ಊರಿಗೆ ಹೋಗೋಣವೆಂದು ಕರ್ಕೊಂಡು ಬಂದು ಮಕ್ಕಳೆದುರೇ ದಾರಿ ಮಧ್ಯೆ ಪತ್ನಿಯನ್ನ ಹೊಡೆದು ಕೊಂದ!

Public TV
1 Min Read

ರಾಮನಗರ: ವ್ಯಕ್ತಿಯೊಬ್ಬ ಶೀಲ ಶಂಕಿಸಿ ತನ್ನ ಪತ್ನಿಯನ್ನು ಮಕ್ಕಳೆದುರೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಪ್ರಕರಣ ಕನಕಪುರ (Kanakapura) ತಾಲೂಕಿನ ಹೊಸಕೋಟೆ (Hoskote) ಗ್ರಾಮದಲ್ಲಿ ನಡೆದಿದೆ.

ಅಂಬಿಕಾ(30) ಕೊಲೆಯಾದ ಮಹಿಳೆ. ರಾಮನಗರದ ಹೊಳೆಬೀದಿ ನೀಲಕಂಠೇಶ್ವರ ಬಡಾವಣೆ ನಿವಾಸಿ ಮುತ್ತುರಾಜು (38) ಕೊಲೆಗೈದ ಆರೋಪಿ. ಇದನ್ನೂ ಓದಿ: Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

ಕೌಟುಂಬಿಕ ಕಲಹದಿಂದ ಬೇಸತ್ತು ಅಂಬಿಕಾ ತನ್ನ ತವರುಮನೆ ಹೊಸಕೋಟೆಗೆ ತೆರಳಿದ್ದಳು. ಈ ವೇಳೆ ಪತ್ನಿಯನ್ನು ನೋಡುವ ನೆಪದಲ್ಲಿ ಅಲ್ಲಿಗೆ ಬಂದಿದ್ದ ಆರೋಪಿ ಮುತ್ತುರಾಜು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಊರಿಗೆ ಹೋಗೋಣ ಎಂದು ಬೈಕ್‍ನಲ್ಲಿ ಕೂರಿಸಿಕೊಂಡು ಬಂದಿದ್ದಾನೆ. ಹೊಸಕೋಟೆ ಗ್ರಾಮದ ಹೊರವಲಯದಲ್ಲಿ ಬೈಕ್ ನಿಲ್ಲಿಸಿ ಇಬ್ಬರು ಜಗಳವಾಡಿಕೊಂಡಿದ್ದಾರೆ.

ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಮುತ್ತುರಾಜ್ ಅಂಬಿಕಾಳನ್ನ ದೊಣ್ಣೆಯಿಂದ ಮನಬಂದಂತೆ ಹೊಡೆದು ಹತ್ಯೆಗೈದಿದ್ದಾನೆ. ಸ್ಥಳೀಯರು ಕೊಲೆಯಾಗಿರುವುದನ್ನು ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮುತ್ತುರಾಜ್‍ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯದ ಪರ ಧ್ವನಿ ಎತ್ತದೇ ಸುಮ್ಮನಿರುವ ಬಿಜೆಪಿ ಸಂಸದರು ದಂಡಪಿಂಡಗಳು: ಬಿ.ವಿ ಶ್ರೀನಿವಾಸ್

Share This Article