ಬಕ್ರೀದ್ ಆಚರಣೆ – ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಭಾಗಿ

Public TV
2 Min Read

ಬೆಂಗಳೂರು: ಪವಿತ್ರ ಬಕ್ರೀದ್ ಹಬ್ಬ (Bakrid Festival) ಆಚರಣೆ ಹಿನ್ನೆಲೆಯಲ್ಲಿ ನಗರದ ಈದ್ಗಾ ಮೈದಾನದಲ್ಲಿ (EidgahMaidan) ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರೂ ಭಾಗಿಯಾಗಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಮುಸ್ಲಿಂ ಧರ್ಮಗುರುಗಳು ತಮ್ಮ ಸಂಪ್ರದಾಯದಂತೆ ಟೋಪಿ ಹಾಕಿ ಬರಮಾಡಿಕೊಂಡರು. ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ (Zameer Ahmed Khan) ಪುಸ್ತಕ ನೀಡಿ ಸ್ವಾಗತಿಸಿದರು. ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಅಲ್ಲಾ ಕೃಪೆಗೆ ಪಾತ್ರರಾದರು.

ನಂತರ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದ ಸಿಎಂ, ಇಂದು ಪ್ರಾರ್ಥನೆ ಮಾಡಿ ಮನುಕುಲಕ್ಕೆ ಒಳಿತಾಗಲೆಂದು ಕೇಳಿಕೊಂಡಿದ್ದೀರಿ. ಈ ಹಬ್ಬದ ದಿನ ಮುಸ್ಲಿಂ ಬಾಂಧವರೆಲ್ಲ ಸೇರಿದ್ದೀರಿ, ನಾನೂ ನಿಮ್ಮೊಂದಿಗೆ ಭಾಗಿಯಾಗಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Shakthi Scheme Effect- ಟ್ರಿಪ್‍ಗೆ ಹೋದ ಪತ್ನಿ ಮನೆಗೆ ಬಂದಿಲ್ಲವೆಂದು ಪತಿ ಅವಾಂತರ

ನಾವೆಲ್ಲರೂ ಮನುಷ್ಯರು ಪರಸ್ಪರ ಪ್ರೀತಿಯಿಂದ ಇರಬೇಕು. ನಮ್ಮಲ್ಲೇ ಕೆಲ ಶಕ್ತಿಗಳಿವೆ, ಇದಕ್ಕೆ ಅಡ್ಡಿಪಡಿಸಲು ಪ್ರಯತ್ನ ಮಾಡುತ್ತಿವೆ. ಅವುಗಳಿಗೆ ಸೊಪ್ಪು ಹಾಕಬಾರದು. ಎಲ್ಲಾ ಪ್ರೀತಿಯಿಂದ ಇದ್ದರೆ, ರಾಜ್ಯವೂ ಅಭಿವೃದ್ಧಿಯಾಗುತ್ತೆ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ಸಲಹೆ ನೀಡಿದರು.

ವಾಹನ ಸಂಚಾರದಲ್ಲಿ ಬದಲಾವಣೆ:
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜನೆಗೊಂಡಿದ್ದರಿಂದಾಗಿ ಮೈದಾನದ ಸುತ್ತಮುತ್ತ ಇರುವ ಮಾರ್ಗಗಳಲ್ಲಿ  ಸಂಚರಿಸುವ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಇದನ್ನೂ ಓದಿ: ತಹಶೀಲ್ದಾರ್ ಮನೆ ಮೇಲೆ ಮುಂದುವರೆದ ʼಲೋಕಾʼ ದಾಳಿ – ಬಗೆದಷ್ಟು ಸಿಗುತ್ತಿದೆ ಕೋಟಿಗಟ್ಟಲೇ ಆಸ್ತಿ

ನಗರದ ಬಸವೇಶ್ವರ ವೃತ್ತದಿಂದ ಸಿ.ಐ.ಡಿ ಜಂಕ್ಷನ್‌ವರೆಗಿನ ರಸ್ತೆ ನಿರ್ಬಂಧಿಸಿದ್ದು, ದೇವರಾಜ ಅರಸು ರಸ್ತೆಯಲ್ಲಿ ಸಂಚಾರ ಕಲ್ಪಿಸಲಾಗಿದೆ. ಲಾಲ್‌ಬಾಗ್ ಮುಖ್ಯದ್ವಾರದಿಂದ ಕಣ್ಣಪ್ಪ ಪೆಟ್ರೋಲ್ ಬಂಕ್‌ವರೆಗಿನ ರಸ್ತೆಯಲ್ಲಿ ಸಂಚಾರ ನಿಷೇಧಿಸಿದ್ದು, ವಿಲ್ಸನ್ ಗಾರ್ಡನ್ ಮುಖ್ಯರಸ್ತೆ, ಹೊಸೂರು ರಸ್ತೆಯಲ್ಲಿ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.

ಟೋಲ್‌ಗೇಟ್ ಜಂಕ್ಷನ್‌ನಿಂದ ಸಿರ್ಸಿ ವೃತ್ತದವರೆಗೆ ರಸ್ತೆ ಸಂಚಾರ ಬಂದ್ ಮಾಡಿದ್ದು, ಸಿರ್ಸಿ ವೃತ್ತದಲ್ಲಿ ಬಲಕ್ಕೆ ತಿರುವು ಪಡೆದು ಬಿನ್ನಿಮಿಲ್ ಟ್ಯಾಂಕ್‌ಬಂಡ್ ರಸ್ತೆಮಾರ್ಗವಾಗಿ ಮಾಗಡಿ ರಸ್ತೆ ವಿಜಯನಗರದ ಮೂಲಕ ಮೈಸೂರು ರಸ್ತೆಗೆ ಸಂಪರ್ಕಿಸಲು ಅನುವು ಮಾಡಿಕೊಡಲಾಗಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್