ನೀವು ಸಿಹಿಪ್ರಿಯರಾಗಿದ್ರೆ ಟ್ರೈ ಮಾಡಿ ಬಾಳೆಹಣ್ಣಿನ ಇಡ್ಲಿ

Public TV
1 Min Read

ಡ್ಲಿಯನ್ನು ಸಾಮಾನ್ಯವಾಗಿ ಎಲ್ಲರೂ ತಿಂದಿರುತ್ತೀರಿ. ಇಡ್ಲಿಯಲ್ಲಿ ಹಲವಾರು ವಿಧಗಳಿವೆ. ಉದಾಹರಣೆಗೆ ರವಾ ಇಡ್ಲಿ, ಓಟ್ಸ್ ಇಡ್ಲಿ, ಸಬ್ಬಕ್ಕಿ ಇಡ್ಲಿ ಮುಂತಾದವು. ಇವತ್ತಿನ ನಮ್ಮ ರೆಸಿಪಿಯಲ್ಲಿ ಇನ್ನೊಂದು ರೀತಿಯ ಇಡ್ಲಿಯನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಅದುವೇ ಬಾಳೆಹಣ್ಣಿನ ಇಡ್ಲಿ. ಸಿಹಿ ಇಷ್ಟಪಡುವವರು ಇದನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. ಇದನ್ನೂ ಓದಿ: ಬೆಳಗ್ಗಿನ ಉಪಹಾರಕ್ಕೆ ಮಾಡಿ ಆರೋಗ್ಯಕರ ಓಟ್ಸ್ ಮಸಾಲ..

ಬೇಕಾಗುವ ಸಾಮಗ್ರಿಗಳು:
ಇಡ್ಲಿ ಹಿಟ್ಟು – 1 ಕಪ್
ಬೆಲ್ಲದ ಪೌಡರ್ – 6 ಚಮಚ
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ಏಲಕ್ಕಿ ಪುಡಿ – 1 ಚಿಟಿಕೆ
ಹೆಚ್ಚಿದ ಬಾಳೆಹಣ್ಣು – 1
ತೆಂಗಿನ ಹಾಲು – 1 ಕಪ್

ಮಾಡುವ ವಿಧಾನ:

  • ಮೊದಲಿಗೆ ಒಂದು ದೊಡ್ಡ ಪಾತ್ರೆಗೆ ಇಡ್ಲಿ ಹಿಟ್ಟನ್ನು ಹಾಕಿಕೊಳ್ಳಿ. ಬಳಿಕ ಅದಕ್ಕೆ 4 ಚಮಚ ಬೆಲ್ಲದ ಪೌಡರ್, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಹೆಚ್ಚಿದ ಬಾಳೆಹಣ್ಣು ಹಾಗೂ ಏಲಕ್ಕಿ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
  • ನಂತರ ಇಡ್ಲಿ ಟ್ರೇಗೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿಕೊಳ್ಳಿ. ಬಳಿಕ ಇಡ್ಲಿ ಹಿಟ್ಟಿನ ಮಿಶ್ರಣವನ್ನು ಇದರಲ್ಲಿ ಹಾಕಿ ಬೇಯಲು ಇಡಿ. ಬೆಂದ ನಂತರ ಒಂದು ಪ್ಲೇಟ್‌ನಲ್ಲಿ ತೆಗೆದಿಡಿ.
  • ನಂತರ ತೆಂಗಿನ ಹಾಲನ್ನು ಬಿಸಿ ಮಾಡಿ ಅದಕ್ಕೆ 2 ಚಮಚ ಬೆಲ್ಲದ ಪುಡಿಯನ್ನು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ. ಈಗ ಇದನ್ನು ಸರ್ವಿಂಗ್ ಪ್ಲೇಟ್‌ನಲ್ಲಿ ಇರಿಸಿ ಇಡ್ಲಿ ಜೊತೆ ಸವಿಯಲು ಕೊಡಿ. ಇದನ್ನೂ ಓದಿ: ಟ್ರಾವೆಲ್ ಮಾಡೋವಾಗ ಯಾವಾಗ್ಲೂ ಇಟ್ಟುಕೊಂಡಿರಿ ಚಾಕ್ಲೇಟ್ ಕಾಫಿ ಎನರ್ಜಿ ಬೈಟ್ಸ್

Share This Article