ವಿಜಯ್ ದೇವರಕೊಂಡ ಶರ್ಟ್ ಧರಿಸಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ

Public TV
2 Min Read

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಬಾಲಿವುಡ್‌ನಲ್ಲಿ (Bollywood) ಬ್ಯುಸಿ ನಟಿಯಾಗಿ ಮಿಂಚ್ತಿದ್ದಾರೆ. ಸಿನಿಮಾ ವಿಚಾರವಾಗಿ ಅದೆಷ್ಟು ಸದ್ದು ಮಾಡ್ತಿದ್ದಾರೋ ಹಾಗೆಯೇ ವಿಜಯ್ ದೇವರಕೊಂಡ ಜೊತೆಗಿನ ಸಿನಿಮಾ ವಿಷ್ಯವಾಗಿಯೂ ಅಷ್ಟೇ ಸುದ್ದಿ ಮಾಡ್ತಿದ್ದಾರೆ. ಇಬ್ಬರ ಲವ್ವಿ- ಡವ್ವಿ ಬಗ್ಗೆ ಅದೆಷ್ಟೇ ಕೇಳಿದ್ರು ನಾವಿಬ್ರು ಜಸ್ಟ್ ಫ್ರೆಂಡ್ಸ್ ಅನ್ನೋ ಜೋಡಿ ಈಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಅದ್ಹೇಗೆ ಅಂತೀರಾ?

ಕನ್ನಡದ ನಟಿ ರಶ್ಮಿಕಾ ಅವರು ‘ಗೀತಾ ಗೋವಿಂದಂ’ (Geetha Govindam) ಸಿನಿಮಾ ಮೂಲಕ ವಿಜಯ್ ದೇವರಕೊಂಡಗೆ (Vijay Devarakonda) ಜೋಡಿಯಾದ್ರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ಅಂದು ಪರಿಚಯವಾದ ಗೆಳೆತನ ಇಂದಿಗೂ ಒಡನಾಟವಿದೆ. ವಿಜಯ್ ಕುಟುಂಬದ ಜೊತೆಗೂ ರಶ್ಮಿಕಾಗೆ ಫ್ರೆಂಡ್‌ಶಿಪ್‌ಯಿದೆ. ಅದಕ್ಕೆ ಸಾಕ್ಷಿ ಎಂಬಂತೆ ಇತ್ತೀಚಿಗೆ ವಿಜಯ್ ತಮ್ಮ ಆನಂದ್ ದೇವರಕೊಂಡ ನಟನೆಯ ಬೇಬಿ (Baby Film)ಸಿನಿಮಾ ನಟಿ ಬೆಂಬಲಿಸಿದ್ದರು. ಸಿನಿಮಾ ನೋಡಿ ಶ್ರೀವಲ್ಲಿ ಭಾವುಕರಾದರು. ಆನಂದ್ ನಟನೆ ನೋಡಿ ರಶ್ಮಿಕಾ ಮೆಚ್ಚುಗೆ ಸೂಚಿಸಿದ್ದರು.

ಕಳೆದ ವರ್ಷ ವಿಜಯ್ ಕುಟುಂಬದ ಜೊತೆ ರಶ್ಮಿಕಾ ಮಂದಣ್ಣ ಅವರು ಟ್ರಿಪ್ ಕೂಡ ಮಾಡಿದ್ದರು. ಈ ಕುರಿತ ಫೋಟೋ ಸಖತ್ ವೈರಲ್ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಈ ಜೋಡಿ ಅಷ್ಟಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕ್ಯಾಮೆರಾ ಕಣ್ಣಿಂದ ದೂರವಿದ್ದರು. ಇಬ್ಬರ ಒಡನಾಟ ಚೆನ್ನಾಗಿದೆ ಎಂಬುದಕ್ಕೆ ಇದೀಗ ಸಾಕ್ಷಿ ಸಿಕ್ಕಿದೆ.

ಆದರೆ ಈಗ ರಶ್ಮಿಕಾ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಸರಿಯಾಗಿಯೇ ತಗ್ಲಾಕೊಂಡಿದ್ದಾರೆ. ಅದು ವಿಜಯ್ ದೇವರಕೊಂಡ ಜೊತೆಗಲ್ಲ ಬದಲಿಗೆ ವಿಜಯ್ ದೇವರಕೊಂಡ ಧರಿಸಿದ್ದ ಶರ್ಟ್ ಅನ್ನು ತಾನು ಧರಿಸೋ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ವಿಜಯ್ ದೇವರಕೊಂಡ ಈ ಹಿಂದೆ ಪರ್ಪಲ್ ಕಲರ್ ಶರ್ಟ್ ಅನ್ನು ಏರ್‌ಪೋರ್ಟ್‌ನಿಂದ ಬರುವಾಗ ತೊಟ್ಟಿದ್ರು, ಈಗ ನೋಡಿದ್ರೆ ರಶ್ಮಿಕಾ, ವಿಜಯ್ ಹಾಕಿದ್ದ ಅಂಗಿಯನ್ನೇ ಹಾಕೋ ಮೂಲಕ ನಮ್ಮಿಬ್ಬರ ದೇಹ ಬೇರೆಯಾದ್ರೂ ಮನಸ್ಸು ಒಂದೇ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಶರ್ಟ್ ಕೂಡ ಒಂದೇ ಧರಿಸಿದ್ದಾರೆ. ಇದನ್ನೂ ಓದಿ:‘ಜವಾನ್’ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ: ಭರ್ಜರಿ ಸುದ್ದಿ

ಮತ್ತೆ ಮತ್ತೆ ವಿಜಯ್- ರಶ್ಮಿಕಾ ನಾವು ಲವ್ ಬರ್ಡ್ಸ್ ಅನ್ನೋದನ್ನ ಸೈಲೆಂಟ್ ಆಗಿ ತೋರಿಸಿ ಕೊಟ್ಟಿದ್ದಾರೆ. ಮುಂದೆ ಈ ಜೋಡಿ ತಮ್ಮ ಪ್ರೀತಿ ಒಪ್ಪಿಕೊಂಡು ಗುಡ್ ನ್ಯೂಸ್ ಕೊಡ್ತಾರಾ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್