ಬೆಂಗಳೂರು: ಮಕ್ಕಳಿಗೆ ಸ್ಮಾರ್ಟ್ ಫೋನ್ (Smart Phone) ಕೊಡುವ ಮುನ್ನ ಪೋಷಕರು ಎಚ್ಚರವಾಗಿರಬೇಕು. ಯಾಕಂದ್ರೆ ಇಲ್ಲೊಬ್ಬ ಬಾಲಕ ಅಮ್ಮನ ಫೋನ್ ನಲ್ಲಿ ಲೊಕೇಶನ್ (Location) ಚೆಕ್ ಮಾಡಿ ಊರು ಬಿಟ್ಟಿದ್ದಾನೆ.
ಆದಿತ್ಯಾ ಮನೆ ಬಿಟ್ಟ ಬಾಲಕನಾಗಿದ್ದು, 9 ನೇ ತರಗತಿ ಓದುತ್ತಿದ್ದಾನೆ. ಈತ ಮೇ 29 ರಂದು ಕಟ್ಟಿಂಗ್ ಶಾಪ್ಗೆಂದು ಮನೆಯಿಂದ ಹೋಗಿದ್ದ. ಮನೆಯಿಂದ ಹೊರಡೋ ಮುನ್ನ ತಾಯಿ ಫೋನ್ ನಲ್ಲಿ ಮಲ್ಪೆ (Malpe), ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿದ್ದ. ಬಳಿಕ ಮನೆಯಲ್ಲಿದ್ದ ಬಟ್ಟೆಗಳನ್ನ ತೆಗೆದುಕೊಂಡು ಹೋಗಿದ್ದಾನೆ. ಆದಿತ್ಯಾ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇತ್ತ ಮಗ ಮಿಸ್ಸಿಂಗ್ ಆದ ಬೆನ್ನಲ್ಲೆ ಪೋಷಕರು ಜ್ಯೋತಿಷ್ಯದ ಮೊರೆ ಹೋಗಿದ್ದಾರೆ. ಈ ವೇಳೆ ಜ್ಯೋತೀಷಿ ದಕ್ಷಿಣ ಕನ್ನಡ (Dakshina Kannada) ಭಾಗದಲ್ಲಿದ್ದಾನೆಂದು ಹೇಳಿದ್ದಾರೆ. ಅಂತೆಯೇ ಜ್ಯೋತೀಷಿ ಮಾತು ಕೇಳಿ ಪೋಷಕರು ಕರಾವಳಿ ಭಾಗಕ್ಕೆ ಮಗನನ್ನ ಹುಡುಕಲು ಹೊರಟಿದ್ದಾರೆ. ದಕ್ಷಿಣ ಕನ್ನಡ, ಉಡುಪಿ (Udupi) ಭಾಗದಲ್ಲಿ ಪೋಷಕರು ಆದಿತ್ಯನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಾಲಿನ ದರ ಪ್ರತಿ ಲೀಟರ್ಗೆ 5 ರೂ. ಹೆಚ್ಚಳಕ್ಕೆ ಬೇಡಿಕೆ
ಆರ್ಟಿ ನಗರ ಸೇರಿದಂತೆ ಮಲ್ಪೆ ಭಾಗದ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಬಾಲಕ ಮೈಸೂರು ಭಾಗದಲ್ಲಿ ಇದ್ದಾನೆಂದು ಮಾಹಿತಿ ಸಿಕ್ಕದೆ. ಆದರೆ ಇನ್ನೂ ಕೂಡ ನಿಖರತೆ ಇಲ್ಲ. ಹಗಲು-ರಾತ್ರಿ ಮೈಸೂರು (Mysuru), ಕರಾವಳಿ ಭಾಗದಲ್ಲಿ ಪೊಲೀಸರ ಜೊತೆ ಪೋಷಕರು ಹುಡುಕಾಟ ನಡೆಸುತ್ತಿದ್ದಾರೆ.
ಈ ಸಂಬಂಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 
			
 
		 
		 
                                
                              
		