ಜುಲೈ 7 ರಂದು ಬಜೆಟ್‌ ಮಂಡನೆ: ಸಿದ್ದರಾಮಯ್ಯ

Public TV
1 Min Read

ದಾವಣಗೆರೆ: ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್‌ನ್ನು (Karnataka) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜುಲೈ 7 ರಂದು ಮಂಡನೆ ಮಾಡಲಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಬಜೆಟ್‌ ಅಧಿವೇಶನ (Budget Session) ಬಗ್ಗೆ ಇನ್ನೂ ಕ್ಯಾಬಿನೆಟ್‌ನಲ್ಲಿ (Cabinet) ತೀರ್ಮಾನ ಮಾಡಿಲ್ಲ. ಆದರೆ ಜುಲೈ 3 ರಂದು ಬಜೆಟ್ ಅಧಿವೇಶನ ಪ್ರಾರಂಭ ಆಗಲಿದೆ. 1 ವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು ಜುಲೈ 7 ರಂದು ಬಜೆಟ್‌ ಮಂಡನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಉದ್ದೇಶಪೂರ್ವಕವಾಗಿಯೇ ಕೆಡವಲಾಗಿದೆ: 1700 ಕೋಟಿಯ ಸೇತುವೆ ಕುಸಿತಕ್ಕೆ ಬಿಹಾರ ಡಿಸಿಎಂ ಸಮರ್ಥನೆ

 

ಬಜೆಟ್ ಗಾತ್ರ ಎಷ್ಟು ಇದೆ ಎನ್ನುವುದು ಚರ್ಚೆ ಮಾಡುತ್ತೇವೆ. ಈಗಿರುವ ಬಜೆಟ್ ಬಿಜೆಪಿಯವರ ಚುನಾವಣೆ ಬಜೆಟ್ ಆಗಿತ್ತು. ಬಜೆಟ್‌ ಬಳಿಕ ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಹೇಳಿದರು.

Share This Article