ಸ್ಟಾರ್ ನಟಿಯರ ತೆರೆ ಹಿಂದಿನ ಕಹಾನಿ : ಡ್ರಗ್ಸು, ಸೆಕ್ಸ್, ಪ್ರೀತಿ, ಗೀತಿ ಇತ್ಯಾದಿ

Public TV
3 Min Read

ಬ್ಬೊಬ್ಬರದ್ದು ಒಂದೊಂದು ಕತೆ. ಈ ಹೀರೋಯಿನ್ ಗಳಿಗೆ ಯಾರಾದರೊಬ್ಬರು ಕಿರಿಕ್ ಮಾಡುತ್ತಲೇ ಇರುತ್ತಾರೆ. ಅದಕ್ಕೆ ಇವರೆಲ್ಲ ಕಣ್ಣೀರು ಸುರಿಸುತ್ತಿರುತ್ತಾರೆ. ಪುರುಷ ಪ್ರಧಾನ ಬಣ್ಣದ ಲೋಕದಲ್ಲಿ ಇದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಹೆಣ್ಣನ್ನು ಒಂದು ರೀತಿ ನೋಡುವುದೇ ಪುರುಷರ ಸಂಪ್ರದಾಯ. ಆದರೂ ಹೀರೋಯಿನ್ಸ್ ಹೋರಾಟ ಮಾಡುತ್ತಿದ್ದಾರೆ. ಏನಾಯಿತೀಗ ಚಾಲ್ತಿಯಲ್ಲಿರುವ ನಾಯಕಿಯರಿಗೆ? ಅದ್ಯಾವ ಕಂಟಕ ಎದುರಾಗಿದೆ? ಇಲ್ಲಿದೆ ಸ್ಟೋರಿ.

ಶ್ರೀಲೀಲಾ 

ಶ್ರೀಲೀಲಾ (Sreeleela) ಕೆಲವು ವರ್ಷಗಳ ಹಿಂದೆ ಅವಕಾಶಕ್ಕಾಗಿ ಒದ್ದಾಡುತ್ತಿದ್ದ ಈ ಕನ್ನಡತಿ ಈಗ ಟಾಲಿವುಡ್‌ನಲ್ಲಿ ಎದ್ವಾತದ್ವಾ ಬ್ಯುಸಿ. ಕೈಯಲ್ಲಿ ಎಂಟು ಹತ್ತು ಸಿನಿಮಾಗಳಿವೆ. ಸ್ಟಾರ್ ಹೀರೋಸ್ ಈಕೆಯ ಕಾಲ್‌ಶೀಟ್‌ಗೆ ಕಾಯುತ್ತಿದ್ದಾರೆ. ಇಷ್ಟಿದ್ದರೂ ಗೊಳೋ ಎನ್ನುವಂತಾಗಿದೆ ಶ್ರೀಲೀಲಾ ಬದುಕು. ಕಾರಣ ಪ್ರಿನ್ಸ್ ಮಹೇಶ್ ಬಾಬು ನಾಯಕನಾಗಿರುವ ಗುಂಟೂರು ಖಾರಂ ಸಿನಿಮಾಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಇವರು, ಅದೇ ಸ್ಥಾನದಲ್ಲಿ ಮುಂದುವರೆಯಬೇಕಾಗಿದೆ. ಫಸ್ಟ್ ಹೀರೋಯಿನ್ ಜಾಗದಲ್ಲಿ ಮೀನಾಕ್ಷಿ ಚೌಧರಿ ಕುಲುಕುಲು.

ಪೂಜಾ ಹೆಗಡೆ ಫಸ್ಟ್ ಹೀರೋಯಿನ್ ಆಗಿದ್ದರು.  ಖಬರಿದಲ್ಲದ ಕಾರಣಗಳಿಂದ ಎದ್ದು ಹೋದರು. ಎರಡನೇ ನಾಯಕಿಯಾಗಿದ್ದ ಶ್ರೀಲೀಲಾಗೆ ಮೊದಲ ನಾಯಕಿ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಪ್ರಿನ್ಸ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಇಬ್ಬರೂ ಸೇರಿ ಲೀಲಾ ನೀನು ಬಾಲಂಗೋಚಿಯಾಗಿರು, ಮೀನಾಕ್ಷಿ ಪಟವಾಗಲಿ ಎಂದರು. ಫಿನಿಶ್, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಶ್ರೀಲೀಲಾಗೆ. ಪಾಲಿಗೆ ಬಂದದ್ದು ಪಂಚಾಮೃತ. ಅದೇ ಕಿಸ್ ಬೆಡಗಿ ಹಾಲಿ ವ್ರತ.

