ಫೋನ್‍ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ ಚಾಲಕ- 26 ಮಂದಿಗೆ ಗಾಯ, ಇಬ್ಬರು ಗಂಭೀರ

By
1 Min Read

ರಾಯ್ಪುರ: ವಾಹನ ಚಲಾಯಿಸುವಾಗ ಫೋನ್ ಬಳಕೆ ಮಾಡಬಾರದು ಎಂಬ ಅರಿವಿದ್ದರೂ ಇಲ್ಲೊಬ್ಬ ಚಾಲಕ ಫೋನ್ ನಲ್ಲಿ ಮಾತನಾಡುತ್ತಾ ಬಸ್ ಓಡಿಸಿದ್ದಾನೆ. ಪರಿಣಾಮ 26 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಈ ಘಟನೆ ಛತ್ತೀಸ್‍ಗಢ (Chhattisgarh) ದ ಘರ್ಘೋಡಾ (Gharghoda Area) ಪ್ರದೇಶದಲ್ಲಿ ನಡೆದಿದೆ. ಚಾಲಕ ಫೋನಿನಲ್ಲಿ ಮಾತನಾಡುತ್ತಾ ಚಾಲನೆ ಮಾಡಿದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ರೈಲ್ವೇ ಬ್ರಿಡ್ಜ್ (Railway Bridge) ಗೆ ಗುದ್ದಿದೆ. ಪರಿಣಾಮ 26 ಮಂದಿ ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಘಟನೆ ಸಂಬಂಧ ತನಿಖೆ ನಡೆಸಿದಾಗ ಚಾಲಕ ಫೋನ್ (Phone) ಬಳಕೆ ಮಾಡಿರುವುದು ಬಯಲಾಗಿದೆ. ಫೋನ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂಬುದಾಗಿ ತಿಳಿದುಬಂದಿದೆ. ಸದ್ಯ ಗಾಯಾಳುಗಳನ್ನು ರಾಯ್‍ಗಢದ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಸ್‍ಡಿಪಿಓ ದೀಪಕ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೆ ಬುಲ್ಡೋಜರ್ ಸದ್ದು – ರಾಜಕಾಲುವೆ ಒತ್ತುವರಿ ತೆರವು ವೇಳೆ ಭಾರೀ ಹೈಡ್ರಾಮಾ

ಕಳೆದ ಏಪ್ರಿಲ್‍ನಲ್ಲಿ ಇಂಥದ್ದೇ ಒಂದು ಅಪಘಾತ ನಡೆದಿತ್ತು. ಛತ್ತೀಸ್‍ಗಢದಲ್ಲಿ ಬಸ್ ಪಲ್ಟಿಯಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 40 ಮಂದಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಅಂಬಾಗರ್ ಚೌಕಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

Share This Article