ಕೈರೋದ ಗಿಜಾ ಪಿರಮಿಡ್‌ಗೆ ಭೇಟಿ ನೀಡಿದ ಮೋದಿ

Public TV
2 Min Read

ಕೈರೋ: ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿರುವ ಈಜಿಪ್ಟ್ (Egypt) ರಾಜಧಾನಿಯ ಹೊರವಲಯದಲ್ಲಿರುವ ಗಿಜಾದ ದೈತ್ಯ ಪಿರಮಿಡ್‌ಗಳನ್ನು (Giza Pyramid) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ವೀಕ್ಷಿಸಿದ್ದಾರೆ.

ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್‌ಬೌಲಿ ಅವರೊಂದಿಗೆ ತೆರಳಿದ ಮೋದಿ ಉತ್ತರ ಈಜಿಪ್ಟ್‌ನ ಅಲ್-ಜಿಜಾ (ಗಿಜಾ) ಬಳಿ ನೈಲ್ ನದಿಯ ಪಶ್ಚಿಮ ದಂಡೆಯಲ್ಲಿ ಕಲ್ಲಿನ ಪ್ರಸ್ಥಭೂಮಿಯ ಮೇಲೆ ನಿರ್ಮಿಸಲಾದ 4ನೇ ರಾಜವಂಶದ 3 ಪಿರಮಿಡ್‌ಗಳಿಗೆ ಭೇಟಿ ನೀಡಿದರು.

ಈಜಿಪ್ಟಿನ ಅತಿದೊಡ್ಡ ಪಿರಮಿಡ್ ಹಾಗೂ ಪ್ರಾಚೀನ ಸಾಮ್ರಾಜ್ಯದ 4ನೇ ರಾಜವಂಶದ ಅಡಿಯಲ್ಲಿ ಆಳಿದ ಫೇರೋ ಖುಫು ಅವರ ಸಮಾಧಿಯ ಬಗ್ಗೆ ಮೋದಿ ಮಾಹಿತಿಗಳನ್ನು ಪಡೆದುಕೊಂಡರು. 26ನೇ ಶತಮಾನದಲ್ಲಿ ಸುಮಾರು 27 ವರ್ಷಗಳ ಅವಧಿಯಲ್ಲಿ ನಿರ್ಮಿಸಲಾದ ಈ ಪಿರಮಿಡ್ ವಿಶ್ವದ 7 ಅದ್ಭುತಗಳಲ್ಲಿ ಒಂದಾಗಿದೆ. ಮಾತ್ರವಲ್ಲದೆ ಇದು ಹಳೆಯದೂ ಆಗಿದ್ದು, ಬಹುಮಟ್ಟಿಗೆ ಹಾಗೇ ಉಳಿದುಕೊಂಡಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ನೀಡಿ ಗೌರವಿಸಿದ ಈಜಿಪ್ಟ್

ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 2 ದಿನಗಳ ಈಜಿಪ್ಟ್ ಪ್ರವಾಸದಲ್ಲಿದ್ದಾರೆ. 26 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಈಜಿಪ್ಟ್‌ಗೆ ಭೇಟಿ ನೀಡಿದ್ದಾರೆ.

ಮೋದಿ ಭಾನುವಾರ ಮುಂಜಾನೆ ಈಜಿಪ್ಟ್‌ನ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿ ಹಾಗೂ ಕೈರೋದಲ್ಲಿನ ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧಸ್ಮಾರಕಕ್ಕೆ ಭೇಟಿ ನೀಡಿದರು. ಬಳಿಕ ಅವರಿಗೆ ಈಜಿಪ್ಟ್‌ನ ಅತ್ಯುನ್ನತ ರಾಜ್ಯ ಗೌರವವಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ಈಜಿಪ್ಟ್‌ನಲ್ಲಿ 1,000 ವರ್ಷ ಹಳೆಯ ಮಸೀದಿಗೆ ಪ್ರಧಾನಿ ಮೋದಿ ಭೇಟಿ

Share This Article