5 ಗ್ಯಾರಂಟಿ ಜಾರಿಗೆ ತೆರಿಗೆ ಏರಿಕೆ, 85ಸಾವಿರ ಕೋಟಿ ಸಾಲಕ್ಕೆ ನಿರ್ಧಾರ – ಯಾವ ತೆರಿಗೆ ಎಷ್ಟು ಏರಿಕೆ?

Public TV
3 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು (CM Siddaramaiah) ದಾಖಲೆಯ 14ನೇ ಬಜೆಟ್ (Karnataka Budget) ಮಂಡಿಸಿದ್ದು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವ ಅನುಸರಿಸಿ ಅಯವ್ಯಯ ಮಂಡಿಸಿದ್ದಾರೆ. ಗ್ಯಾರಂಟಿ ಭಾಗ್ಯಗಳ (Guarantee Scheme) ಜೊತೆಗೆ ಸರ್ವರಿಗೂ ತೆರಿಗೆ ಹೊರೆಯನ್ನು ಹೊರಿಸಿದ್ದಾರೆ.

ಮಧ್ಯಾಹ್ನ 12:9ಕ್ಕೆ ಸರಿಯಾಗಿ 128 ಪುಟಗಳ ಬಜೆಟ್ ಪ್ರತಿ ಓದಲು ಓದಲು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ 2:55ಕ್ಕೆ ಭಾಷಣ ಮುಗಿಸಿದರು. ಬಜೆಟ್ ಗಾತ್ರ ಕಳೆದ ಬಾರಿಗಿಂತ 18,000 ಕೋಟಿ ಹೆಚ್ಚಾಗಿದೆ. ಅಯವ್ಯಯದ ಒಟ್ಟು ಗಾತ್ರ 3,27,747 ಕೋಟಿ ರೂ. ತಲುಪಿದೆ. ಈ ವರ್ಷ 5 ಗ್ಯಾರಂಟಿಗಳ ಅನುಷ್ಠಾನಕ್ಕಾಗಿ 35,000 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ.

ಬಸವರಾಜ ಬೊಮ್ಮಾಯಿ (Basavaraj Bommai) ಈ ಬಾರಿ 3,09,182 ಕೋಟಿ ರೂ. ಬಜೆಟ್‌ ಮಂಡಿಸಿದ್ದರು. ಹೆಚ್ಚುವರಿ ಹಣ ಹೊಂದಿಸಲು 85 ಸಾವಿರ ಕೋಟಿ ರೂ. ಸಾಲ ಮಾಡಲು ಸರ್ಕಾರ ಮುಂದಾಗಿದೆ.

ಪಂಚ ಗ್ಯಾರಂಟಿಗಳಿಗೆ ಎಷ್ಟು ಹಣ?
ಈ ವರ್ಷದ ಆಗಸ್ಟ್‌ನಿಂದ ಮಾರ್ಚ್‌ವರೆಗೆ ಒಟ್ಟು 35,410 ಕೋಟಿ ರೂ. ಅಗತ್ಯವಿದೆ. ಮುಂದಿನ ಹಣಕಾಸು ವರ್ಷದಲ್ಲಿ ವಾರ್ಷಿಕ 52,062 ಕೋಟಿ ರೂ.ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ Vs ಬೊಮ್ಮಾಯಿ – ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?

ಯಾವುದಕ್ಕೆ ಎಷ್ಟು?
– ಅನ್ನ ಭಾಗ್ಯ -10,275 ಕೋಟಿ ರೂ.
– ಶಕ್ತಿ ಯೋಜನೆ -2,800 ಕೋಟಿ ರೂ.(ವಾರ್ಷಿಕ 4,000 ಕೋಟಿ ರೂ.)
– ಗೃಹ ಜ್ಯೋತಿ – 9,000 ಕೋಟಿ ರೂ.(ವಾರ್ಷಿಕ 13,500 ಕೋಟಿ ರೂ.)
– ಗೃಹ ಲಕ್ಷ್ಮಿ – 17,500 ಕೋಟಿ ರೂ.(ವಾರ್ಷಿಕ 30,000 ಕೋಟಿ ರೂ.)
– ಯುವನಿಧಿ – 250 ಕೋಟಿ ರೂ.(ವಾರ್ಷಿಕ 1,000 ಕೋಟಿ ರೂ.)

