ವೀಡಿಯೋ ಹಲವು ಬಾರಿ ಫಾರ್ವರ್ಡ್ ಆಗಿದೆ: ಯಶ್‍ಪಾಲ್ ಸುವರ್ಣ ಹೊಸ ಬಾಂಬ್

Public TV
2 Min Read

– ಉಡುಪಿಯ ಬಿಜೆಪಿ ಕಚೇರಿಯಿಂದ ಎಸ್‍ಪಿ ಕಚೇರಿ ವರೆಗೆ ಜಾಥಾ

ಉಡುಪಿ: ನಗರದ ಖಾಸಗಿ ಕಾಲೇಜಿನ (BJP) ಟಾಯ್ಲೆಟ್‍ನಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಯಶ್‍ಪಾಲ್ ಸುವರ್ಣ (Yashpal Suvarna) ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಪು ಮೂಲದ ಜಿಹಾದಿ ಮಹಿಳೆ ಸಂಘಟನೆ ಪ್ರಾರಂಭವಾಗಿದೆ. ಚಿತ್ರೀಕರಣಗೊಂಡ ವೀಡಿಯೋ ಹಲವು ಬಾರಿ ಫಾರ್ವರ್ಡ್ ಆಗಿದೆ. ಇದಕ್ಕೆ ನನ್ನ ಬಳಿ ಸಾಕ್ಷಿ ಇದೆ. ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಇದೆ. ವೀಡಿಯೋ ಮಾಡಿರುವ ವಿದ್ಯಾರ್ಥಿನಿ ಬಳಿ ಮೂರು ಮೊಬೈಲ್‍ಗಳಿವೆ ಎಂಬ ಮಾಹಿತಿ ಇದೆ. ಆ ವಿದ್ಯಾರ್ಥಿಗಳ ಹಿಂದೆ ಯಾರು ಇದ್ದಾರೆ ಎಂಬುದು ತನಿಖೆಯಾಗಬೇಕು ಎಂದು ಯಶ್‍ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬುರ್ಖಾ ಧರಿಸದಿದ್ದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರನ್ನ ಬಸ್ ಹತ್ತಲು ಬಿಡದ ಡ್ರೈವರ್ ಅಮಾನತು

ಒಂದು ವಿದ್ಯಾರ್ಥಿನಿ ಟಾಯ್ಲೆಟ್‍ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ನಾಳೆ ಆ ವಿದ್ಯಾರ್ಥಿನಿ ಯಾರೇ ಬಾಂಬ್ ಕೊಟ್ಟರೂ ಅದನ್ನು ಇಡಲು ಹಿಂಜರಿಯುವುದಿಲ್ಲ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಗೃಹಸಚಿವ ಜಿ. ಪರಮೇಶ್ವರ್ ಕಿವುಡ ಹಾಗೂ ಮೂಕರಾಗಿದ್ದಾರೆ. ಈ ಪ್ರಕರಣದ ತನಿಖೆಯನ್ನು ಕೇಂದ್ರಕ್ಕೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತಾಡಿರುವ ಮಾಜಿ ಶಾಸಕ ರಘುಪತಿ ಭಟ್, ಇದು ಕೊಲೆಯಷ್ಟೇ ದೊಡ್ಡ ಅಪರಾಧ. ವೀಡಿಯೋ ಯಾರಿಗೆ ಫಾರ್ವರ್ಡ್ ಆಗಿದೆ ಎಂಬುದನ್ನು ಬಯಲಿಗೆಳೆಯಬೇಕು. ಸೂಕ್ತ ತನಿಖೆ ನಡೆದರೆ ಎಲ್ಲಾ ಮಾಹಿತಿ ಹೊರಬರಲಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ ಒಂದು ಕೋಮಿನ ಬಗ್ಗೆ ಮಾತ್ರ ಸರ್ಕಾರ ಗಮನಹರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಸ್ಲಿಂ ಹುಡುಗಿಯರು, ಹಿಂದೂ ಹುಡುಗಿಯ ವಿಡಿಯೋ ಚಿತ್ರೀಕರಿಸಿದ್ದಕ್ಕೆ ಗೃಹ ಸಚಿವರಿಗೆ ಇದು ಸಣ್ಣ ವಿಚಾರವಾಗಿದೆ. ಮುಸ್ಲಿಂ ಹುಡುಗಿಯ ಚಿತ್ರೀಕರಣ ಆಗಿದ್ದರೂ ಅದು ದೊಡ್ಡ ವಿಷಯವೇ. ಹಿಂದೂ ಹುಡುಗಿಯ ಚಿತ್ರೀಕರಣ ಆದರೂ ಅದು ದೊಡ್ಡ ವಿಷಯವೇ ಆಗಿದೆ. ಸಿಡಿಆರ್ ತೆಗೆದರೆ ಎಲ್ಲವೂ ಹೊರಬರಲಿದೆ. ಸರ್ಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಇಲ್ಲಿ ಎನ್‍ಐಎ ಘಟಕ ತೆರೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಉಡುಪಿಯ ಬಿಜೆಪಿ ಕಚೇರಿಯಿಂದ ಎಸ್‍ಪಿ ಕಚೇರಿವರೆಗೂ ಬಿಜೆಪಿಯ ಶಾಸಕರು ಹಾಗೂ ಜಿಲ್ಲಾ ನಾಯಕರು ಮತ್ತು ಕಾರ್ಯಕರ್ತರು ಜಾಥಾ ನಡೆಸಿದ್ದಾರೆ. ಬಳಿಕ ಎಸ್‍ಪಿ ಕಚೇರಿಗೆ ತೆರಳಿ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಮನೆಗೆ ಮುತ್ತಿಗೆ ಯತ್ನ – ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್