ಲಿಪ್‌ಕಿಸ್ ಫೋಟೋ ಹಂಚಿಕೊಂಡ ‘ಪುಷ್ಪ’ ನಟಿ ಅನಸೂಯ ಭಾರದ್ವಾಜ್

By
1 Min Read

ಟಾಲಿವುಡ್ (Tollywood) ಖ್ಯಾತ ನಟಿ, ನಿರೂಪಕಿ ಅನಸೂಯ ಭಾರದ್ವಾಜ್ (Anasuya Bharadwaj) ಅವರು ಪತಿ ಜೊತೆ ಥೈಲ್ಯಾಂಡ್‌ನಲ್ಲಿದ್ದಾರೆ. ಪತಿಗೆ ಲಿಪ್‌ಕಿಸ್ ಮಾಡಿರುವ ರೊಮ್ಯಾಂಟಿಕ್ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ನಟಿಯ ಮೋಜು- ಮಸ್ತಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ : ತಾಯಿ ಆಗಲಿದ್ದಾರೆ ನಟಿ ಸ್ವರಾ ಭಾಸ್ಕರ್

 

View this post on Instagram

 

A post shared by Anasuya Bharadwaj (@itsme_anasuya)

‘ಪುಷ್ಪ’ ನಟಿ ಅನಸೂಯ ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಸಿನಿಮಾ ಶೂಟಿಂಗ್, ನಿರೂಪಣೆಗೆ ಬ್ರೇಕ್ ಹಾಕಿ ಥೈಲ್ಯಾಂಡ್‌ಗೆ ಹಾರಿದ್ದಾರೆ. ತಮ್ಮ 13ನೇ ವೆಡ್ಡಿಂಗ್ ಆನಿವರ್ಸರಿಗೆ ದೂರ ದೇಶಕ್ಕೆ ಹೋಗಿದ್ದಾರೆ. ಅಲ್ಲಿ ಪತಿ ಸುಸಾಂಕ್ ಜೊತೆ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

ಪ್ರವಾಸದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಬೋಲ್ಡ್ ನಟಿ, ನಿರೂಪಕಿ ಅನಸೂಯಾ ಲಿಪ್‌ಕಿಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಒಟ್ನಲ್ಲಿ ಅನಸೂಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿದೆ.

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ (Pushpa) ಚಿತ್ರದಲ್ಲಿ ಅನಸೂಯ ಖಡಕ್ ಆಗಿ ನಟಿಸಿದ್ದರು. ಪುಷ್ಪ ಪಾರ್ಟ್ 2ನಲ್ಲಿ ಅನಸೂಯ ನಟಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

Share This Article