ತಮನ್ನಾ

ತಮನ್ನಾ (Tamannaah) ನಟಿಸಿರುವ ಲಸ್ಟ್ ಸ್ಟೋರೀಸ್ ವೆಬ್ ಸೀರೀಸ್ ಓಟಿಟಿ ಬಿಡುಗಡೆಗೆ ಒಂದು ದಿನ ಬಾಕಿ. ಪ್ರಚಾರ ಭರ್ಜರಿಯಾಗಿದೆ. ಆದರೆ ಈಗಾಗಲೇ ಹೊರ ಬಿದ್ದಿರುವ ಇದರ ಟ್ರೈಲರ್ ನೋಡಿದವರು ಮಿಲ್ಕಿಬ್ಯೂಟಿಗೆ ಎಲೆ ಅಡಿಕೆ ಹಾಕಿಕೊಂಡು ಕ್ಯಾಕರಿಸುತ್ತಿದ್ದಾರೆ. ವರ್ಷದ ಹಿಂದೆ ಲಿಪ್‌ಲಾಕ್ ಮಾಡೋಕೆ ನಾಚಿ ನೀರಾಗುತ್ತಿದ್ದ ಈ ಚೆಲುವೆ ಈಗ ಕೆಂಗೇರಿ ನೀರಿನಲ್ಲೂ ಜಳಕ ಮಾಡಲು ಹಿಂಜರಿಯುತ್ತಿಲ್ಲ. ಸಬ್ ಪೈಸಾ ಕಾ ಮಾಮ್ಲಾ ಹೈ ಎನ್ನುತ್ತಿದ್ದಾರೆ ಆಕೆಯ ಫ್ಯಾನ್ಸು.

ಈ ವೆಬ್ ಸೀರೀಸ್‌ನಲ್ಲಿ ತಮನ್ನಾ ಬರೀ ಲಿಪ್‌ಲಾಕ್ ಮಾತ್ರ ಮಾಡಿಲ್ಲ. ಬೆಡ್‌ರೂಮ್ ದೃಶ್ಯಗಳಲ್ಲಿ ಬೆದರಿಲ್ಲ, ಬೆಂಡಾಗಿಲ್ಲ. ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜತೆ ಕೆನೆದು ಕುಣಿದಿದ್ದಾಳೆ. `ನಮ್ಮ ಸಂಸ್ಕೃತಿಗೆ ನೀನೊಂದು ಕಪ್ಪು ಚುಕ್ಕೆ. ದುಡ್ಡಿಗಾಗಿ ಸೀ ಗ್ರೇಡ್ ನಟಿಯಾದೆಯಾ?’ ಹೀಗಂತ ಜನರು ಎಣ್ಣೆ ಇಲ್ಲದೆ ಒಗ್ಗರಣೆ ಹಾಕುತ್ತಿದ್ದಾರೆ. ಯಾರು ಏನೆಂದರೆ ನಂಗೇನು ? ಜಮಾನಾ ಬದಲ್ ಗಯಾ ಹೈ. ನಾನೂ ಬದಲಾಗಿದ್ಧೇನೆ ಎನ್ನುವುದು ತಮನ್ನಾ ಸಿಂಗಲ್ ಸ್ಲೋಗನ್ನು.

ಶ್ರುತಿ ಹಾಸನ್ 

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ (Shruti Haasan) ಮತ್ತೆ ಹೆದ್ದಾರಿಯಲ್ಲಿ ಬಂದು ನಿಂತಿದ್ದಾರೆ. ನಟ ಸಿದ್ಧಾರ್ಥ್ ಜೊತೆ ಸಂಬಂಧ ಮುರಿದುಕೊಂಡ ಮೇಲೆ ಇನ್ನೊಬ್ಬನ ಜೊತೆ ಡಿಂಗ್‌ಡಾಂಗ್ ಮಾಡುತ್ತಿದ್ದರು. ಈಗ ಶಂತನು ಹಜಾರಿಕಾ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ವಿಷಯ ಅದಲ್ಲ, ಈಕೆ ನಿತ್ಯ ಬಾಯ್‌ಫ್ರೆಂಡ್ ಕಮ್ ಅನಧಿಕೃತ ಗಂಡನ ಜೊತೆ ಡ್ರಗ್ಸ್ (Drugs) ಏರಿಸುತ್ತಾಳೆ. ಅದಕ್ಕಾಗಿ ಡಿಪ್ರೆಶನ್‌ಗೆ ಹೋಗಿ ಹೊರಬರಲು ಮಾತ್ರೆ ನುಂಗುತ್ತಿದ್ದಾಳೆ. ಅಷ್ಟೆ ಅಲ್ಲ, ಶ್ರುತಿ ಪಕ್ಕಾ ಸೈಕೋ. ಹೀಗಂದಿದ್ದಾನೆ ದುಬೈ ಬಾಬಾ.

