ತಮಿಳು ಗಾಯಕ ದೇವ್ ಆನಂದ್ ಕಿಡ್ನ್ಯಾಪ್: ಐವರು ಅಪಹರಣಕಾರರ ಬಂಧನ

Public TV
2 Min Read

ಮಿಳಿನ ಯುವ ಗಾಯಕ (Rapper) ದೇವ್ ಆನಂದ್ (Dev Anand) ಅವರನ್ನ ಸಿನಿಮಾ ಸ್ಟೈಲಿನಲ್ಲಿ ಕೆಲ ದುಷ್ಕರ್ಮಿಗಳು ಕಿಡ್ನ್ಯಾಪ್ (Kidnap) ಮಾಡಿರೋದು ಬೆಳಕಿಗೆ ಬಂದಿತ್ತು. ಇದೀಗ ಕಿಡ್ನ್ಯಾಪ್ ಮಾಡಿದವರಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾ ನೀಡಿದ ಸುಳಿವಿನ ಆಧಾರದಲ್ಲಿ ಅಪಹರಣಕಾರರು ಮಧುರೈಗೆ ತೆರಳಿದ ಬಗ್ಗೆ ಸುಳಿವು ಸಿಕ್ಕಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಮಧುರೈ ಪೊಲೀಸರಿಗೆ ಮಾಹಿತಿ ನೀಡಿ, ಐದು ಜನರನ್ನು ಬಂಧಿಸುವಲ್ಲಿ (Arrest) ಯಶಸ್ಸಿಯಾಗಿದ್ದಾರೆ. ಇನ್ನೂ ಐವರು ತಲೆಮರೆಸಿಕೊಂಡಿದ್ದಾರೆ.

ಸಹೋದರನ ಸಾಲದ ಹೊರೆಗೆ ಅಣ್ಣ  ದೇವ್ ಆನಂದ್‌ನನ್ನು ಅಪಹರಣ ಮಾಡಲಾಗಿತ್ತು. ನೆಚ್ಚಿನ  ದೇವ್ ಅಪಹರಣದ ಸುದ್ದಿ ಕೇಳಿ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು.ಇದೀಗ ಅಪಹರಣ ಮಾಡಿದವರಲ್ಲಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಚೆನ್ನೈಗೆ ಕರೆತಂದು ವಿಚಾರಣೆ ಮಾಡಲಾಗುತ್ತಿದೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

ಕಾಲಿವುಡ್ ರಂಗದಲ್ಲಿ ತಮ್ಮ ವಿಭಿನ್ನ ಶೈಲಿಯ ಸಾಂಗ್‌ಗಳ ಮೂಲಕ ಮೋಡಿ ಮಾಡಿರುವ ದೇವ್ ಆನಂದ್ ಅವರು ಇತ್ತೀಚಿಗೆ ವಿಶ್ವ ಸಂಗೀತದ ದಿನದ ಅಂಗವಾಗಿ ನಂಗಂಭಾಕ್ಕಂನ ಹೋಟೆಲ್ ಒಂದರಲ್ಲಿ ಆಯೋಜಿತವಾಗಿದ್ದ ಮ್ಯೂಸಿಕ್ ಈವೆಂಟ್‌ನಲ್ಲಿ ಭಾಗವಹಿಸಿ ಅಲ್ಲಿಂದ ಗೆಳೆಯರಾದ ಕಲ್ಪನ್ ಗಿರೀಶ್, ಮೊಹಮ್ಮದ್ ಇಬ್ರಾಹಿಂ, ಕೆವಿನ್ ಅವರೊಟ್ಟಿಗೆ ಕಾರಿನಲ್ಲಿ ಹೊರಟಿದ್ದರು. ತಿರುವೇರ್ ಕಾಡುವಿನ ಮಧುರವಯಾಲ್ ಬೈಪಾಸ್‌ವರೆಗೂ ಹೋಗಿ ಅಲ್ಲಿಂದ ಚೆನ್ನೈ-ಬೆಂಗಳೂರು ಹೈವೇಗೆ ಕಾರಿನಲ್ಲಿ ಬಂದಿದ್ದಾರೆ. ಈ ಸಮಯದಲ್ಲಿ ಬೈಕ್‌ನಲ್ಲಿ ವೇಗವಾಗಿ ಬಂದ ಇಬ್ಬರು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಕೂಡಲೇ ದೇವಾನಂದ್ ಹಾಗೂ ಗೆಳೆಯರು ಕಾರನ್ನು ನಿಲ್ಲಿಸಿ ಹೊರಗೆ ಬಂದು ಕಾರಿಗೆ ಏನಾಯಿತು ಎಂದು ನೋಡುತ್ತಿರುವಾಗ ಒಂದು ಎಸ್‌ಯುವಿ ಕಾರಿನಲ್ಲಿ ಬಂದ ಎಂಟು ಮಂದಿ, ಕಾರಿಗೆ ಬೈಕ್ ಗುದ್ದಿಸಿದ್ದ ಇಬ್ಬರು ಸೇರಿ ಚಾಕು ತೋರಿಸಿ ಬೆದರಿಸಿ ದೇವ್ ನನ್ನು ಕರೆದುಕೊಂಡು ಹೋಗಿದ್ದಾರೆ. ಆ ಕೂಡಲೇ  ದೇವ್ ಅವರ ಫ್ರೆಂಡ್ಸ್ ಸ್ಥಳೀಯ ತಿರುವೇರ್ ಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

ದೂರಿನ ಬಳಿಕ ಪೊಲೀಸರು ದೇವ್ ಗೆ ಕರೆ ಮಾಡಿದಾಗ ಪ್ರತಿಕ್ರಿಯಿಸಿದ್ದಾರೆ. ನನ್ನ ಸಹೋದರ ಸಿರಂಜೀವಿ ತನ್ನ ಬ್ಯುಸಿನೆಸ್‌ಗೆ ಸಂಬಂಧಿಸಿದಂತೆ ಐದು ಜನರಿಂದ 2.5 ಕೋಟಿ ಸಾಲ ಪಡೆದುಕೊಂಡಿದ್ದ ಅದೇ ಕಾರಣಕ್ಕೆ ಕೆಲವರು ನನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಆದರೆ ನನ್ನ ಮೇಲೆ ಹಲ್ಲೆ ಮಾಡಿಲ್ಲ. ಆದರೆ ಯಾವ ಸ್ಥಳದಲ್ಲಿ ತಾನು ಇರುವುದು ತನಗೆ ತಿಳಿದಿಲ್ಲವೆಂದು ದೇವ್ ಆನಂದ್ ಹೇಳಿದ್ದರು. ತಿರುವಾಕ್ಕೂಡು ಪೊಲೀಸರು ದೇವ್ ಆನಂದ್ ಅವರನ್ನು ಹುಡುಕಲು ವಿಶೇಷ ದಳವನ್ನು ರಚಿಸಿದ್ದರು. ಅವರ ಮೊಬೈಲ್ ಲೊಕೇಶನ್ ಟ್ರೇಶ್ ಮಾಡಲಾಗಿತ್ತು.

Share This Article