ಕನ್ನಡದಲ್ಲಿ ಮಾತನಾಡಿದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

By
1 Min Read

ನ್ನಡದ ‘ಕಿರಿಕ್ ಪಾರ್ಟಿ’ (Kirik Party) ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಈ ಹಿಂದೆ ರಶ್ಮಿಕಾ ಕನ್ನಡ ಮಾತನಾಡಲ್ಲ ಅಂತಾ ಗರಂ ಆಗಿದ್ದರು. ಈಗ ಪ್ರೀತಿಯಿಂದ ಮನಬಿಚ್ಚಿ ಕನ್ನಡ ಮಾತನಾಡಿದ್ದಾರೆ. ಈ ಕುರಿತ ಸಣ್ಣ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸ್ಯಾಂಡಲ್‌ವುಡ್‌ನ (Sandalwood) ‘ಕಿರಿಕ್ ಪಾರ್ಟಿ’ ಸಿನಿಮಾದಿಂದ ಬಣ್ಣದ ಬದುಕು ಶುರು ಮಾಡಿದ ನಟಿ, ಮೊದಲ ಸಿನಿಮಾದಲ್ಲೇ ಭರ್ಜರಿ ಸಕ್ಸಸ್ ಕಂಡರು. ಬಳಿಕ ಅಂಜನಿಪುತ್ರ, ಚಮಕ್, ಯಜಮಾನ, ಪೊಗರು (Pogaru) ಸಿನಿಮಾಗಳ ಮೂಲಕ ಮೋಡಿ ಮಾಡಿದ್ರು ಕೂರ್ಗ್ ಬ್ಯೂಟಿ. ಕಡೆಯದಾಗಿ ಧ್ರುವ ಸರ್ಜಾ ನಾಯಕಿಯಾಗಿ ಪೊಗರು ಸಿನಿಮಾದಲ್ಲಿ ನಟಿಸಿದ್ದರು. ಈಗ ಟಾಲಿವುಡ್- ಬಾಲಿವುಡ್ ಅಂತಾ ಅಲ್ಲೇ ಸೆಟಲ್ ಆಗಿದ್ದಾರೆ. ಇದನ್ನೂ ಓದಿ:ಸ್ಟಾರ್ ನಟನ ಪುತ್ರನಿಂದ ಟಾರ್ಚರ್, ಈ ಸುದ್ದಿ ನಿಜಾನಾ? ಕೃತಿ ಶೆಟ್ಟಿ ಸ್ಪಷ್ಟನೆ

ಸದ್ಯ ಅವರು ತಮಗೆ ಕನ್ನಡದ ಮೇಲೆ ಇರುವ ಅಭಿಮಾನವನ್ನ ತೋರಿಸಿದ್ದಾರೆ. ಇನ್ಸ್ಟಾಗ್ರಾಂ ಖಾತೆಯಲ್ಲಿ ಫ್ಯಾನ್ಸ್‌ಗಾಗಿ ಪ್ರಶ್ನಾವಳಿಯನ್ನ ನಟಿ ಮಾಡಿದ್ದಾರೆ. ಆಗ ಅವರಿಗೆ ಬಗೆ ಬಗೆಯ ಪ್ರಶ್ನೆಗಳು ಎದುರಾಗಿದೆ. ಅದರಲ್ಲಿ ಕನ್ನಡದಲ್ಲಿ (Kannada) ಮಾತನಾಡಿ ಎಂದು ಅಭಿಮಾನಿಯೊಬ್ಬರು ಕೇಳಿದ್ದಾರೆ. ಅದಕ್ಕೆ ನಟಿ ಕೂಡ ಉತ್ತರಿಸಿದ್ದಾರೆ. ಖುಷಿಯಿಂದ ಮಾತನಾಡಿದ್ದಾರೆ.

ಹಾಯ್, ಎಲ್ಲರೂ ಹೇಗಿದ್ದೀರಾ, ಚೆನ್ನಾಗಿದ್ದೀರಾ? ಯಾವಾಗಲೂ ನಗುತ್ತಾಯಿರಿ ನಾನು ನಿಮ್ಮ ಬಗ್ಗೆ ಯೋಚನೆ ಮಾಡುತ್ತಾ ಇದ್ದೀನಿ. ಯಾವಾಗಲೂ ಯೋಚನೆ ಮಾಡುತ್ತಾ ಇರುತ್ತೀನಿ. ಸೆಡಿಂಗ್ ಯೂ ಲವ್ ಎಂದು ರಶ್ಮಿಕಾ ಮಂದಣ್ಣ ವೀಡಿಯೋದಲ್ಲಿ ಹೇಳಿದ್ದಾರೆ. ಈ ಪ್ರಶ್ನಾವಳಿ ಮೂಲಕ ನಟಿ ಕನ್ನಡದಲ್ಲೇ ಮಾತನಾಡಿದ್ದಾರೆ.

ಸದ್ಯ ರಣ್‌ಬೀರ್ ಕಪೂರ್(Ranbir Kapoor)-ರಶ್ಮಿಕಾ ನಟನೆಯ ಸಿನಿಮಾ ‘ಅನಿಮಲ್’ (Animal) ಈ ವರ್ಷದ ಅಂತ್ಯಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಪುಷ್ಪ 2, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೂರ್ಗ್ ಬ್ಯೂಟಿ ಬ್ಯುಸಿಯಾಗಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್