ದುಬಾರಿ ಕಾರು ಖರೀದಿಸಿದ ನಟಿ ಬಿಪಾಶಾ ಬಸು

By
1 Min Read

ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu) ಅವರು ಕೆಲ ತಿಂಗಳುಗಳ ಹಿಂದೆ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮುದ್ದಿನ ಮಗಳು ದೇವಿಗಾಗಿ ದುಬಾರಿ ಕಾರನ್ನ ನಟಿ ಖರೀದಿಸಿದ್ದಾರೆ.

ಹಿಂದಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಬಿಪಾಶಾ ಬಸು (Bipasha Basu) ಅವರು ನಟ ಕರಣ್ ಗ್ರೋವರ್ ಅವರನ್ನ ಪ್ರೀತಿಸಿ ಮದುವೆಯಾದರು. ಇದೀಗ ದೇವಿ (Devi) ಎಂಬ ಮುದ್ದಾದ ಮಗಳಿದ್ದಾಳೆ. ಇದನ್ನೂ ಓದಿ:ಕಡಲ ಕಿನಾರೆಯಲ್ಲಿ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್

 

View this post on Instagram

 

A post shared by Bipasha Basu (@bipashabasu)

ಸದ್ಯ ಬಿಪಾಶಾ ಬಸು ಅವರು Audi Q7 ಕಾರನ್ನ ಮಗಳಿಗಾಗಿ ಖರೀದಿಸಿದ್ದಾರೆ. ಕಾರಿನ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 90ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ‘ಅಡಿ ಕ್ಯೂ 7’ ಕಾರನ್ನ ಬಿಪಾಶಾ ದಂಪತಿ ಖರೀದಿ ಮಾಡಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೆಚ್ಚಿನ ನಟಿಯ ಮನೆಗೆ ದುಬಾರಿ ಕಾರು ಬಂದಿರೋದ್ದಕ್ಕೆ ಫ್ಯಾನ್ಸ್‌ ಕೂಡ ಶುಭ ಹಾರೈಸಿದ್ದಾರೆ.

ಮಗಳ ಆರೈಕೆ ಅಂತಾ ಸಿನಿಮಾಗಳಿಂದ ನಟಿ ದೂರವಿದ್ದಾರೆ. ಉತ್ತಮ ಸ್ಕ್ರೀಪ್ಟ್‌ ಸಿಕ್ಕಿದ್ದಲ್ಲಿ ಮತ್ತೆ ಚಿತ್ರರಂಗಕ್ಕೆ ಬಿಪಾಶಾ ಕಂಬ್ಯಾಕ್ ಆಗಲಿದ್ದಾರೆ.

Share This Article