ಶಾಲೆಗೆ ಕಾಲಿಟ್ಟ ಮೇಘನಾ ರಾಜ್‌ ಪುತ್ರ ರಾಯನ್‌

Public TV
1 Min Read

ಸ್ಯಾಂಡಲ್‌ವುಡ್ (Sandalwood) ನಟ ಚಿರಂಜೀವಿ ಸರ್ಜಾ, ಮೇಘನಾ ರಾಜ್ (Meghana Raj) ಪುತ್ರ ರಾಯನ್ ರಾಜ್ ಸರ್ಜಾ (Rayaan Raj Sarja) ಶಾಲೆಗೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಮೇಘನಾ ರಾಜ್, ಪೋಸ್ಟ್ ಹಂಚಿಕೊಂಡು ಭಾವುಕರಾಗಿದ್ದಾರೆ. ಸದ್ಯ ನಟಿಯ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಸರ್ಜಾ ಕುಟುಂಬದ ಖುಷಿ ರಾಯನ್, ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮಗನ ಆರೈಕೆಯಲ್ಲಿ ತನ್ನ ನೋವನೆಲ್ಲಾ ಮರೆಯಲು ನಟಿ ಮೇಘನಾ ಪ್ರಯತ್ನಿಸುತ್ತಿದ್ದಾರೆ. ಮಗನ ಖುಷಿಯಲ್ಲಿ ತನ್ನ ಖುಷಿಯನ್ನ ಕಾಣುತ್ತಿದ್ದಾರೆ. ಹೀಗಿರುವಾಗ ಪುತ್ರ ರಾಯನ್ ಶಾಲೆಗೆ ಕಾಲಿಟ್ಟಿರುವ ಬಗ್ಗೆ ನಟಿ ಪೋಸ್ಟ್ ಶೇರ್ ಮಾಡಿದ್ದಾರೆ.

ನಾವು ಪೋಷಕರಾದ ಮೇಲೆ ಮಕ್ಕಳು ಮಾತ್ರವಲ್ಲ ನಾವು ಕೂಡ ಜೀವನ ಪ್ರತಿಯೊಂದು ಮೈಲಿಗಲ್ಲು ದಾಟುತ್ತೀವಿ ಎಂದು ಮೇಘನಾ ಬರೆದುಕೊಂಡಿದ್ದಾರೆ. ಇಂದು ನಮ್ಮ ಜೀವನದ ತುಂಬಾ ಸ್ಪೆಷಲ್ ದಿನವಾಗಿದೆ. ರಾಯನ್ ರಾಜ್ ಸರ್ಜಾ ಸ್ಕೂಲ್‌ನ ಮೊದಲ ದಿನ ಇಂದು. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ವಿದ್ಯಾಭ್ಯಾಸ, ಜ್ಞಾನ ಹಾಗೂ ಜೀವನದ ಅತಿ ಅಮೂಲ್ಯವಾದ ಪಾಠಗಳನ್ನು ಕಲಿಯುವುದ್ದಕ್ಕೆ ರಾಯನ್ ಮೊದಲ ಹೆಜ್ಜೆ ಇಡುತ್ತಿದ್ದಾನೆ. ನಿಮ್ಮ ಹಾರೈಕೆ ಮತ್ತು ಪ್ರೀತಿ ಅವನ ಮೇಲಿರಲಿ ಎಂದು ಮೇಘನಾ ರಾಜ್ ಹೇಳಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಮಲಿ’ ನಟಿ ಯಶಸ್ವಿನಿ

 

View this post on Instagram

 

A post shared by Meghana Raj Sarja (@megsraj)

ಇನ್ನೂ ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ (Tatsama Tadbhava) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಆಗಿದ್ದಾರೆ. ಫೀಮೇಲ್ ಓರಿಯೆಂಟೆಡ್ ಚಿತ್ರದಲ್ಲಿ ಮೇಘನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share This Article