INDIA ಒಕ್ಕೂಟದ ಸಭೆಯೇ ಉಗ್ರರ ಟಾರ್ಗೆಟ್

By
1 Min Read

ಬೆಂಗಳೂರು: ರಾಜಧಾನಿಯಲ್ಲಿ ಅರೆಸ್ಟ್ ಆಗಿರುವ ಐವರು ಶಂಕಿತ ಉಗ್ರರು (Suspected Terrorists) ಇಂಡಿಯಾ ಒಕ್ಕೂಟದ ಸಭೆಯನ್ನು (INDIA Meeting) ಟಾರ್ಗೆಟ್ ಮಾಡಿದ್ದರು ಎಂಬ ಸ್ಫೋಟಕ ವಿಚಾರ ಪ್ರಕಟವಾಗಿದೆ.

ವಿರೋಧ ಪಕ್ಷದ ನಾಯಕರ ಸಭೆಯ ವೇಳೆ ಭಾರೀ ಭದ್ರತೆಯ ಕಾರಣದಿಂದ ಈ ಸಂಚು ವಿಫಲವಾಗಿದೆ. ಇದರಿಂದಾಗಿ ಸಭೆಗೆ ಸೇರಿದ್ದ ನಾಯಕರು ಸೇಫ್ ಆಗಿದ್ದಾರೆ. ಶಂಕಿತರ ವಿಚಾರಣೆಯ ವೇಳೆ ಈ ಮಾಹಿತಿಗಳು ಹೊರ ಬಿದ್ದಿವೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಇದನ್ನೂ ಓದಿ: ರೌಡಿಗಳಾಗಿ ಜೈಲು ಸೇರಿದ್ದವರಿಗೆ ಸಿಕ್ಕಿತು ಉಗ್ರರ ಪಾಠ!

ಸಭೆ ಟಾರ್ಗೆಟ್ ತಪ್ಪಿದ್ದರಿಂದ ಇನ್ನೆರಡು ದಿನಗಳಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಪೊಲೀಸರು ಒಂದು ದಿನ ತಡ ಮಾಡಿದ್ದರೂ ಸಹ ಭಾರೀ ಅನಾಹುತಕ್ಕೆ ಬೆಂಗಳೂರು (Bengaluru) ಸಾಕ್ಷಿಯಾಗುತ್ತಿತ್ತು. ಈ ಬಗ್ಗೆ ಗುಪ್ತಚರ ಇಲಾಖೆ ಹಾಗೂ ಗೃಹ ಸಚಿವರಿಂದ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಮಾಹಿತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.

ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಪೈಜಲ್ ರಬ್ಬಾನಿ ಈ ಐವರು ಶಂಕಿತ ಉಗ್ರರನ್ನು ಬೆಂಗಳೂರು ಸಿಸಿಬಿ ಪೊಲಿಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ಬಂಧಿತರಿಂದ ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ, ಸಜೀವ ಗುಂಡುಗಳು ಹಾಗೂ ಪಿಸ್ತೂಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್