ಚಂದ್ರನ ವೀಕ್ಷಣೆಗೆ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ: ಚಂದ್ರಯಾನ-3 ಲೇವಡಿ ಮಾಡಿದ ಪಾಕಿಸ್ತಾನ ಮಾಜಿ ಸಚಿವ

Public TV
1 Min Read

ಇಸ್ಲಾಮಾಬಾದ್‌: ಭಾರತದ ಮಹತ್ವಾಕಾಂಕ್ಷೆ ಚಂದ್ರಯಾನ-3 (Chandrayaan-3) ಅನ್ನು ಪಾಕಿಸ್ತಾನದ (Pakistan) ವಿಜ್ಞಾನ ಮತ್ತು ತಂತ್ರಜ್ಞಾನ ಮಾಜಿ ಸಚಿವ ಫವಾದ್‌ ಚೌಧರಿ (Fawad Chaudhry) ಲೇವಡಿ ಮಾಡಿದ್ದಾರೆ. ಚಂದ್ರನ ವೀಕ್ಷಣೆಗಾಗಿ ಇಷ್ಟೊಂದು ಕಸರತ್ತು ಮಾಡುವ ಅಗತ್ಯವಿಲ್ಲ ಹಾಸ್ಯ ಮಾಡಿದ್ದಾರೆ.

ಫವಾದ್ ಅವರ ಸಂದರ್ಶನದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಡೆಸಿದ ಚಂದ್ರನ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಶ್ನೆಗೆ ಹಾಸ್ಯಮಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: Chandrayaan-3: ವಿಮಾನದ ಕಿಟಕಿಯಿಂದ ಸೆರೆಯಾದ ಅದ್ಭುತ ವೀಡಿಯೋ ವೈರಲ್

ಬಾಹ್ಯಾಕಾಶದಲ್ಲಿ ಚಂದ್ರನ ಸ್ಥಾನ ನಮಗೆ ಗೊತ್ತಿದೆ. ಯಾವಾಗ ಹುಟ್ಟುತ್ತಾನೆ, ಮುಳುಗುತ್ತಾನೆ ಎಂಬುದೂ ತಿಳಿದಿದೆ. ಆದರೆ ಚಂದ್ರನ ವೀಕ್ಷಣೆಗೆ ಇಷ್ಟು ಕಸರತ್ತು ಮಾಡುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವರ ಹೇಳಿಕೆಯನ್ನು ಬೆಂಬಲಿಸಿ ವೀಡಿಯೋವನ್ನು ಅನೇಕರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜು.14 ರಂದು ಚಂದ್ರಯಾನ-3 ಯೋಜನೆಯ ಗಗನನೌಕೆಯನ್ನು ಇಸ್ರೋ ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಿತು. ಗಗನನೌಕೆಯು ಕಕ್ಷೆ ಬದಲಿಸುವ ಎರಡನೇ ಹಂತದ ಪ್ರಕ್ರಿಯೆಯು ಸೋಮವಾರ ಯಶಸ್ವಿಯಾಗಿದೆ. ಅಲ್ಲದೇ ಭೂಮಿಯ ಸುತ್ತ ಮೂರನೇ ಕಕ್ಷೆಗೆ ಇಂದು ಗಗನನೌಕೆ ಏರಲಿದೆ. ಇದನ್ನೂ ಓದಿ: Chandrayaan-3 ಬಾಹ್ಯಾಕಾಶ ನೌಕೆಯು ಸುರಕ್ಷಿತವಾಗಿದೆ: ಇಸ್ರೋ

ಅಮೆರಿಕ, ಚೀನಾ, ರಷ್ಯಾ ದೇಶಗಳು ಚಂದ್ರನ ಮೇಲ್ಮೈ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿ ಯಶಸ್ವಿಯಾಗಿವೆ. ಭಾರತದ ಚಂದ್ರಯಾನ-3 ಯಶಸ್ವಿಯಾದರೆ ಈ ದೇಶಗಳ ಸಾಲಿಗೆ ಸೇರುತ್ತದೆ. ಅಲ್ಲದೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಕಾರ್ಯಾಚರಣೆ ಮಾಡಿದ ಮೊದಲ ದೇಶವಾಗಿ ಇತಿಹಾಸ ಸೃಷ್ಟಿಸಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್