ಪ್ರಭಾಸ್ ಮೆಗಾಸ್ಟಾರ್, ಹೋಲಿಕೆ ಮಾಡಬೇಡಿ ಎಂದು ವಿನಂತಿಸಿದ ವಿವೇಕ್ ಅಗ್ನಿಹೋತ್ರಿ

Public TV
2 Min Read

ತೆಲುಗು ನಟ ಪ್ರಭಾಸ್ (Prabhas) ವಿರುದ್ಧ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರಂತರ ದಾಳಿ ಮಾಡುತ್ತಿದ್ದರು. ವಿವೇಕ್ ಮಾತುಗಳನ್ನು ಪ್ರಭಾಸ್ ಅಭಿಮಾನಿಗಳು ಶಾಂತ ಚಿತ್ತದಿಂದಲೇ ಸ್ವೀಕರಿಸಿದ್ದರು. ಪ್ರಭಾಸ್ ಸಿನಿಮಾ ವಿರುದ್ಧ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ವ್ಯಾಕ್ಸಿನ್ ವಾರ್ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಪ್ರಭಾಸ್ ಅಭಿಮಾನಿಗಳು ತೊಡೆತಟ್ಟಿದರು.

ವಿವೇಕ್ ಅಗ್ನಿಹೋತ್ರಿ ವಿರುದ್ಧ ಪ್ರಭಾಸ್ ಅಭಿಮಾನಿಗಳು ತಿರುಗಿ ಬೀಳುತ್ತಿದ್ದಂತೆಯೇ ವಿವೇಕ್ ಎಚ್ಚೆತ್ತುಕೊಂಡಿದ್ದಾರೆ. ‘ದಯವಿಟ್ಟು ಈ ವಿಚಾರದಲ್ಲಿ ನನ್ನನ್ನು ಬಿಟ್ಟುಬಿಡಿ. ಪ್ರಭಾಸ್ ಸಿನಿಮಾ ವಿರುದ್ಧ ನನ್ನ ಸಿನಿಮಾ ರಿಲೀಸ್ ಮಾಡುತ್ತೇನೆ ಎಂದು ನಾನು ಹೇಳಲೇ ಇಲ್ಲ. ಅದು ಸುಳ್ಳು ಸುದ್ದಿ. ಪ್ರಭಾಸ್ ದೊಡ್ಡ ನಟರು. ಅವರು ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡುತ್ತಾರೆ. ನನ್ನ ಸಿನಿಮಾಗಳಲ್ಲಿ ಸ್ಟಾರ್ ಇರುವುದಿಲ್ಲ. ಬಜೆಟ್ ಕೂಡ ಕಡಿಮೆ. ಈ ವಿಚಾರದಲ್ಲಿ ನನ್ನನ್ನು ಎಳೆಯಬೇಡಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿವೇಕ್ ಬರೆದುಕೊಂಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಕುರಿತಾಗಿ ಮತ್ತೊಂದು ಡಾಕ್ಯುಮೆಂಟರಿ ಮಾಡಿ, ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) , ಆ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ನೆಟ್ಟಿಗರೊಬ್ಬರು ‘ನಿಮಗೆ ತಾಕತ್ತಿದ್ದರೆ ಮಣಿಪುರ ಫೈಲ್ಸ್ (Manipur Files) ಮಾಡಿ’ ಎಂದು ಸವಾಲು ಹಾಕಿದ್ದಾರೆ. ಆ ಸವಾಲಿನ ಪೋಸ್ಟ್ ಗೆ ವಿವೇಕ್ ಉತ್ತರವನ್ನೂ ನೀಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್ ಶೋ’ ಸೆನ್ಸಾರ್ ಕುರಿತು ಹೈಕೋರ್ಟ್ ಕಳವಳ

kashmir

‘ನನ್ನ ಮೇಲೆ ವಿಶ್ವಾಸವಿಟ್ಟಿದ್ದಕ್ಕೆ ಧನ್ಯವಾದಗಳು. ಎಲ್ಲವನ್ನೂ ನಾನೇ ಏಕೆ ಮಾಡಬೇಕು ಎಂದು ಬಯಸುತ್ತೀರಿ? ಚಿತ್ರೋದ್ಯಮದಲ್ಲಿ ಬೇರೆ ಯಾರೂ ಇಲ್ಲವೆ?’ ಎಂದು ಪ್ರಶ್ನೆ ಮಾಡಿದ್ದಾರೆ. ಎಲ್ಲವನ್ನೂ ನಾನೇ ಮಾಡಬೇಕು ಎಂದು ಕೇಳುವುದು ತಪ್ಪು ಎನ್ನುವಂತೆ ಅವರು ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ.

 

ಬಾಲಿವುಡ್‌ನಲ್ಲಿ (Bollywood) ಹೊಸ ಅಲೆ ಸೃಷ್ಟಿಸಿದ ಸಿನಿಮಾ ಅಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ. 2022ರಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ವಿವೇಕ್ ಅಗ್ನಿಹೋತ್ರಿ ನಿರ್ದೇಶದ ಸಿನಿಮಾ ಸೌಂಡ್ ಮಾಡಿತ್ತು. ಈ ಚಿತ್ರದ ನಿರ್ದೇಶಕ ಫ್ಯಾನ್ಸ್ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಾರಿ ಅವರು ಮತ್ತೊಂದು ‘ದಿ ಕಾಶ್ಮೀರ್ ಫೈಲ್ಸ್’ ಜೊತೆ ಬರೋದಾಗಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇನ್ನೂ ಎಲ್ಲೂ ಹೇಳಿರದ ಸಾಕಷ್ಟು ವಿಚಾರಗಳನ್ನ ಒಟಿಟಿ ಮೂಲಕ ತೋರಿಸಲು ನಿರ್ದೇಶಕರು ಮುಂದಾಗಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್