ಲಂಚ ತೆಗೆದುಕೊಳ್ಳುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೊಲೀಸರು – ತಪ್ಪಾಯ್ತು ಬಿಟ್ಬಿಡಿ ಅಣ್ಣಾ ಎಂದು ಸಾರ್ವಜನಿಕರಲ್ಲಿ ಕ್ಷಮೆ

Public TV
1 Min Read

ತುಮಕೂರು: ಹೈವೆಯಲ್ಲಿ ಕುರಿ ಸಾಗಿಸುತ್ತಿದ್ದ ಕಂಟೇನರ್ ವಾಹನವನ್ನು ಪೊಲೀಸರು (Police) ಅಡ್ಡಗಟ್ಟಿ ಚಾಲಕನಿಂದ ಹಣ ವಸೂಲಿ ಮಾಡುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ತುಮಕೂರು (Tumakuru) ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಹೈವೆಯಲ್ಲಿ ಹೋಗುತಿದ್ದ ಕಂಟೇನರ್ ತಡೆದು ಹಣ ಪೀಕುತಿದ್ದ ದೃಶ್ಯವನ್ನು ಸಾರ್ವಜನಿಕರು ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಪೊಲೀಸರು ಲಂಚ (Bribery) ಪಡೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಶಾಲೆಯಲ್ಲಿ ಅಬಯಾ ಧರಿಸಬಾರದು ಎಂದಿದ್ದಕ್ಕೆ ಪ್ರಿನ್ಸಿಪಾಲ್‌ಗೆ ಭಯೋತ್ಪಾದಕರಿಂದ ಬೆದರಿಕೆ

ಕಳ್ಳಂಬೆಳ್ಳ ಠಾಣೆಯ ಎಎಸ್‌ಐ ಚಿದಾನಂದಸ್ವಾಮಿ, ಚಿಕ್ಕಹನುಮಯ್ಯ ಹಣ ವಸೂಲಿ ಮಾಡಿದ ಪೊಲೀಸರು. ಸಾರ್ವಜನಿಕರು ವೀಡಿಯೋ ಸಹಿತ ರೆಡ್ ಹ್ಯಾಂಡ್ ಆಗಿ ಹಿಡಿದಾಗ ನಮ್ಮಿಂದ ತಪ್ಪಾಗಿದೆ ಬಿಟ್ ಬಿಡಿ ಅಣ್ಣಾ ಎಂದು ಕ್ಷಮೆ ಕೇಳಿದ್ದಾರೆ.

ಈ ನಡುವೆ ಲಂಚ ಸ್ವೀಕಾರ ಮಾಡಿದ ಇಬ್ಬರೂ ಪೊಲೀಸರನ್ನು ಅಮಾನತುಗೊಳಿಸಿ ಎಸ್‌ಪಿ ರಾಹುಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

Share This Article