ಹಿಂದೂ ಧರ್ಮ ಸ್ವೀಕರಿಸಿದ್ದೇನೆ, ಸಸ್ಯಾಹಾರಿ ಜೀವನಶೈಲಿ ಅನುಸರಿಸ್ತೇನೆ – ಪ್ರೇಮಿಗಾಗಿ ಬದಲಾದ ಪಾಕ್‌ ಮಹಿಳೆ

By
2 Min Read

ಲಕ್ನೋ: ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್ ಜೈಲಿನಿಂದ ಬಿಡುಗಡೆಯಾದ ನಂತರ ಉತ್ತರ ಪ್ರದೇಶದ ತನ್ನ ಪ್ರೇಮಿ ಸಚಿನ್‌ ಮೀನಾ ಜೊತೆಗೆ ದಾಂಪತ್ಯ ಜೀವನ ಶುರು ಮಾಡಿದ್ದಾಳೆ. ಅಲ್ಲದೇ ತಾನು ಇನ್ನೆಂದಿಗೂ ಪಾಕಿಸ್ತಾನಕ್ಕೆ ಹಿಂದಿರುಗಲ್ಲ, ಭಾರತೀಯ ಸಂಸ್ಕೃತಿಯನ್ನ (Indian Culture) ಹೃದಯದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.

ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ ಮಾತನಾಡಿರುವ ಪಾಕ್‌ ಮಹಿಳೆ, ನಾನೀಗ ನನ್ನ ದಿನಚರಿಯಲ್ಲಿ ಹಿಂದೂ ಸಂಸ್ಕೃತಿಯನ್ನ ಅಳವಡಿಸಿಕೊಂಡಿದ್ದೇನೆ. ನನ್ನ ಕೊರಳಲ್ಲಿ ರಾಧೆಯ ಪಟ್ಟಿಯನ್ನ ಧರಿಸೋದು, ಜನರನ್ನ ಕೈಮುಗಿದು ನಮಸ್ಕರಿಸುವುದು, ಆಶೀರ್ವಾದಕ್ಕಾಗಿ ಹಿರಿಯರ ಪಾದಗಳನ್ನ ಮುಟ್ಟಿ ನಮಸ್ಕರಿಸುವುದು, ದೇವರನ್ನ ಪ್ರಾರ್ಥಿಸುವುದು ಹಾಗೂ ಹಿಂದೂ ಸಂಪ್ರದಾಯದಂತೆ ಸಸ್ಯಹಾರಿ ಜೀವನ ಶೈಲಿಯನ್ನ ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Made by Tata iPhones – ಕೋಲಾರದಲ್ಲಿ ಐಫೋನ್‌ ತಯಾರಿಸಲಿದೆ ಟಾಟಾ!

ಭಾರತಕ್ಕೆ ಅಕ್ರಮವಾಗಿ ತನ್ನ 4 ಮಕ್ಕಳೊಂದಿಗೆ ಪ್ರವೇಶಿಸಿದ್ದ ಮಹಿಳೆ ಮತ್ತು ಆತನ ಪ್ರಿಯಕರ ಹಾಗೂ ಅವರಿಬ್ಬರಿಗೆ ಆಶ್ರಯ ನೀಡಿದ್ದ ಪ್ರಿಯಕರನ ತಂದೆಯನ್ನ ಗ್ರೇಟರ್ ನೋಯ್ಡಾ ಪೊಲೀಸರು (Noida Police) ಜುಲೈ ಬಂಧಿಸಿದ್ದರು. ಶುಕ್ರವಾರ ಸ್ಥಳೀಯ ನ್ಯಾಯಾಲಯ (Local Court) ಈ ಮೂವರಿಗೂ ಜಾಮೀನು ನೀಡಿತು. ಕಾಗದ ಪತ್ರಗಳ ಪರಿಶೀಲನೆ ಕೆಲಸ ಮುಗಿದ ಬಳಿಕ ಶನಿವಾರ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಜೈಲಿನಿಂದ ಬಿಡುಗಡೆಗೊಂಡ ನಂತರ ಹೊಸದಾಗಿ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಇದನ್ನೂ ಓದಿ: ಭಾರತ ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಬಲ್ಲದು – ವಿಶ್ವ ಮುಸ್ಲಿಂ ಲೀಗ್‌ ಮುಖ್ಯಸ್ಥ

ಸೀಮಾ ಭಾರತಕ್ಕೆ ಬಂದ ಹಾದಿಯೇ ರೋಚಕ:
ನನ್ನದು ತುಂಬಾ ದೀರ್ಘ ಪ್ರಯಾಣವಾಗಿತ್ತು ಎಂದು ಸೀಮಾ ಹೇಳಿಕೊಂಡಿದ್ದಾಳೆ. ಮೊದಲ ಮದುವೆಯಾದ ನಂತರ ಕರಾಚಿಯಿಂದ ದುಬೈಗೆ ಹೋಗಿದ್ದೆ. ಅಲ್ಲಿಂದ ನೇಪಾಳಕ್ಕೆ ಹೋದ್ವಿ. ಕೊನೆಗೆ ಪೋಖ್ರಾ ದಾರಿ ಹಿಡಿಯುವ ಮುನ್ನ ಸಚಿನ್‌ನನ್ನ ಭೇಟಿಯಾಗಿದ್ದೆ. ನಂತರ ನಾನು ಪಾಕಿಸ್ತಾನಕ್ಕೆ, ಸಚಿನ್ ಭಾರತಕ್ಕೆ ಮರಳಿದ್ದರು. ಅದಾದ ಮೇಲೆ ಸೀಮಾ ಹಾಗೂ ಪತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿ ಪಾಕಿಸ್ತಾನ ತೊರೆಯಲು ಮುಂದಾದಳು. ಸೀಮಾ ತನಗಿದ್ದ ಒಂದು ಫ್ಲಾಟ್ ಅನ್ನು 12 ಲಕ್ಷ ರೂ.ಗೆ (ಪಾಕಿಸ್ತಾನ ರೂಪಾಯಿಗಳಲ್ಲಿ) ಮಾರಾಟ ಮಾಡಿ, ತನಗೆ ಮತ್ತು ತನ್ನ ನಾಲ್ಕು ಮಕ್ಕಳಿಗೆ ನೇಪಾಳಕ್ಕೆ ವಿಮಾನ ಟಿಕೆಟ್ ಮತ್ತು ವೀಸಾ ವ್ಯವಸ್ಥೆ ಮಾಡಿಕೊಂಡಳು. ಕಳೆದ ಮೇ ತಿಂಗಳಲ್ಲಿ ದುಬೈ ಮೂಲಕ ನೇಪಾಳಕ್ಕೆ ಬಂದ ಸೀಮಾ, ಅಲ್ಲಿಂದ ಮೇ 13ರಂದು ಗ್ರೇಟರ್ ನೋಯ್ದಾಗೆ ಬಂದಿಳಿದಿದ್ದಳು. ಸಚಿನ್ ತನ್ನ ಪ್ರಿಯತಮೆಯ ಗುಟ್ಟು ಬಿಟ್ಟುಕೊಡದೇ ನೋಯ್ಡಾದಲ್ಲೇ ಬಾಡಿಗೆ ಮನೆ ಮಾಡಿ ಇರಿಸಿದ್ದ. ಈ ವಿಷಯ ಬೆಳಕಿಗೆ ಬಂದ ನಂತರ ಜುಲೈ 4ರಂದು ನೋಯ್ಡಾ ಪೊಲೀಸರು ಬಂಧಿಸಿದ್ದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್