ಯುವತಿಯ ಶವ ಕೆರೆಯಲ್ಲಿ ಪತ್ತೆ- ಆತ್ಮಹತ್ಯೆ ಶಂಕೆ

Public TV
1 Min Read

ಮಂಡ್ಯ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಯುವತಿಯೋರ್ವಳ ಶವ ಕೆರೆಯಲ್ಲಿ ಪತ್ತೆಯಾಗಿದೆ.

ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದ ಚಾಂದಿನಿ (22) ಮೃತ ಯುವತಿ. ಈಕೆ ನಂಜನಗೂಡು (Nanjangud) ಮೂಲದ ಯುವತಿ ಎಂದು ಗುರುತು ಪತ್ತೆಯಾಗಿದ್ದು, ಬೂದನೂರು (Budanur) ಗ್ರಾಮದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕೆರೆಯಲ್ಲಿ (Lake) ಶವವಾಗಿ ಪತ್ತೆಯಾಗಿದ್ದಾಳೆ. ಭಾನುವಾರ ಮಧ್ಯಾಹ್ನ ಯುವಕನೊಬ್ಬನೊಂದಿಗೆ ಬೈಕಿನಲ್ಲಿ ಬಂದ ಯುವತಿ ಕೆಲಕಾಲ ಕೆರೆಯ ಬಳಿ ಕುಳಿತುರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪರ್, ಕಾರು ಮಧ್ಯೆ ಭೀಕರ ಅಪಘಾತ – ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

ಬಳಿಕ ಯುವತಿ ತನ್ನ ಬ್ಯಾಗ್, ಚಪ್ಪಲಿ ಕೆರೆ ದಡದ ಮೇಲಿರಿಸಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಸಂಜೆ ಕೆರೆ ದಡದಲ್ಲಿದ್ದ ಬ್ಯಾಗ್ ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯುವತಿಯ ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿ ಮಂಡ್ಯ (Mandya) ಮಿಮ್ಸ್ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಎಣ್ಣೆ ಹೊಡಿಯೋ ವಿಚಾರಕ್ಕೆ ಗಲಾಟೆ- ಬಾರ್ ಕ್ಯಾಶಿಯರ್ ಹತ್ಯೆ

Share This Article