ಗಾಬರಿ ಬೇಡ, ಊಹಾಪೋಹಗಳಿಗೆ ಕಿವಿಗೊಡಬೇಡಿ: ಡಿಕೆಶಿ

Public TV
1 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಸ್ಕೀಂ ಬಗ್ಗೆ ಪ್ರತಿನಿತ್ಯ ಚರ್ಚೆಯಾಗುತ್ತಿದ್ದು, ಈ ಸಂಬಂಧ ಗಾಬರಿಯಾಗುವುದು ಬೇಡ. ಯಾರೂ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಮದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ತಿಳಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗ್ಯಾರಂಟಿ ಸ್ಕೀಂ (Guarantee Scheem) ಜಾರಿ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದರು. ಯಾರು ಗಾಬರಿ ಆಗೋದು ಬೇಡ, ಊಹಾಪೋಹಗಳಿಗೆ ಕಿವಿಗೊಡೋದು ಬೇಡ. ನಾವು ಏನ್ ಹೇಳಿದ್ದೇವೆ ಅದನ್ನ ಮಾಡ್ತೀವಿ ಎಂದು ಭರವಸೆ ನೀಡಿದರು. ಅಲ್ಲದೆ ಯಾರು ಬೇಕಾದರೂ ಚರ್ಚೆ ಮಾಡಲಿ. ಬೈಯೋರು ಬೈಯಲಿ. ಎಲ್ಲರಿಗೂ ಮಾತಾಡೋಕೆ ವಾಕ್ ಸ್ವಾತಂತ್ರ್ಯ ಇದೆ ಎಂದು ಡಿಕೆಶಿ ಹೇಳಿದರು.

ಚುನಾವಣೆಯ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯನ್ನು ಕಾಂಗ್ರೆಸ್‍ನವರು 5 ಗ್ಯಾರಂಟಿಗಳನ್ನು ಘೋಷಿಸಿದ್ದರು. ಆದರೆ ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಯಾವುದೇ ಗ್ಯಾಂಟಿಗಳನ್ನು ಜಾರಿಗೆ ತಂದಿಲ್ಲ. ಈ ಮಧ್ಯೆ ಹಳ್ಳಿಗಳಲ್ಲಿ ಜನ ಕರೆಮಟ್ ಬಿಲ್ ಕಟ್ಟಲ್ಲವೆಮದು ಹಠಕ್ಕೆ ಬಿದ್ದಿದ್ದಾರೆ. ಅಲ್ಲದೆ ಬಿಲ್ ಕೇಳಲು ಹೋದ ಸಿಬ್ಬಂದಿ ಮೇಲೆ ಹಲ್ಲೆಯನ್ನೂ ಮಾಡುತ್ತಿದ್ದಾರೆ. ಇತ್ತ ಮಹಿಳೆಯರು ಬಸ್ ಪ್ರಯಾಣ ಉಚಿತವೆಂದು ಕಾಂಗ್ರೆಸ್‍ನವರು ಹೇಳಿದ್ದಾರೆ. ಹೀಗಾಗಿ ಟಿಕೆಟ್ ತೆಗೆದುಕೊಳ್ಳಲ್ಲ ಎಮದು ನಿರ್ವಾಕರ ಮುಂದೆ ಜಗಳವಾಡುತ್ತಿದ್ದಾರೆ.

 

Share This Article