ಬಡ ಕುಟುಂಬದ ಮಗಳ ಚಿಕಿತ್ಸೆಗೆ ನೆರವಾದ ರಿಪ್ಪನ್ ಪೇಟೆ ಪೊಲೀಸರು

Public TV
1 Min Read

ಶಿವಮೊಗ್ಗ: ಪೊಲೀಸರ (Police Help) ಜೊತೆ ಅತಿಯಾದ ವಿಶ್ವಾಸವು ಒಳ್ಳೆಯದಲ್ಲ, ಅತಿಯಾದ ವಿರೋಧವೂ ಒಳ್ಳೆಯದಲ್ಲ ಎಂಬ ಮಾತಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಬಡ ಕುಟುಂಬದ ಕಷ್ಟಕ್ಕೆ ಪೊಲೀಸರ ಮನವು ಮಿಡಿದಿದೆ.

ಹೌದು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗವಟೂರಿನ ಆಟೋ ಚಾಲಕ ದೇವಪ್ಪಗೌಡ ಅವರ ಪುತ್ರಿ ಅನಿತಾ ಕಳೆದ 36 ವರ್ಷಗಳಿಂದ ನರ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ಮೊದಲೇ ಬಡತನದಲ್ಲಿರುವ ಕುಟುಂಬ ಮಗಳ ಸಂಕಟ ನೋಡಲಾಗದೇ ಇಂದಲ್ಲ, ನಾಳೆ ಕಾಯಿಲೆ ವಾಸಿಯಾಗಬಹುದು ಎಂಬ ಆಶಾವಾದದಿಂದ ಸಾಲಸೋಲ ಮಾಡಿ ಲಕ್ಷಾಂತರ ರೂ ಖರ್ಚು ಮಾಡಿ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ತಮ್ಮ ದುಡಿಮೆಯ ಬಹುಪಾಲು ಹಣವನ್ನು ಮಗಳ ಚಿಕಿತ್ಸೆಗೆ ಖರ್ಚು ಮಾಡಿದ್ದಾರೆ. ಇದೀಗ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲು ಹಣ ಇಲ್ಲದೇ ಬಡ ಕುಟುಂಬ ಪರಿತಪಿಸುತ್ತಿತ್ತು. ಈ ವಿಷಯ ಅರಿತ ರಿಪ್ಪನ್ ಪೇಟೆ ಠಾಣೆಯ ಪೊಲೀಸ್ (Ripponpet Police Station)  ಸಿಬ್ಬಂದಿ ಬಡ ಕುಟುಂಬಕ್ಕೆ ಆರ್ಥಿಕ ಸಹಾಯದ ನೆರವು ನೀಡಿ ಮಾನವೀಯತೆ ಮೆರೆದಿದೆ. ಆ ಮೂಲಕ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್