ಹಂಪಿ ವಿವಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 85 ಲಕ್ಷ ರೂ. ಕರೆಂಟ್ ಬಿಲ್

Public TV
2 Min Read

ವಿಜಯನಗರ: ಕಾಂಗ್ರೆಸ್ (Congress) ಉಚಿತ 200 ಯೂನಿಟ್ ವಿದ್ಯುತ್ ನೀಡುವ ಭರವಸೆ ನೀಡಿದ ಬೆನ್ನಲ್ಲೇ ಜನರು ಏರಿಕೆಯಾಗಿರುವ ವಿದ್ಯುತ್ ಬಿಲ್ (Electricity Bill) ದರವನ್ನು ನೋಡಿ ಶಾಕ್ ಆಗಿದ್ದಾರೆ. ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿರುವ ಹಂಪಿ ವಿಶ್ವವಿದ್ಯಾಲಯಕ್ಕೆ (Hampi University) ಬರೋಬ್ಬರಿ 85 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದ್ದು, ಬಿಲ್ ಕಟ್ಟಲು ಹಣವಿಲ್ಲದೆ ಪರದಾಡುತ್ತಿದೆ.

ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ (Hospet) ತಾಲೂಕಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡದ ಸಂಶೋಧನೆಗಾಗಿ ಜನ್ಮ ತಾಳಿರುವ ಏಕೈಕ ವಿಶ್ವವಿದ್ಯಾಲಯ. ಈ ವಿವಿಗೆ ಅನುದಾನ ಸರಿಯಾಗಿ ಬಾರದ ಕಾರಣ ಹಿಂದಿನ ಕರೆಂಟ್ ಬಿಲ್ ಸಹ ಕಟ್ಟಿರಲಿಲ್ಲ. ಇದೀಗ ಹಿಂದಿನ ಬಾಕಿ ಮೊತ್ತವನ್ನು ಸೇರಿಸಿದಂತೆ ಇಲ್ಲಿವರೆಗಿನ ಒಟ್ಟು ವಿದ್ಯುತ್ ಬಿಲ್ 85 ಲಕ್ಷ ರೂ.ಗಳಷ್ಟಾಗಿದ್ದು, ಹಂಪಿ ವಿಶ್ವವಿದ್ಯಾಲಯ ಸಂಕಷ್ಟಕ್ಕೆ ಸಿಲುಕಿದೆ. ಇದನ್ನೂ ಓದಿ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ: ಯಡಿಯೂರಪ್ಪ

ಮನ್ನಾ ಮಾಡುವಂತೆ ಮನವಿ:
ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಹಂಪಿ ವಿಶ್ವವಿದ್ಯಾಲಯ ಕರೆಂಟ್ ಬಿಲ್ ಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಹಂಪಿ ವಿವಿಯ ಕುಲಪತಿ ಡಾ.ಪರಮಶಿವಮೂರ್ತಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಕರೆಂಟ್ ಬಿಲ್ ಮನ್ನಾ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮೇಯರ್‌ ಚುನಾವಣೆ – ಗದ್ದುಗೆ ಹಿಡಿಯಲು ಕೈ ಕಸರತ್ತು, ಬೆಂಗಳೂರಿನಲ್ಲಿ ಸಭೆ

ವಿದ್ಯುತ್ ಬಿಲ್ ಕಟ್ಟಲು ಸಾಕಷ್ಟು ಹಣವಿಲ್ಲ. ಸರ್ಕಾರದಿಂದಲೂ ಸಕಾಲಕ್ಕೆ ಅನುದಾನ ಬರುತ್ತಿಲ್ಲ. ಸಿಬ್ಬಂದಿಗಳಿಗೆ ಸಂಬಳ ಕೊಡಲು ಹಣವಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ 85 ಲಕ್ಷ ರೂ. ಕರೆಂಟ್ ಬಿಲ್ ಪಾವತಿಸಲು ಅಸಾಧ್ಯ. ಹೀಗಾಗಿ ಹಂಪಿ ವಿವಿಯ ಕರೆಂಟ್ ಬಿಲ್ ಮನ್ನಾ ಮಾಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಶ್ ಅಂತ ಡ್ರೈವರ್ ಸೀಟ್‌ನಲ್ಲಿ ಮಕ್ಕಳ ಜೊತೆ ಬಸ್‌ ಹತ್ತಿದ ಮಹಿಳೆ

ಹಂಪಿ ವಿವಿಯ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ವಿಶ್ವವಿದ್ಯಾಲಯದ ಕರೆಂಟ್ ಬಿಲ್ ಅನ್ನು ರಾಜ್ಯ ಸರ್ಕಾರ ಮನ್ನಾ ಮಾಡುತ್ತಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಇದನ್ನೂ ಓದಿ: ಡಿಕೆಶಿ ಸಿಎಂ ಆಗುವಂತೆ ಆಶೀರ್ವದಿಸಿ – ವಿನಯ್ ಗುರೂಜಿಗೆ ಶಾಸಕ ತಮ್ಮಯ್ಯ ಮನವಿ

Share This Article