ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ

By
1 Min Read

ಮೈಸೂರು: ಪ್ಯಾಕೇಜ್ ಟೂರ್‌ನಲ್ಲಿ (Package Tour) ಕುಲು ಮನಾಲಿ (Manali) ಪ್ರವಾಸಕ್ಕೆಂದು (Tour) ತೆರಳಿದ್ದ ಮೈಸೂರಿನ (Mysuru) ನಾಲ್ವರು ಪ್ರವಾಸಿಗರು ನಾಪತ್ತೆಯಾಗಿದ್ದಾರೆ.

ಶ್ರೀನಿಧಿ, ನವ್ಯ, ವೀರ್ ಹಾಗೂ ಅವರ ಪತ್ನಿ ಮೈಸೂರಿನ ನಿವಾಸಿಗಳಾಗಿದ್ದು, ಕುಲು ಮನಾಲಿ ಪ್ರವಾಸಕ್ಕೆಂದು ಕಳೆದ ಗುರುವಾರ ಮೈಸೂರಿನಿಂದ ಹೊರಟಿದ್ದರು. ಪ್ರವಾಸಕ್ಕೆ ಹೋದ ಮೇಲೆ ಭಾನುವಾರ ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು, ಮಳೆ ಜಾಸ್ತಿ ಇದೆ, ರೆಡ್ ಅಲರ್ಟ್ ಘೋಷಣೆ ಮಾಡಿದ್ದಾರೆ. ನಾವು ಕೊಠಡಿಯಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ಇದನ್ನೂ ಓದಿ: ಒಂದೇ ಕುಣಿಕೆಗೆ ಕೊರಳೊಡ್ಡಿದ ತಾಯಿ-ಮಗಳು!

ಅದಾದ ಬಳಿಕ ಇದುವರೆಗೂ ಯಾರೊಬ್ಬರ ಬಗ್ಗೆಯೂ ಮಾಹಿತಿ ಇಲ್ಲ. ಈ ಬಗ್ಗೆ ಮನೆಯವರು ಆತಂಕಗೊಂಡಿದ್ದು, ಕುಟುಂಬಸ್ಥರ ಬಗ್ಗೆ ಮಾಹಿತಿ ನೀಡಿ ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ. ಇವರೊಂದಿಗೆ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಮಂದಿ ಪ್ರವಾಸಕ್ಕೆ ತೆರಳಿದ್ದು, ಯಾವ ಟ್ರ್ಯಾವಲ್ಸ್ ಎಂಬ ಬಗ್ಗೆ ಸಂಬಂಧಿಕರಿಗೆ ಸಮರ್ಪಕ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮನೆಯ ವಸ್ತುಗಳನ್ನು ಮಾರಿ ಕುಡಿದು ಮಜಾ ಮಾಡ್ತಿದ್ದ ಮಗನನ್ನು ಕೊಂದ ತಂದೆ!

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್