ಹಾಲಿನ ದರ ಪ್ರತಿ ಲೀಟರ್‌ಗೆ 5 ರೂ. ಹೆಚ್ಚಳಕ್ಕೆ ಬೇಡಿಕೆ

Public TV
1 Min Read

ಬೆಂಗಳೂರು: ರೈತರಿಗೆ ಕೊಡುತ್ತಿದ್ದ ಹಾಲಿನ ಪ್ರೋತ್ಸಾಹ ಧನ ಕಡಿತಗೊಳಿಸಿ ವಿರೋಧಕ್ಕೆ ಕಾರಣವಾಗಿದ್ದ ಹಾಲು ಒಕ್ಕೂಟ ಸಿಎಂ ಸೂಚನೆ ಮೇರೆಗೆ ಇದೀಗ ಹಾಲಿನ ಪ್ರೋತ್ಸಾಹ ಧನ ನೀಡೋದಕ್ಕೆ ಮುಂದಾಗಿದೆ. ಆದರೆ ಈಗ ಹಾಲು ಒಕ್ಕೂಟ ಸರ್ಕಾರಕ್ಕೊಂದು ಕಂಡಿಷನ್ ಕೂಡ ಹಾಕಿದೆ. ಗ್ರಾಹಕರಿಗೆ ಬಿಗ್ ಶಾಕ್ ಕೊಡುವ ರೀತಿಯಲ್ಲಿ ಕಾಣಿಸ್ತಾ ಇದೆ.

ಬೆಲೆಯೇರಿಕೆ ಬಿಸಿ ಜನರನ್ನು ನಿರಂತರವಾಗಿ ಸುಡುತ್ತಿದೆ. ಇದರ ಮಧ್ಯೆ ಈಗ ಹಾಲಿನ ದರ (Milk Price) ಏರಿಕೆಯ ಭೀತಿ ಜನರಿಗೆ ಕಾಡುತ್ತಿದೆ. ಯಾಕೆಂದ್ರೆ ಹಾಲು ಒಕ್ಕೂಟಗಳು ನಷ್ಟದ ಕಾರಣಕ್ಕೆ ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ನಿಲ್ಲಿಸೋಕೆ ತಯಾರಾಗಿದ್ದವು. ಇದಕ್ಕೆ ದೊಡ್ಡ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿಎಂ (Siddaramaiah) ಸೂಚನೆಯ ಮೇರೆಗೆ ಕಡಿತಗೊಳಿಸಿದ ದರವನ್ನು ಮತ್ತೆ ನೀಡಲು ಒಕ್ಕೂಟಗಳು ಮುಂದಾಗಿದೆ. ಆದರೆ ಸರ್ಕಾರದ ಮುಂದೆ ಈಗ ದರ ಏರಿಕೆಯ ಪ್ರಸ್ತಾವನೆ ಇಡಲು ತಯಾರಾಗಿದೆ. ನಿತ್ಯವೂ 16 ಲಕ್ಷ ನಷ್ಟದಲ್ಲಿ ನಡೆಯುತ್ತಿದೆ. ಇದು ಕೆಎಂಎಫ್‍ (KMF) ನ ಹಾದಿಗೆ ಕಷ್ಟವಾಗಲಿದೆ. ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಲು ನಿರ್ಧಾರ ಮಾಡಲು ನಿರ್ಧರಿಸಿದೆ.

ಹಾಲಿನ ದರ ಏರಿಕೆ ಅನಿವಾರ್ಯತೆ ಅನ್ನೋದು ಹಾಲು ಒಕ್ಕೂಟದ ಮಾತು. ಆದರೆ ಗ್ರಾಹಕರು ಮಾತ್ರ ಇದಕ್ಕೆ ತಯಾರಾಗಿಲ್ಲ. ಅತ್ತ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರ ದರ ಏರಿಕೆಯತ್ತ ಮನಸು ಮಾಡೋದು ಅನುಮಾನ. ಇದನ್ನೂ ಓದಿ: ವಿಧಾನಸಭೆ ಗೆದ್ದ ಕಾಂಗ್ರೆಸ್‍ಗೆ ಲೋಕಸಭೆಯೇ ಟಾರ್ಗೆಟ್- ವಿವಾದ ಸೃಷ್ಠಿಸದಂತೆ ಹೈಕಮಾಂಡ್ ಸೂಚನೆ

ರೈತರ ಏಳಿಗೆ ಹಾಗೂ ಕನ್ನಡಿಗರ ಮನೆಮಾತಾಗಿರುವ ನಂದಿನಿ ನಷ್ಟದ ಹಾದಿಯಲ್ಲಿದೆ ಅನ್ನೋದು ಕೊಂಚ ಶಾಕಿಂಗ್. ರೈತರ ಸಂಸ್ಥೆ ಕನ್ಮಡಿಗರ ಅಸ್ಮಿತೆಯ ಸಂಕೇತವಾಗಿರುವ ಕೆಎಂಎಫ್ ಅನ್ನು ಉದ್ಧಾರ ಮಾಡೋಕೆ ಕೈ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತೆ ಅನ್ನೋದು ನೋಡಬೇಕು.

 

Share This Article