ಬಿಜೆಪಿ ತೊರೆದ ಮಲಯಾಳಂ ಸಿನಿಮಾ ನಿರ್ದೇಶಕ ಅಬೂಬಕ್ಕರ್

Public TV
1 Min Read

ಕೇರಳದ (Kerala) ಬಿಜೆಪಿ  ರಾಜ್ಯ ಸಮಿತಿ ಸದಸ್ಯ ಹಾಗೂ ಮಲಯಾಳಂ (Malayalam) ಸಿನಿಮಾ ರಂಗದ ಹೆಸರಾಂತ ನಿರ್ದೇಶಕ ರಾಮಸಿಂಹನ್ ಅಬೂಬಕ್ಕರ್(Ramasimhan Abubakar)  ಬಿಜೆಪಿ ತೊರೆಯುವುದಾಗಿ ಹೇಳಿಕೊಂಡಿದ್ದಾರೆ. ‘ಎಲ್ಲದರಿಂದಲೂ ಮುಕ್ತಿ ಪಡೆದುಕೊಂಡು ಧರ್ಮದೊಂದಿಗೆ ಇರುತ್ತೇನೆ’ ಎಂದು ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಅವರ ಈ ಬರಹ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು.

ಮೂಲತಃ ಮುಸ್ಲಿಂ ಧರ್ಮದವರಾಗಿದ್ದ ರಾಮಸಿಂಹನ್ ಅಬೂಬಕ್ಕರ್ 2021ರಲ್ಲಿ ಇಸ್ಲಾಂ ತೊರೆದ್ದರು. ಇಸ್ಲಾಂ ತೊರೆದಾಗ ಆಲಿ ಅಕ್ಬರ್ (Ali Akbar) ಅಂತಿದ್ದ ತಮ್ಮ ಮೂಲ ಹೆಸರನ್ನೂ ರಾಮಸಿಂಹನ್ ಅಬೂಬಕ್ಕರ್ ಎಂದು ಬದಲಾಯಿಸಿಕೊಂಡಿದ್ದರು. ಅದೇ ವರ್ಷ ಅವರನ್ನು ಬಿಜೆಪಿ (BJP) ರಾಜ್ಯ ಸಮಿತಿ ಸದಸ್ಯತ್ವ ಹಾಗೂ ಜವಾಬ್ದಾರಿ ಹುದ್ದೆಗಳನ್ನು ನೀಡಿತ್ತು.

ಪಕ್ಷ ತೊರೆಯುತ್ತಿರುವ ಬಗ್ಗೆ ಗುರುವಾರ ಪ್ರಕಟಿಸಿದ್ದ ಅಬೂಬಕ್ಕರ್, ತಮ್ಮ ಮಾತಿನಂತೆ ನಡೆದುಕೊಂಡಿದ್ದಾರೆ. ಪಕ್ಷದ ಎಲ್ಲಾ ಜವಾಬ್ದಾರಿಗಳಿಗೂ ರಾಜೀನಾಮೆ ನೀಡಿದ್ದರು. ಮತ್ತು ಯಾವ ಪಕ್ಷಕ್ಕೂ ಹೋಗದೇ ಧರ್ಮದ ಅನುಸಾರ ನಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದಿದ್ದಾರೆ.

Share This Article