ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ‘COZ I LUV U’ ಆಲ್ಬಂ ರೆಡಿ

Public TV
2 Min Read

ತಂತ್ರಜ್ಞಾನ ಮುಂದುವರೆದಂತೆ ಅನೇಕ ಹೊಸ ಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂತಹ ವಿನೂತನ ಪ್ರಯತ್ನಕ್ಕೆ ‘COZ I LUV U’ ಆಲ್ಬಂ ( Album) ಹಾಡಿನ ಮೂಲಕ  ನಾಂದಿ ಹಾಡಿದ್ದಾರೆ  ಎಸ್ ಮಹೇಶ್ ಬಾಬು. ಇತ್ತೀಚೆಗೆ ಈ ಹಾಡಿನ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ಮಹೇಶ್ ಬಾಬು (Mahesh Babu) ಹಾಗೂ ತಂಡದವರು ಈ ಹೊಸ ಪ್ರಯತ್ನ ಬಗ್ಗೆ ಮಾತನಾಡಿದರು.

‘ನಾನು ಮೂಲತಃ ಊಟಿಯವನು. ಬೆಂಗಳೂರಿಗೆ ಬಂದು ಮೂರು ವರ್ಷಗಳಾಯಿತು. ನನಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) (Artificial Intelligence) ತಂತ್ರಜ್ಞಾನ ಬಳಸಿಕೊಂಡು  ಹೊಚ್ಚಹೊಸ ಪ್ರಯತ್ನ ಮಾಡಬೇಕೆಂದೆನಿಸಿತು. ಅದರ ಮೊದಲ ಹೆಜ್ಜೆಯಾಗಿ ಈ ಆಲ್ಬಂ ಸಾಂಗ್ ಮಾಡಿದ್ದೇನೆ. ಇದರ ವಿಶೇಷತೆ ಏನೆಂದರೆ ಈ ಹಾಡನ್ನು ಯಾವ ಗಾಯಕ-ಗಾಯಕಿಯೂ ಹಾಡಿಲ್ಲ. ಸಾಹಿತ್ಯವನ್ನು ಸಾಫ್ಟ್​ವೇರ್​ಗೆ ಫೀಡ್​ ಮಾಡಿ, ಗಂಡು ಮತ್ತು ಹೆಣ್ಣಿನ ಧ್ವನಿಯನ್ನು ಹೊಮ್ಮಿಸಿದ್ದೇನೆ’ ಎಂದರು  ಮಹೇಶ್ ಬಾಬು

ಮುಂದುವರೆದು ಮಾತನಾಡಿದ ಅವರು ‘ನನಗೆ ತಿಳಿದ ಹಾಗೆ ವಿಶ್ವದಲ್ಲೇ ಇದು ಮೊದಲ ಪ್ರಯೋಗ ಎನ್ನಬಹುದು. ನನಗೆ ಈ ಕುರಿತು ರಿಸರ್ಚ್ ಮಾಡಲು ಆರು ತಿಂಗಳು ಹಿಡಿಯಿತು. ನಾನೇ ಹಾಡು ಬರೆದು, ಸಂಗೀತ ನೀಡಿ,  AI ಟೆಕ್ನಾಲಜಿ, ಸಂಕಲನ, ಡಿ.ಐ, ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಇಂಗ್ಲಿಷ್ ಭಾಷೆಯಲ್ಲಿ ಈ ಹಾಡು (Song) ಮೂಡಿಬಂದಿದೆ. ಇಂಗ್ಲಿಷ್ ನಲ್ಲಿ ಮಾಡಲು ಕಾರಣವೆನೆಂದರೆ ಈ ಹೊಸ ತಂತ್ರಜ್ಞಾನ ವಿಶ್ವವ್ಯಾಪಿಯಾಗಬೇಕು ಎಂಬುದಾಗಿದೆ’ ಎಂದರು. ಇದನ್ನೂ ಓದಿ:ಹೊಸ ತಂಡದ ‘ಅಗ್ರಸೇನಾ’ ಪ್ರಯತ್ನಕ್ಕೆ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ

ಈ ತಂತ್ರಜ್ಞಾನವನ್ನು ಯಾವ ಭಾಷೆಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದು. ಮುಂದೆ ಕನ್ನಡ ರಾಜ್ಯೋತ್ಸವದ ಸಮಯಕ್ಕೆ ಇದೇ ತಂತ್ರಜ್ಞಾನದಿಂದ ಕನ್ನಡ ಹಾಡೊಂದನ್ನು ಮಾಡುತ್ತೇನೆ. ಆಲ್ಬಂ ಹಾಡು ಮಾಡುವುದಕ್ಕೂ ಮುನ್ನ ಕೊರೋನ ಕಾಲದಲ್ಲಿ ಪ್ರಾಪ್ತಿ ಎಂಬ ಕನ್ನಡ ಸಿನಿಮಾ ಮಾಡಿದ್ದೇನೆ. ಅದು ತೆರೆಗೆ ಬರಲು ಸಿದ್ದವಿದೆ. ಆದರೆ ಆ ಸಿನಿಮಾದಲ್ಲಿ ನಾನು ಈ ಹೊಸ ತಂತ್ರಜ್ಞಾನ ಬಳಸಿಲ್ಲ. ಈ ನೂತನ ತಂತ್ರಜ್ಞಾನದಿಂದ ಗಾಯಕರಿಗೆ ಏನು ತೊಂದರೆಯಾಗುವುದಿಲ್ಲ.‌ ಆಸಕ್ತಿವುಳ್ಳವರು ತಮ್ಮ ಸಿನಿಮಾದ ಒಂದು ಹಾಡಿಗೆ ಈ ತಂತ್ರಜ್ಞಾನ ‌ಬಳಸಿಕೊಳ್ಳಬಹುದು. ಈಗಾಗಲೇ ನಮ್ಮ ಯೂಟ್ಯೂಬ್ ಚಾನಲ್ ನಲ್ಲಿ  ಈ ಹಾಡು ಹಾಗೂ ಹಾಡಿನ ಮೇಕಿಂಗ್ ಬಿಡುಗಡೆ ಮಾಡಿದ್ದೇವೆ‌. ಆರುವರೆ ನಿಮಿಷಗಳ ಈ ಹಾಡು ಗಿನ್ನಿಸ್ ರೆಕಾರ್ಡ್ ಆಗುವ ಸಾಧ್ಯತೆ ಕೂಡ ಇದೆ‌. ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ಬಾಬು.

 

ಈ ಹಾಡಿನಲ್ಲಿ ಇರಾನ್ ಕಲಾವಿದೆ ಐರಾ ಫರಿದ್, ರೇವಂತ್ ರಾಮಕುಮಾರ್, ಯೋಗೇಶ್ ಮಲ್ಲಿಕಾರ್ಜುನ ಹಾಗೂ ಲೀನಾ ಕುಮಾರನ್ ಅಭಿನಯಿಸಿದ್ದಾರೆ. ಕಲಾವಿದರಾದ ಐದಾ ಫರಿದ್, ರೇವಂತ್ ರಾಮಕುಮಾರ್, ಯೋಗೇಶ್ ಮಲ್ಲಿಕಾರ್ಜುನ, ಲೀನಾ ಕುಮಾರನ್ “COZ I LUV U” ಆಲ್ಬಂ ಸಾಂಗ್ ನ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್