ಸರ್ಕಾರದಿಂದ ವೆಬ್ ಸೀರೀಸ್ ಪ್ರಶಸ್ತಿ ಘೋಷಿಸಿದ ಸಚಿವ ಅನುರಾಗ್ ಠಾಕೂರ್

By
1 Min Read

ವರ್ಷದಿಂದಲೇ ಭಾರತ ಸರ್ಕಾರವು ಅತ್ಯುತ್ತಮ ವೆಬ್ ಸೀರೀಸ್ (Web Series) ತಯಾರಕರಿಗೆ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸಚಿವ ಅನುರಾಗ ಠಾಕೂರ್ (Anurag Thakur) ತಿಳಿಸಿದ್ದಾರೆ. ಈ ವರ್ಷದ ನವೆಂಬರ್ 20 ರಿಂದ ನಡೆಯಲಿರುವ ಗೋವಾ ಚಿತ್ರೋತ್ಸವದಲ್ಲಿ (Goa Film Festival) ಪ್ರಶಸ್ತಿ (Award)  ಪ್ರದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಓಟಿಟಿ ವೇದಿಕೆಯಲ್ಲಿ ಪ್ರಸಾರವಾಗುವ ವೆಬ್ ಸರಣಿಗಳು ನೋಡುಗರನ್ನು ಸೆಳೆಯುತ್ತಿವೆ. ಅವುಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರಶಸ್ತಿ ಘೋಷಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದೇ ವರ್ಷದಿಂದಲೇ ಪ್ರಶಸ್ತಿ ನೀಡುವುದಾಗಿ ಅವರು ಟ್ವೀಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

ವೆಬ್ ಸರಣಿಯ ಆಯ್ಕೆಯ ಮಾನದಂಡದ ಬಗ್ಗೆಯೂ ಅವರು ಹೇಳಿದ್ದು, ಅತ್ಯುತ್ತಮ ಕಥೆ, ತಾಂತ್ರಿಕ ಶ್ರೀಮಂತಿಕೆ, ಹೇಳುವ ಕ್ರಮ ಹಾಗೂ ಜನರ ಮೇಲೆ ಅದು ನೀಡಿದ ಪರಿಣಾಮ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು ಎಂದು ಠಾಕೂರ್ ತಿಳಿಸಿದ್ದಾರೆ.

 

ಈ ಪ್ರಶಸ್ತಿಯು ಓಟಿಟಿ ವೇದಿಕೆಯ ಮೇಲೆ ಬಂಡವಾಳ ಹೂಡುವವರಿಗೆ ಉತ್ತೇಜಿಸುವ ಜೊತೆಗೆ , ಎಲೆಮರೆಯಂತೆ ಕೆಲಸ ಮಾಡುವ ಪ್ರತಿಭೆಗಳನ್ನೂ ಗುರುತಿಸುವಂತಾಗಲಿದೆ ಎನ್ನುವುದು ಸಚಿವರ ಮಾತು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್