‘ಕಾಂತಾರ 2’ ಬಗ್ಗೆ ಸಿಕ್ತು ಭರ್ಜರಿ ಅಪ್ ಡೇಟ್ : ರಿಷಬ್ ಹೇಳಿದ್ದು ಇಷ್ಟು..

Public TV
1 Min Read

ನಿನ್ನೆಯಷ್ಟೇ ಹುಟ್ಟು ಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅವರ ಮುಂದಿನ ಸಿನಿಮಾಗಳ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕಾಂತಾರ (Kantara) ಚಿತ್ರದ ಬಗ್ಗೆ ಮಾತನಾಡಿದ ಅವರು, ಸದ್ಯ ಬರವಣಿಗೆಯ ಕೆಲಸ ಮುಗಿದಿದೆ ಎಂದಿದ್ದಾರೆ. ಡೈಲಾಗ್ ಲಾಕ್ ಆಗಿರುವ ಕುರಿತು ಹೇಳಿಕೊಂಡಿದ್ದಾರೆ.

ಸಿನಿಮಾದ ಬರವಣಿಗೆಯ ಕೆಲಸವನ್ನು ಮುಗಿಸಿರುವೆ. ಲೋಕೇಶನ್ ಹುಡುಕಾಟ ನಡೆದಿದೆ. ಕಲಾವಿದರ ಆಯ್ಕೆಯಾಗಬೇಕಿದೆ. ಈ ಸಿನಿಮಾದ ಪಾತ್ರಕ್ಕಾಗಿ ಮತ್ತಷ್ಟು ಉದ್ದದ ಗಡ್ಡ ಬಿಡಬೇಕು. ಮಳೆಯಲ್ಲೇ ಚಿತ್ರೀಕರಣ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇನೆ. ಮುಹೂರ್ತ, ಶೂಟಿಂಗ್ ಮತ್ತಿತರ ಬಗ್ಗೆ ನಿರ್ಮಾಣ ಸಂಸ್ಥೆಯೇ ಮಾಹಿತಿ ನೀಡಲಿದೆ ಎಂದಿದ್ದಾರೆ ರಿಷಬ್ ಶೆಟ್ಟಿ. ಇದನ್ನೂ ಓದಿ:ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಭೂರಿ ಭೋಜನ, ಭರ್ಜರಿ ತಯಾರಿ

ಸಿನಿಮಾಗಳ ಜೊತೆಗೆ ಸಮಾಜ ಸೇವೆಗೂ ರಿಷಬ್ ಅಂಡ್ ಟೀಮ್ ರೆಡಿಯಾಗಿದೆ. ಈ ಕುರಿತು ರಿಷಬ್ ಶೆಟ್ಟಿ ಸ್ನೇಹಿತ ಪ್ರಮೋದ್ ಶೆಟ್ಟಿ ಮಾತನಾಡುತ್ತಾ,  ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಜವಾಬ್ದಾರಿಯನ್ನು ರಿಷಬ್ ವಹಿಸುತ್ತಿದ್ದರು, ಆದರೆ ಯಾರಿಗೂ ಬಹಿರಂಗ ಪಡಿಸಿರಲಿಲ್ಲ’ ಎಂದು ರಿಷಬ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಯಾವುದೇ ಉಡಗೊರೆಯನ್ನ ಇಷ್ಟ ಪಡದ ತಮ್ಮ ಗಂಡನಿಗೆ, ಹುಟ್ಟುಹಬ್ಬದ ಉಡುಗೊರೆಯಾಗಿ  ‘ರಿಷಬ್ ಶೆಟ್ಟಿ ಫೌಂಡೇಶನ್’ ಎಂಬ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ನೀಡುವ ಸಂಸ್ಥೆಯನ್ನು ರಿಷಬ್ ಅವರ ಹುಟ್ಟುಹಬ್ಬದ ದಿನದಿಂದಲೇ ಆರಂಭಿಸುವುದಾಗಿ ಪ್ರಗತಿ ರಿಷಬ್  ಶೆಟ್ಟಿ ತಿಳಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್