ಜನ ಸಾಮಾನ್ಯರಿಗೆ ತೆರಿಗೆಯ ಭಾರ
ಗ್ಯಾರಂಟಿ ಯೋಜನೆಗಳಿಗೆ ಅನುದಾನ ಹೊಂದಿಸುವ ಸಲುವಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಅಬಕಾರಿ ಸುಂಕ, ಆಸ್ತಿ ನೋಂದಣಿ ದರ, ವಾಹನ ನೋಂದಣಿ ದರವನ್ನು ಹೆಚ್ಚಿಸಿದ್ದಾರೆ. ಈ ಮೂಲಕ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆಯನ್ನು ಹಾಕಿದ್ದಾರೆ.

ಮದ್ಯ ದುಬಾರಿ
– ಅಬಕಾರಿ ಸುಂಕ 20%ರಷ್ಟು ಹೆಚ್ಚಳ
– ಘೋಷಿತ 18 ಸ್ಲಾಬ್‍ಗಳ ಮೇಲಿನ ಸುಂಕ ಹೆಚ್ಚಳ
– ಎಲ್ಲಾ ರೀತಿಯ ಮದ್ಯಗಳ ದರ ಏರಿಕೆ
– ಬಿಯರ್ ಮೇಲಿನ ಹೆಚ್ಚುವರಿ ಸುಂಕ 10% ಹೆಚ್ಚಳ ( 175 %ರಿಂದ 185% ಹೆಚ್ಚಳ)

ಅಬಕಾರಿ ತೆರಿಗೆ ಸಂಗ್ರಹ ಗುರಿ ಹೆಚ್ಚಳ
– 2022-23ರ ಬಜೆಟ್ – 29,000 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 36,000 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ: 7,000 ಕೋಟಿ

ಆಸ್ತಿ ನೋಂದಣಿ ದುಬಾರಿ
ರಾಜ್ಯದ ಎಲ್ಲಾ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗಿದೆ. ಇದರಿಂದಾಗಿ ಆಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳವಾಗಲಿದೆ.  ಇದನ್ನೂ ಓದಿ: Karnataka Budget: 1 ರೂಪಾಯಿ ಬಂದಿದ್ಹೇಗೆ? ಹೋಗಿದ್ದು ಹೇಗೆ?

ಮುದ್ರಾಂಕ, ನೋಂದಣಿ ಗುರಿ ಎಷ್ಟು?
– 2022-23ರ ಬಜೆಟ್ – 15,000 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 25,000 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ 10,000 ಕೋಟಿ

ವಾಹನ ನೋಂದಣಿ ದುಬಾರಿ
– ಮೋಟಾರು ವಾಹನ ತೆರಿಗೆ ಪರಿಷ್ಕರಣೆ
– ವಾಹನ ಮೋಟಾರ್ ತೆರಿಗೆ ಶೇ.7ರಷ್ಟು ಹೆಚ್ಚಳ
– ಆಯ್ದ ವಾಹನಗಳಿಗೆ ತೆರಿಗೆ ಹೆಚ್ಚಳ
– ಕಾರು, ಬೈಕ್, ವಾಹನಗಳ ನೋಂದಣಿ ದುಬಾರಿ

 


ಮೊಟಾರು ವಾಹನ ತೆರಿಗೆ ಗುರಿ ಎಷ್ಟು?
– 2022-23ರ ಬಜೆಟ್ – 8,007 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 11,500 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ: 3,493 ಕೋಟಿ

ವಾಣಿಜ್ಯ ತೆರಿಗೆ ಗುರಿ ಎಷ್ಟು?
– 2022-23ರ ಬಜೆಟ್ – 72,010 ಕೋಟಿ ರೂ. ಸಂಗ್ರಹ ಗುರಿ
– 2023-24ರ ಬಜೆಟ್ – 98,650 ಕೋಟಿ ರೂ. ಸಂಗ್ರಹ ಗುರಿ
– ಸಿದ್ದು ಸರ್ಕಾರದ ಹೆಚ್ಚುವರಿ ಸಂಗ್ರಹ ಗುರಿ: 26,640 ಕೋಟಿ

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್