ಮಿಡ್‌ನೈಟ್ ಆಪರೇಷನ್, ವೇಶ್ಯಾವಾಟಿಕೆಯಲ್ಲಿ ಭಾಗಿ ಶಂಕೆ – ಸಿನಿಮಿಯ ರೀತಿಯಲ್ಲಿ ವಿದೇಶಿಗರ ಬಂಧನ

Public TV
2 Min Read

ಬೆಂಗಳೂರು: ವಾರಾಂತ್ಯದಲ್ಲಿ ಬೆಂಗಳೂರಿನ (Bengaluru) ವಿವಿಧೆಡೆ ಮಿಡ್‌ನೈಟ್ ಆಪರೇಷನ್ ನಡೆಸಿದ ಖಾಕಿ ಪಡೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದ ವಿದೇಶಿಗರನ್ನು ಸಿನಿಮಿಯ ರೀತಿಯಲ್ಲಿ ಬಂಧಿಸಿರುವ ಘಟನೆ ನಡೆಸಿದೆ.

ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ (Brigade Road) ದಾಳಿ ಮಾಡಿದ ಕೇಂದ್ರ ವಿಭಾಗದ ಪೊಲೀಸರು (Police) ಆಫ್ರಿಕನ್ ಪ್ರಜೆಗಳ ಆಟಟೋಪಕ್ಕೆ ಬ್ರೇಕ್ ಹಾಕಿದ್ದಾರೆ. ವೇಶ್ಯಾವಾಟಿಕೆ, ಡ್ರಗ್ಸ್‌ ದಂದೆ ಸೇರಿದಂತೆ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು ಹಲವರನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಹೆಡ್‍ಕಾನ್ಸ್ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆಗೈದಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸರು

ಎಂ.ಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ನಿಂತು ಗ್ರಾಹಕರನ್ನ ಸೆಳೆಯುತ್ತಿದ್ದವರನ್ನ ಸಿನಿಮಿಯು ರೀತಿಯಲ್ಲಿ ಅಟ್ಟಾಡಿಸಿ ಖಾಕಿ ಪಡೆ ಲಾಕ್ ಮಾಡಿದೆ. ಒಟ್ಟು 55 ವಿದೇಶಿ ಪ್ರಜೆಗಳನ್ನ ಬಂಧಿಸಿದ್ದು, ಅವರಲ್ಲಿ 25ಕ್ಕೂ ಹೆಚ್ಚು ಮಂದಿ ಮಹಿಳೆಯರು (Foreign Women) ಇದ್ದಾರೆ. ಬಂಧಿಸಿದ ಬಳಿಕ ಆಫ್ರಿಕನ್ ಪ್ರಜೆಗಳಿಗೆ ಮೆಡಿಕಲ್ ಮತ್ತು ನಾರ್ಕೊಟಿಕ್ ಟೆಸ್ಟ್ ಮಾಡಿಸಲಾಗಿದೆ. ಇದನ್ನೂ ಓದಿ: 15 ದಿನಗಳ ಹಿಂದಷ್ಟೇ ಡಿವೋರ್ಸ್- ಪತ್ನಿಯನ್ನು ಕೊಲ್ಲಲು ಪಿಸ್ತೂಲ್ ಖರೀದಿಸಿ ಅರೆಸ್ಟ್ ಆದ!

ಆಫ್ರಿಕನ್ ಮಹಿಳೆಯರ ಹೈಡ್ರಾಮಾ:
ಪೊಲೀಸರು ವಶಕ್ಕೆ ಪಡೆಯುವ ವೇಳೆ ವಿದೇಶಿ ಯುವತಿಯರು ಭಾರೀ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಮದ್ಯದ ನಶೆಯಲ್ಲಿ ಪಬ್‌ನಿಂದ ಹೊರ ಬರ್ತಿದ್ದಂತೆ ಕೆಲ ಯುವತಿಯರು ಖಾಕಿ ಜೊತೆಗೆ ಕಿರಿಕ್ ತೆಗೆದಿದ್ದಾರೆ. ಬಾಯಿ ಬಡಿದುಕೊಂಡು ಚೀರಾಟ ನಡೆಸಿದ್ದಾರೆ. ಕುಡಿದ ಅಮಲಿನಲ್ಲಿ ಕ್ಯಾಮೆರಾ ಚಿತ್ರೀಕರಣಕ್ಕೂ ಅಡ್ಡಿಪಡಿಸಿದ್ದಾರೆ. ಇನ್ನೂ ಕೆಲವರು ಪೊಲೀಸರು ಹತ್ತಿರ ಬರುತ್ತಿದ್ದಂತೆ ದಿಕ್ಕಾಪಾಲಾಗಿ ಓಡಲು ಯತ್ನಿಸಿದ್ದು, ಬೆರಳೆಣಿಕೆಯಷ್ಟು ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಉಳಿದ ಮಹಿಳೆಯರನ್ನ ಸಮಾಧಾನ ಮಾಡಿ ವಶಕ್ಕೆ ಪಡೆಯುವಷ್ಟರಲ್ಲಿ ಪೊಲೀಸರು ಹೈರಾಣಾಗಿದ್ದಾರೆ.

60 ಮಂದಿ ಖಾಕಿ ಪಡೆ ಕಾರ್ಯಾಚರಣೆ:
ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾರ್ಯಚರಣೆಯಲ್ಲಿ ಓರ್ವ ಡಿಸಿಪಿ, ಇಬ್ಬರು ಎಸಿಪಿ, 6 ಮಂದಿ ಇನ್ಸ್ಪೆಕ್ಟರ್, 10 ಮಂದಿ ಪಿಎಸ್‌ಐ, 20 ಮಹಿಳಾ ಸಿಬ್ಬಂದಿ, 20 ಪುರುಷ ಸಿಬ್ಬಂದಿಯಿAದ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಡಿಸಿಪಿ ಶ್ರೀನಿವಾಸಗೌಡ ನೇತೃತ್ವದ ತಂಡ ಏಕಕಾಲದಲ್ಲಿ ಮೂರು ಕಡೆಗಳಿಂದ ದಾಳಿ ನಡೆಸಿದೆ. ಎಂ.ಜಿ ರಸ್ತೆಯಿಂದ ಒಂದು ತಂಡ, ಚರ್ಚ್ ಸ್ಟ್ರೀಟ್ ನಿಂದ ಒಂದು ತಂಡ, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಫೀಲ್ಡಿಗಿಳಿದು ಆಪರೇಷನ್ ನಡೆಸಿ, ವಿದೇಶಿಗರನ್ನ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.

Share This Article