ಖ್ಯಾತ ಮಾಡೆಲ್ ಮನೆಯಲ್ಲಿ ಭೂತ: ಫೋಟೋ ಹಂಚಿಕೊಂಡ ಕಿಮ್

Public TV
1 Min Read

ಜಗತ್ತಿನ ಖ್ಯಾತ ಮಾಡೆಲ್ (Model) ಕಿಮ್ ಕರ್ದಾಶಿಯನ್ ಅಚ್ಚರಿಯ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾಡೆಲ್ ಜಗತ್ತಿನ ಅತ್ಯಂತ ಶ್ರೀಮಂತೆ ಮತ್ತು ಹಲವಾರು ಉತ್ಪನ್ನಗಳಿಗೆ ರೂಪದರ್ಶಿಯಾಗಿರುವ ಕಿಮ್ (Kim Kardashian), ಆಘಾತಕಾರಿ ಸಂಗತಿಯನ್ನು ಫೋಟೋ ಸಮೇತ ಹಂಚಿಕೊಂಡಿದ್ದು, ಅಭಿಮಾನಿಗಳು ಕಿಮ್‌ಗೆ ಧೈರ್ಯ ನೀಡಿದ್ದಾರೆ. ಇಂತಹ ಫೋಟೋಗಳನ್ನು ಶೇರ್ ಮಾಡುವ ಬದಲು ನಿಮ್ ಹಾಟ್ ಫೋಟೋಗಳನ್ನು ಹಂಚಿಕೊಂಡು ಸಂಭ್ರಮಿಸಿ ಎಂದಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಕಿಮ್ ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಕನ್ನಡಿ ಎದುರು ನಿಂತುಕೊಂಡು ತಮ್ಮದೇ ಮೊಬೈಲ್ ನಲ್ಲಿ ಸೆಲ್ಫಿ (Selfie) ತೆಗೆದುಕೊಂಡಿದ್ದರು. ವಾರದ ಬಳಿಕ  ಆ ಫೋಟೋ ನೋಡಿದಾಗ ಕಿಮ್ ಆತಂಕಗೊಂಡಿದ್ದಾರೆ. ತಮ್ಮ ಹಿಂದೆ ಇರುವವರು ಯಾರು ಎಂದು ಅಚ್ಚರಿಯಿಂದ ನೋಡಿದ್ದಾರೆ. ಅಂದು ಮನೆಯಲ್ಲಿ ಒಬ್ಬರೇ ಇದ್ದರೂ, ಇನ್ನೊಬ್ಬರು ಯಾರು ಎಂದು ಫೋಟೋವನ್ನು ಝೂಮ್ ಮಾಡಿ ನೋಡಿದಾಗ ಅದು ಭೂತವೆಂದು (Ghost) ಗೊತ್ತಾಗಿದೆಯಂತೆ. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಿಮ್, ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಕಿಮ್ ಅಭಿಮಾನಿಗಳು ಅದಕ್ಕೆ ಅನೇಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಅದು ನಿಮ್ಮದೇ ನೆರಳು ಯಾವುದೇ ಭೂತ ಇಲ್ಲವೆಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ಚರ್ಚೆಗೆ ಹೋಗಿ ಬನ್ನಿ ಸರಿ ಹೋಗುತ್ತದೆ ಎಂದು ಸಲಹೆಯನ್ನು ನೀಡಿದ್ದಾರೆ. ಭೂತ, ದೆವ್ವ ಯಾವುದೂ ಇರುವುದಿಲ್ಲ, ದಯವಿಟ್ಟು ಆರಾಮಾಗಿ ಇರಿ ಎಂದು ಅನೇಕರು ಆ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

ಕಿಮ್ ಪೋಸ್ಟ್ ಮಾಡಿರುವ ಫೋಟೋಗೆ 30 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಲೈಕ್ ಮಾಡಿದ್ದಾರೆ. ಮೂವತ್ತು ಸಾವಿರಕ್ಕೂ ಹೆಚ್ಚು ಕಾಮೆಂಟ್ ಮಾಡಿ, ಧೈರ್ಯ ತುಂಬಿದ್ದಾರೆ. ಕಿಮ್ ಅತ್ಯಂತ ಪ್ರಭಾವಿತ ಮಾಡೆಲ್. ಅವರ ಇನ್ಸ್ಟಾ ಪೇಜ್ ಅನ್ನು 36 ಕೋಟಿ ಜನರು ಫಾಲೋ ಮಾಡುತ್ತಾರೆ. ಅಲ್ಲದೇ, ಜನಪ್ರಿಯ ಉದ್ಯಮಿ ಕೂಡ ಅವರಾಗಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್