ಶಹಾಪುರದಲ್ಲಿ 20 ಟನ್ ಪಡಿತರ ಅಕ್ಕಿ ಕಳ್ಳತನ ಪ್ರಕರಣ – ಖಾಲಿ ಲಾರಿ ಬಿಟ್ಟು ಖದೀಮರು ಪರಾರಿ

Public TV
1 Min Read

ಯಾದಗಿರಿ: ಜಿಲ್ಲೆಯ ಶಹಾಪುರ (Shahapura) ನಗರದ ಎಪಿಎಂಸಿ ಬಳಿ ಅನ್ನಭಾಗ್ಯ ಅಕ್ಕಿ (Ration Rice) ಲೋಡ್ ಆಗಿದ್ದ ಲಾರಿಯನ್ನು (Lorry) ಮೇ. 29ರಂದು ರಾತ್ರಿ ಕಳ್ಳರು ಕದ್ದು ಪರಾರಿಯಾಗಿದ್ದರು. ಇದೀಗ ತಾಲೂಕಿನ ಹೊರ್ತಿ ಗ್ರಾಮದ ಹೊರವಲಯದಲ್ಲಿ ಖಾಲಿ ಲಾರಿ ಪತ್ತೆಯಾಗಿದೆ.

ಲಾರಿಯಲ್ಲಿ ಲೋಡ್ ಆಗಿದ್ದ 7.50 ಲಕ್ಷ ರೂ. ಮೌಲ್ಯದ 20 ಟನ್ ಸರ್ಕಾರದ ಪಡಿತರ ಅಕ್ಕಿಯನ್ನು ಮಾತ್ರ ಎಗರಿಸಿರುವ ಕಳ್ಳರು ಖಾಲಿ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದಾರೆ. ಶಹಾಪುರ ಪೊಲೀಸರು ಇದೀಗ ವಿಶೇಷ ತಂಡ ರಚಿಸಿ ಚಾಲಾಕಿ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.

ಕಳ್ಳತನವಾಗಿದ್ದ ಲಾರಿ ಬಿಟ್ಟು ಹೋದದ್ದನ್ನು ನೋಡಿದರೆ ಇದು ಕಳ್ಳರು ಮಾಡಿದ ಕೆಲಸವಲ್ಲ. ಪಡಿತರ ಅಕ್ಕಿಯ ದಂಧೆಕೋರರ ಕೈವಾಡ ಈ ಕೃತ್ಯದ ಹಿಂದಿದೆ ಇದೆ ಎನ್ನುವ ಅನುಮಾನ ದಟ್ಟವಾಗಿ ಕಾಡಲಾರಂಭಿಸಿದೆ. ಇದನ್ನೂ ಓದಿ: ಪ್ರತಾಪ್ ಸಿಂಹ ಅಣ್ಣನವರು ಸರ್ವಜ್ಞ ಇದ್ದಂತೆ: ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು

ಅಕ್ಕಿ ಲಾರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಪುರ ಶಾಸಕ ಹಾಗೂ ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ಯಮಗಳ ಸಚಿವ ಶರಣಬಸಪ್ಪ ದರ್ಶನಾಪುರ ಪ್ರತಿಕ್ರಿಯಿಸಿ, ಈಗಾಗಲೇ ಖಾಲಿ ಲಾರಿ ಸಿಕ್ಕಿದೆ. ಅನ್ನಭಾಗ್ಯ ಅಕ್ಕಿ ಸಾಗಿಸುವ ಲಾರಿಗೆ ಜಿಪಿಎಸ್ ಅಳವಡಿಸಿರಬೇಕು. ಈ ವಿಷಯದಲ್ಲಿ ಅಧಿಕಾರಿಗಳ ನಿರ್ಲಕ್ಷ ಇದೆಯೋ, ಗುತ್ತಿಗೆದಾರರು ನಿಯಮ ಉಲ್ಲಂಘನೆ ಮಾಡಿದ್ದಾರೋ ಎಲ್ಲವನ್ನು ಕೂಡ ಕೂಲಕುಂಷವಾಗಿ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಇಂಟರ್‌ಲಾಕ್ ಸಿಸ್ಟಮ್ ಸಮಸ್ಯೆಯಿಂದ ರೈಲು ಅಪಘಾತ ಸಂಭವಿಸಿದೆ – ರೈಲ್ವೇ ಸಚಿವ ಅಶ್ವಿನಿ ವೈಷ್ಣವ್

Share This Article