೆ ಎಷ್ಟು ಧೈರ್ಯ ಇರಬೇಕು. ಇದರ ಹಿಂದೆ ಯಾರದ್ದೋ ಕೈವಾಡ ಇದೆ ಎಂದು ಸಂಶಯಪಟ್ಟಿದ್ದಾರೆ. ಇದನ್ನೂ ಓದಿ: ಉಡುಪಿ ವೀಡಿಯೋ ಕೇಸ್‌ – ಸಿಎಂ ವಿರುದ್ಧ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಬಂಧನ

ಮುಸ್ಲಿಂ ಹೆಣ್ಣುಮಕ್ಕಳ ಮಾನಸಿಕತೆಯೂ ಜಿಹಾದಿ ಕಡೆಗೆ ಹೊರಟಿದೆ ಅಂದ್ರೆ ಅದು ಸಮಾಜಕ್ಕೆ ಮಾರಕ. ವೀಡಿಯೋ ಮಾಡಿದ ಮೂವರು ಹೆಣ್ಣುಮಕ್ಕಳ ಪೋಷಕರನ್ನ ಕರೆಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಸ್ಲಿಂ ಹುಡುಗಿಯರು ಭಾಗಿಯಾಗಿದ್ದಾರೆ ಅನ್ನೋ ಕಾರಣಕ್ಕೆ ಸರ್ಕಾರವೇ ಪ್ರಕರಣ ಮುಚ್ಚಿಹಾಕುತ್ತಿದೆಯಾ? ಯಾರದ್ದಾದರೂ ದೊಡ್ಡಮಟ್ಟದ ಒತ್ತಡ ಇದೆಯಾ? ಅಂತ ಉಡುಪಿ ಜನ ಕೇಳುತ್ತಿದ್ದಾರೆ. ಉಡುಪಿ ಕಾಲೇಜುವೊಂದರ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣವನ್ನ ಸರ್ಕಾರವೇ ಮುಚ್ಚಿಹಾಕುವ ಪ್ರಯತ್ನ ಮಾಡ್ತಿದೆ. ಆ ಮೂವರು ಮುಸ್ಲಿಂ ಹೆಣ್ಣುಮಕ್ಕಳ ಪೋಷಕರನ್ನ ಕರೆಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉಡುಪಿ ಕಾಲೇಜಿನ ಲೇಡಿಸ್‌ ಟಾಯ್ಲೆಟ್‌ನಲ್ಲಿ ವೀಡಿಯೋ ಚಿತ್ರೀಕರಣ ಕೇಸ್‌ – ಬೆಂಗ್ಳೂರು FSLಗೆ ಮೊಬೈಲ್ ರವಾನೆ

ಘಟನೆ ಬಗ್ಗೆ ಟ್ವೀಟ್ ಮಾಡಿದ ಹೆಣ್ಣುಮಗಳ ಮನೆಗೆ ಪೊಲೀಸರು 24 ಗಂಟೆಯಲ್ಲಿ ಹೋಗಿ ವಿಚಾರಣೆ ಮಾಡ್ತಾರೆ. ವೀಡಿಯೋ ಚಿತ್ರೀಕರಣ ಮಾಡಿದವರ ಮನೆಗೆ ಪೊಲೀಸರು ಹೋಗಿ ವಿಚಾರಣೆ ನಡೆಸಿಲ್ಲ. ವೀರಾವೇಶದ ಭಾಷಣ ಮಾಡುವ ಸಿದ್ದರಾಮಯ್ಯ ಅವರ ತಾಕತ್ತು ವಿಡಿಯೋ ಮಾಡಿದವರ ಮನೆಗೆ ಹೋಗಲು ಇಲ್ಲವಾ? ದಮ್ಮು, ತಾಕತ್ತು ಈ ಸರ್ಕಾರಕ್ಕೆ ಇಲ್ಲವಾ? ಮೊಬೈಲ್ ವರ್ಗಾವಣೆ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೆಣ್ಣುಮಕ್ಕಳ ಘನತೆ ಕಾಪಾಡಬೇಕಾದ ಸರ್ಕಾರ ಇದೊಂದು ತಮಾಷೆ ಅಂತಾ ಕೈ ಬಿಡಬಾರದು. ಯಾವುದೇ ಒತ್ತಡಕ್ಕೆ ಮಣಿದು ಪೊಲೀಸರು ಸುಮ್ಮನಾದ್ರೆ ಮುಂದಿನ ದಿನಗಳಲ್ಲಿ ನಮ್ಮ ಎರಡು ಜಿಲ್ಲೆಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಎಚ್ಚರಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್