ಡ್ರಗ್ಸು, ಡಿಪ್ರೆಶನ್ನು, ಮಾತ್ರೆ, ಸೈಕೋ… ಈ ಆರೋಪಗಳನ್ನು ಮಾಡಿದ್ದಾನೆ ದುಬೈನಲ್ಲಿ ಕುಂತಿರುವ ಸ್ವಯಂ ಘೋಷಿತ ವಿಮರ್ಶಕ ಉಮೈರ್ ಸಂಧು. ಈ ಹಿಂದೆ ಪ್ರಭಾಸ್, ಸಮಂತಾ ಬಗ್ಗೆಯೂ ನಾಲಿಗೆ ಅಲ್ಲಾಡಿಸಿದ್ದ. ಈಗ ಶ್ರುತಿ ಹಿಂದೆ ಬಿದ್ದಿದ್ದಾನೆ. ಇದರಲ್ಲಿ ಎಷ್ಟು ನಿಜ ಎಷ್ಟು ಸುಳ್ಳು ಗೊತ್ತಿಲ್ಲ. ಒಟ್ಟಿನಲ್ಲಿ ಶ್ರುತಿ ಹಾಸನ್ ಜೀವನ ಇದೇ ಆಗಿದ್ದರೆ, ಕಮಲ್ ಹಾಸನ್ ಜೀವನ ಪಾವನ ಆದಂಗೇಯಾ.

ಆಸಿನ್

ಅದೊಂದು ಕಾಲದ ಸ್ಟಾರ್ ನಟಿ ಆಸಿನ್ (Asin) ಬದುಕಲ್ಲಿ ಬಿರುಗಾಳಿ ಎದ್ದಿದೆಯಾ? ಏಳೆಂಟು ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿ ಸಿಇಓ ರಾಹುಲ್ ಶರ್ಮಾ ಜೊತೆ ಹಸೆಮಣೆ ಏರಿದ ಮೇಲೆ ನಾಪತ್ತೆಯಾಗಿದ್ದ ಈಕೆ ನಿಜಕ್ಕೂ ಗಂಡನಿಗೆ ಡಿವೋರ್ಸ್ (Divorce) ಕೊಡಲಿದ್ದಾರಾ? ಇಷ್ಟು ವರ್ಷವಾದರೂ ಮಕ್ಕಳಾದ ಸುದ್ದಿ ಬಂದಿಲ್ಲ. ಬಣ್ಣದ ಲೋಕ ಆಕೆ ಕಡೆ ಕಣ್ಣೆತ್ತಿ ನೋಡುತ್ತಿಲ್ಲ. ಹೀಗಿದ್ದರೂ ಯಾಕೆ ಆಸಿನ್ ಬದುಕನ್ನು ರಾಡಿ ಮಾಡಿಕೊಂಡರು? ಉತ್ತರ ಸಸ್ಪೆನ್ಸ್ ಆಫ್ ಬಾಲಿವುಡ್. ಆಸಿನ್ ಬೇರೆ ಯಾರೂ ಅಲ್ಲ, ಅಮೀರ್ ಗಜನಿ ಬೆಡಗಿ.

ಮಲಯಾಳಂ ಮೂಲದ ಆಸಿನ್ ನಂತರ ತಮಿಳು, ತೆಲುಗು ಹಾಗೂ ಬಾಲಿವುಡ್‌ನಲ್ಲಿ ಹೆಸರು ಮಾಡಿದರು. ಅಮೀರ್ ಖಾನ್ ಅಭಿನಯದ ಗಜನಿ ಹೆಸರು ತಂದಿತು. ಎಂಟು ವರ್ಷಗಳ ಹಿಂದೆ ಆಲ್ ಈಸ್ ವೆಲ್ ಸಿನಿಮಾ ನಂತರ ಹೊಸಿಲು ದಾಟಲಿಲ್ಲ. ಅಕ್ಕಿ ಸೇರು ಒದ್ದು ಬಾಗಿಲು ಹಾಕಿಕೊಂಡಿದ್ದೇ ಕೊನೆ. ಈಗ ಅದೇ ರಾಹುಲ್‌ಗೆ ಸೋಡಾ ಚೀಟಿ ಕೊಡಲು ತುದಿಗಾಲಲ್ಲಿ ನಿಂತಿದ್ಧಾರಂತೆ. ಬಣ್ಣದ ಮಂದಿ ಜೀವನ ಬೆಲ್ಲ ಇಲ್ಲದ ಹೂರಣ. ಎರಡೂ ಒಂದೇನಾ? ನೀವೇ ಡಿಸೈಡ್ ಮಾಡ್ರಪ್ಪಾ.

 

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್