‘ಪ್ಯಾರ್ ಕಾ ಪಂಚನಾಮ’ ನಾಯಕಿ ಸೋನಾಲಿ ಸೆಹಗಲ್ (Sonali Seygall) ಅವರು ಬಹುಕಾಲದ ಗೆಳೆಯ ಆಶಿಷ್ (Ashesh) ಜೊತೆ ಸೈಲೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಹೈಜಾಕ್, ಪ್ಯಾರ್ ಕಾ ಪಂಚನಾಮ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಸೋನಾಲಿ ಸೆಹಗಲ್ ನಟಿಸಿದ್ದಾರೆ. ಇದೀಗ ಬಹುಕಾಲದ ಗೆಳೆಯನ ಜೊತೆ ಜೂನ್ 7ಕ್ಕೆ ನಟಿ ಹಸೆಮಣೆ ಏರಿದ್ದಾರೆ. ಸಿಂಪಲ್ ಆಗಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿಯ ಮದುವೆಗೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್, ಲಕ್ಷ್ಮಿ ರೈ ಸೇರಿದಂತೆ ಹಲವರು ಭಾಗಿಯಾಗಿ ಶುಭಕೋರಿದ್ದಾರೆ.
View this post on Instagram
ಉದ್ಯಮಿ ಆಶಿಷ್ ಎಲ್ ಸಜ್ನಾನಿ ಜೊತೆ ಸಾಕಷ್ಟು ವರ್ಷಗಳಿಂದ ಸೋನಾಲಿ ಡೇಟಿಂಗ್ನಲ್ಲಿದ್ರು. ಆದರೆ ಎಲ್ಲೂ ಈ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಜೂನ್ 8ಕ್ಕೆ ಮುಂಬೈನಲ್ಲಿ ಅದ್ದೂರಿ ರಿಸೆಪ್ಷನ್ ಇದ್ದು, ಬಾಲಿವುಡ್ನ ಸ್ಟಾರ್ ನಟ-ನಟಿಯರು ಭಾಗಿಯಾಗಲಿದ್ದಾರೆ. ಮದುವೆಯಲ್ಲಿ ಸೋನಾಲಿ ಪಿಂಕ್ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ರೆ, ಆಶಿಷ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram
ಈ ಹಿಂದೆ ನಟಿ ಕಾಜಲ್ ಅಗರ್ವಾಲ್ ಜೊತೆ ಆಶಿಷ್ ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಹೀಗೆ ಸಾಕಷ್ಟು ನಟಿಯರ ಜೊತೆ ಉದ್ಯಮಿ ಆಶಿಷ್ ಹೆಸರು ತಳುಕು ಹಾಕಿತ್ತು. ಈಗ ಸೋನಾಲಿ ಜೊತೆ ಹೊಸ ಬಾಳಿಗೆ ಆಶಿಷ್ ಕಾಲಿಟ್ಟಿದ್ದಾರೆ. ನವಜೋಡಿಗೆ ಸೋನಾಲಿ -ಆಶಿಷ್ಗೆ ಫ್ಯಾನ್ಸ್ ಶುಭಕೋರಿದ್ದಾರೆ.