ತರಕಾರಿ ಖಾಲಿ ಆಗಿದ್ರೆ ಸೇವ್ ಬಳಸಿ ಮಾಡಿ ಸ್ಪೈಸಿ ಪಲ್ಯ

Public TV
2 Min Read

ಡುಗೆ ಮನೆಯಲ್ಲಿ ತರಕಾರಿ ಖಾಲಿ ಆದ್ರೆ, ಮಾರುಕಟ್ಟೆಗೆ ಹೋಗೋಕೆ ಮನಸ್ಸು ಇಲ್ಲ ಎಂದರೆ ನಿಮಗೊಂದು ಸೂಪರ್ ಪಲ್ಯ ರೆಸಿಪಿಯನ್ನು ನಾವಿಂದು ಹೇಳಿಕೊಡುತ್ತೇವೆ. ಮನೆಯಲ್ಲಿ ಕುರುಕಲು ತಿಂಡಿ ನೆಂಟರಿಷ್ಟರು ಬಂದಾಗ ಇರಲೇ ಬೇಕು. ಅದರಂತೆಯೇ ಸೇವ್ ಇದ್ದರೆ ನೀವು ಪಲ್ಯಕ್ಕೆ ತರಕಾರಿ ಇಲ್ಲ ಅಂತ ತಲೆಕೆಡಿಸಿಕೊಳ್ಳೋದು ಬೇಕೆಂದಿಲ್ಲ. ಇದೇ ಸೇವ್ ಬಳಸಿ ಸ್ಪೈಸಿ ಪಲ್ಯ ಮಾಡೋದು ಹೇಗೆಂದು ನಾವಿಂದು ನಿಮಗೆ ಹೇಳಿಕೊಡುತ್ತಿದ್ದೇವೆ. ಸ್ಪೈಸಿ ಸೇವ್ ಪಲ್ಯ ಮಾಡೋ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
ಸೇವ್ – 1 ಕಪ್ (ದಪ್ಪಗಿನ ಸೇವ್ ಬಳಸಿದರೆ ಉತ್ತಮ)
ಎಣ್ಣೆ – 4 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಗರಂ ಮಸಾಲೆ ಪುಡಿ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಹೆಚ್ಚಿದ ಈರುಳ್ಳಿ – 2
ಹೆಚ್ಚಿದ ಟೊಮೆಟೊ – 1
ದಾಲ್ಚಿನಿ ಎಲೆ – 2
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಕ್ರೀಮಿ ಮಕೈ ಕ್ಯಾಪ್ಸಿಕಮ್ – ಈ ಗುಜರಾತಿ ರೆಸಿಪಿ ಟ್ರೈ ಮಾಡಿ

ಮಾಡುವ ವಿಧಾನ:
* ಮೊದಲಿಗೆ ಒಂದು ಬೌಲ್‌ನಲ್ಲಿ ಅರಿಶಿನ, ಮೆಣಸಿನಪುಡಿ, ಉಪ್ಪು, ಗರಂ ಮಸಾಲೆ ಪುಡಿ, ಹಾಗೂ ಅದಕ್ಕೆ ಸ್ವಲ್ಪ ನೀರು ಸೇರಿಸಿ ಪೇಸ್ಟ್ ತಯಾರಿಸಿ ಪಕ್ಕಕ್ಕಿಡಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ದಾಲ್ಚಿನಿ ಎಲೆ ಹಾಕಿ ಫ್ರೈ ಮಾಡಿ.
* ಬಳಿಕ ಹೆಚ್ಚಿದ ಈರುಳ್ಳಿ ಹಾಗೂ ಮಸಾಲೆ ಪುಡಿಗಳ ಪೇಸ್ಟ್ ಸೇರಿಸಿ ಹುರಿದುಕೊಳ್ಳಿ.
* ನಂತರ ಟೊಮೆಟೊ, ಸೇವ್ ಹಾಗೂ ಕಾಲು ಕಪ್ ನೀರು ಸೇರಿಸಿ ಬೇಯಿಸಿ.
* ಬಳಿಕ ಕೊತ್ತಂಬರಿ ಸೊಪ್ಪು ಹಾಕಿ 2 ನಿಮಿಷ ಬೇಯಿಸಿ ಬಳಿಕ ಉರಿಯನ್ನು ಆಫ್ ಮಾಡಿ.
* ಇದೀಗ ಸ್ಪೈಸಿ ಸೇವ್ ಪಲ್ಯ ತಯಾರಾಗಿದ್ದು, ಇದನ್ನು ಬಿಸಿಬಿಸಿಯಾಗಿ ಊಟಕ್ಕೆ ಬಡಿಸಿ. ಇದನ್ನೂ ಓದಿ: ಟ್ರೈ ಮಾಡಿ ಕಾಬೂಲ್ ಕಡಲೆಯ ಟೇಸ್ಟಿ ಉಪ್ಪಿನಕಾಯಿ ರೆಸಿಪಿ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್