ಮೂಲಭೂತ ಸೌಕರ್ಯವಿಲ್ಲದೇ ಕುಗ್ಗಿದ ಜನ- ಪಯಸ್ವಿನಿ ನದಿಗೆ ಬಿದಿರಿನ ಸೇತುವೆ ಸಂಕಷ್ಟ

Public TV
2 Min Read

– ಬಂಡಡ್ಕ ಗ್ರಾಮಸ್ಥರ ನೋವಿನ ಕಥೆ

ಮಡಿಕೇರಿ: ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇವರಿಗೆ ಮಾತ್ರ ಇಂದಿಗೂ ಮೂಲಭೂತ ಸೌಕರ್ಯಗಳನ್ನು ನೀಡದೇ ಇರುವುದರಿಂದ ಸಂಕಷ್ಟದ ಬದುಕು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ವರ್ಷಗಳಿಂದ ಆ ಕಾಡಿನಲ್ಲೇ ವಾಸ ಇರುವ ಕಾರಣ ಜನರಿಗೆ ರಸ್ತೆ ವಿದ್ಯುತ್ ಇಲ್ಲದೇ ಪರಿತಪ್ಪಿಸುತ್ತಿದ್ದಾರೆ.

ಹೌದು. ಕೊಡಗು (Kodagu) ಜಿಲ್ಲೆಯ ಸಂಪಾಜೆ (Sampaje) ಗ್ರಾ.ಪಂ ವ್ಯಾಪ್ತಿಯ ಬಂಡಡ್ಕ ಗ್ರಾಮದಲ್ಲಿ (Bandadka) ಸುಮಾರು ನೂರಾರು ವರ್ಷಗಳಿಂದ ಐದು ಮನೆಯ ಕುಟುಂಬ ಸದಸ್ಯರು ಜೀವನ ನಡೆಸುತ್ತಿದ್ದಾರೆ. ಇವರಿಗೆ ಈವರೆಗೂ ರಸ್ತೆ ಆಗಲಿ, ವಿದ್ಯುತ್ ಸೌಕರ್ಯವಾಗಲಿ ಸಿಕ್ಕಿಲ್ಲ. ಅದರಲ್ಲೂ ಪ್ರತಿ ಮಳೆಗಾಲದ (Rain) ಸಂದರ್ಭದಲ್ಲಿ ಅನಾರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತೆ. ಇಲ್ಲಿನ ಮಕ್ಕಳು ಮಳೆಗಾಲ ಅರಂಭವಾಗಿ ಮಳೆ ಕಡಿಮೆ ಅಗುವವರೆಗೂ ಶಾಲಾ-ಕಾಲೇಜು, ಅಂಗನವಾಡಿಗಳಿಗೂ ತೆರಳದೇ ಮನೆಯಲ್ಲೇ ಇರುವ ಪರಿಸ್ಥಿತಿ ಇದೆ. ತುರ್ತು ಪರಿಸ್ಥಿತಿ ಎದುರಾದ್ರೆ ಇಲ್ಲಿನ ಜನ ಈ ಪಯಸ್ವಿನಿ ನದಿಗೆ (Payaswini River) ಅಡ್ಡಲಾಗಿ ಕಟ್ಟಿದ ಹಗ್ಗವನ್ನು ಹಿಡಿದು ಜೀವದ ಹಂಗು ತೊರೆದು ದಾಟುವ ಸ್ಥಿತಿ ಇದೆ.

ಈ ಬಂಡಡ್ಕ ಗ್ರಾಮದ ಜನರು ಅರಣ್ಯ ಪ್ರದೇಶದಲ್ಲಿ ವಾಸ ಇದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಇಂದಿಗೂ ಇವರಿಗೆ ಸರ್ಕಾರದಿಂದ ಯಾವ ಸೌಲಭ್ಯಗಳು ಸಿಕ್ಕಿಲ್ಲ. ಕೇವಲ ಇವರ ಬಳಿ ಹಕ್ಕು ಪತ್ರ ಮಾತ್ರ ಇದೆಯೇ ಹೊರತು ಬೇರೆ ಯಾವ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಮಳೆಗಾಲದ ಸಂದರ್ಭ ನ್ಯಾಯಬೆಲೆ ಅಂಗಡಿಗೆ ಹೋಗಿ ರೇಷನ್ ತರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ಶಂಖಪಾಲ ಸೇತುವೆ ಮಾಡಿಕೊಳ್ಳಲು 20 ಸಾವಿರ ಹಣವನ್ನ ಗ್ರಾ.ಪಂ. ನೀಡುತ್ತೆ. ಆದರೆ ಜೋರು ಮಳೆ ಬರುವ ಸಂದರ್ಭದಲ್ಲಿ ಬಿದಿರಿನಿಂದ ಮಾಡಿರುವ ಸೇತುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಹೀಗಾಗಿ ಮಳೆಗಾಲ ಕಳೆಯುವವರೆಗೂ ಇಲ್ಲಿನ ನಿವಾಸಿಗಳು ಹೊರ ಜಗತ್ತಿಗೆ ಬರೋದೆ ಇಲ್ಲ. ಇದನ್ನೂ ಓದಿ: ಸಂಪಾಜೆಯ ಕೊಯನಾಡು ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ

ಒಟ್ಟಿನಲ್ಲಿ ಆಧುನಿಕ ಜಗತ್ತು ಬೆಳೆಯುತ್ತಿದ್ದರೂ ಇಲ್ಲಿಯ ಜನಗಳಿಗೆ ಮಾತ್ರ ಅಧುನಿಕತೆಯೊಂದಿಗೆ ಮೂಲಭೂತ ಸೌಕರ್ಯ ನೀಡದೇ ಇರುವುದು ಅಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್