ಸೈಬರ್ ಕಳ್ಳರ ಕೈಚಳಕ – ಪೊಲೀಸ್ ಇಲಾಖೆ ಹೆಸರಿನಲ್ಲೇ ಫೇಕ್ ಫೇಸ್‍ಬುಕ್ ಅಕೌಂಟ್ ಸೃಷ್ಠಿ

Public TV
1 Min Read

ಬೀದರ್: ಪೊಲೀಸ್ ಇಲಾಖೆಯ (Police Department) ಹೆಸರಿನಲ್ಲಿ ನಕಲಿ ಫೇಸ್‍ಬುಕ್ (Facebook) ಅಕೌಂಟ್ ಓಪನ್ ಮಾಡಿರುವ ಪ್ರಕರಣ ಬೀದರ್‌ನಲ್ಲಿ (Bidar) ಸೋಮವಾರ ಬೆಳಕಿಗೆ ಬಂದಿದೆ.

ಸೈಬರ್ ವಂಚಕರು (Cyber Crime), ಬೀದರ್ ಎಸ್‍ಪಿ (SP) ಎಂಬ ಹೆಸರಿನಲ್ಲಿ ನಕಲಿ ಫೇಸ್‍ಬುಕ್ ಅಕೌಂಟ್‍ನ್ನು ಸೃಷ್ಠಿಸಿದ್ದಾರೆ. ಅಲ್ಲದೆ ಜಲ್ಲೆಯ ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಇರುವ ಇಲಾಖೆಯ ಅಕೌಂಟ್‍ನಲ್ಲಿ ಇರುವ ಸ್ನೇಹಿತರನ್ನು ಗುರಿಯಾಗಿಸಿ ರಿಕ್ವೆಸ್ಟ್ ಕಳುಹಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ!

ಈ ಬಗ್ಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಅನಧಿಕೃತ ಫೇಸ್‍ಬುಕ್ ಅಕೌಂಟ್‍ನಿಂದ ಬರುತ್ತಿರುವ ರಿಕ್ವೆಸ್ಟ್‌ಗೆ ಸ್ಪಂದಿಸದಂತೆ ತಿಳಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಇಲಾಖೆ, ಸಾರ್ವಜನಿಕರು ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದಿದೆ. ಅಲ್ಲದೆ ಈ ರೀತಿ ಫೇಕ್ ಅಕೌಂಟ್ ಸೃಷ್ಠಿಸಿದವರ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಇಲಾಖೆ ನೀಡಿದೆ. ಇದನ್ನೂ ಓದಿ: 5, 6 ವರ್ಷದ ಬಾಲಕಿಯರ ಮೇಲೆ ಸಂಬಂಧಿಕನಿಂದಲೇ ರೇಪ್‌ – ಆರೋಪಿ ಎಸ್ಕೇಪ್‌

Share This Article