ಪ್ರತಿ ಆರ್ಡರ್‌ನಲ್ಲೂ ಚಾಕ್ಲೇಟ್ ಇಟ್ಟು ಹುಟ್ಟುಹಬ್ಬ ಆಚರಿಸಿದ ಝೋಮ್ಯಾಟೋ ಸಿಬ್ಬಂದಿ!

By
1 Min Read

ನವದೆಹಲಿ: ಝೊಮ್ಯಾಟೋ ಡೆಲಿವರಿ ಸಿಬ್ಬಂದಿ (Zomato Delivery Executive) ಒಬ್ಬ ತನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿರುವ ಘಟನೆ ನಡೆದಿದೆ.

ಯುವಕನನ್ನು ಕರಣ್ ಆಪ್ಟೆ (Karan Apte Birthday) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕರಣ್ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಬೇಕು ಎಂಬುದಾಗಿ ನಿರ್ಧರಿಸಿದ್ದಾರೆ.‌

ಮೊದಲು ತನಗೊಂದು ಹೊಸ ಬಟ್ಟೆಯನ್ನು ಖರೀದಿಸಿದ್ದಾರೆ. ನಂತರ ತಾನು ಡೆಲಿವರಿ ಮಾಡುವ ಆಹಾರದಲ್ಲಿ ಚಾಕ್ಲೇಟ್ ಇಟ್ಟು ಗ್ರಾಹಕರಿಗೆ ತಲುಪಿಸಿದ್ದರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಶೂಟೌಟ್‍ನಲ್ಲಿ ಗಾಯಗೊಂಡಿರುವ ಭೀಮ್ ಆರ್ಮಿ ಮುಖ್ಯಸ್ಥನಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್ 

ಗ್ರಾಹಕರಿಗೆ ಕೊಡುವ ಫುಡ್ ಮೇಲೆ ಚಾಕ್ಲೇಟ್ ಇಟ್ಟು ನೀಡುತ್ತಿಒರುವ ಫೋಟೋವೊಂದನ್ನು ಆಪ್ಟೆ ತನ್ನ ಫೇಸ್‍ಬುಕ್ (Facebook) ಅಕೌಂಟ್‍ನಿಂದ ಶೇರ್ ಮಾಡಿದ್ದಾರೆ. ಈ ಫೋಟೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಆಪ್ಟೆ ತಾನು ಶೇರ್ ಮಾಡಿದ ಫೋಟೋ ಜೊತೆಗೆ ಇವತ್ತು ನನ್ನ ಹುಟ್ಟುಹಬ್ಬ. ಹೀಗಾಗಿ ನನಗೊಂದು ಹೊಸ ಬಟ್ಟೆ ಖರೀದಿಸಿದ್ದೇನೆ. ಅಲ್ಲದೆ ನಾನು ಝೊಮ್ಯಾಟೋದಲ್ಲಿ ವಿತರಿಸಿದ ಪ್ರತಿಯೊಂದು ಆರ್ಡರ್‍ನೊಂದಿಗೆ ಚಾಕ್ಲೇಟ್‍ಗಳನ್ನೂ ನೀಡಿದ್ದೇನೆ. ಈ ಮೂಲಕ ಇನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದೇನೆ ಎಂದು ಆಪ್ಟೆ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ನೋಡಿದ ಕೆಲವರು, ಈ ಯುವಕನ ಹುಟ್ಟುಹಬ್ಬವನ್ನು ಝೋಮ್ಯಾಟೋ ಕಂಪನಿ ಆಚರಿಸಿ ಆತನಿಗೆ ಒಂದು ಉತ್ತಮ ಉಡುಗೊಡೆಯನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಈ ರೀತಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯುವಕನಿಗೆ ಶುಭಾಶಯಗಳು ಸುರಿಮಳೆಗೈದಿದ್ದಾರೆ. ಈ ಬೆನ್ನಲ್ಲೇ ಝೋಮ್ಯಾಟೋ ಕಂಪನಿ ಕೂಡ ಯುವಕನಿಗೆ ಕೇಕ್ ಕಳುಹಿಸಿದೆ. ಇದರ ಫೋಟೋವನ್ನು ಕೂಡ ಆಪ್ಟೆ ತನ್ನ ಫೇಸ್‍ಬುಕ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಥ್ಯಾಂಕ್ಯೂ ಎಂದು ಆಪ್ಟೆ ಹೇಳಿದ್ದಾರೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್